News Karnataka Kannada
Thursday, May 02 2024
ಅಂಕಣ

ಮಹಿಳೆಯರ ಗಮನ ಸೆಳೆಯುತ್ತಿದೆ ಟ್ರೆಂಡೀ ಬ್ಲೌಸ್ ಡಿಸೈನ್

Trendy blouse design attracting women's attention
Photo Credit : Pixabay

ಈಗ ಏನೇ ಮಾಡಿದರು ಅದು ಫ್ಯಾಷನ್ ಅನ್ನೋ ಕಾಲದಲ್ಲಿ ನಾವಿದ್ದೇವೆ. ಹೊಸದು ಏನೇ ಮಾರ್ಕೆಟ್ ಗೆ ಬಂದರು ಅದು ಟ್ರೆಂಡ್ ಆಗಿ ಬಿಡುತ್ತದೆ. ಜನರು ಅದಕ್ಕೆ ಬೇಗನೆ ಒಗ್ಗಿಕೊಂಡು ತಾವೂ ಅದನ್ನೇ ಅನುಸರಿಕೊಳ್ಳುತ್ತಾರೆ. ಅದಕ್ಕೆ ಒಂದು ಉದಾಹರಣೆಯಾಗಿ ಸೀರೆ ಬ್ಲೌಸ್ ಡಿಸೈನ್ ಅನ್ನು ತೆಗೆದು ಕೊಳ್ಳಬಹುದು. ಈಗ ಮಹಿಳೆಯರು ಸೀರೆಗಿಂತಲೂ ಹೆಚ್ಚು ಸೀರೆ ಬ್ಲೌಸ್ ಗೆ ಪ್ರಾಮುಖ್ಯತೆ ನೀಡುತ್ತಾರೆ.

ಇಂದು ಮಹಿಳೆಯರು ಸಿಂಪಲ್ ಸೀರೆಯನ್ನು ಖರೀದಿಸುದೇ ಹೆಚ್ಚು. ಆ ಸಿಂಪಲ್ ಸೀರೆಗೆ ಗ್ರಾಂಡ್ ಲುಕ್ ನೀಡಲು ಬ್ಲೌಸ್ ಗೆ ಗ್ರಾಂಡ್ ಎಂಬ್ರೈಡಿಂಗ್ ಮಾಡಿಸುತ್ತಾರೆ. ಇದನ್ನು ಉಡುವಾಗ ಒಳ್ಳೆ ಲುಕ್ ನೀಡುತ್ತದೆ.

ಬ್ಲೌಸ್‍ಗಳಲ್ಲಿ ವೆರೈಟಿ ಡಿಸೈನ್‍ಗಳಿಗೆ. ಹಾಗಾಗಿ ಬ್ಲೌಸ್ ಡಿಸೈನ್ ಆಯ್ಕೆ ಮಾಡುವ ವೇಳೆ ಬಹಳ ಜಾಗೃತರಾಗಿರಬೇಕು. ಅದರಲ್ಲಿಯೂ ಬ್ಲೌಸ್ ಸ್ಲೀವ್ಸ್, ಸ್ಲೀವ್‍ಲೆಸ್ ಡಿಸೈನ್ ನೋಡುವವರನ್ನೂ ಬೆರಗಾಗಿಸುವಂತೆ ಮಾಡುತ್ತದೆ. ಒಂದು ಬ್ಲೌಸ್‍ಗೆ ಕಂಪ್ಲೀಟ್ ಲುಕ್ ನೀಡುವುದೇ ಸ್ಲೀವ್ಸ್. ಆದರೆ ಯಾವ ಸೀರೆಗೆ ಯಾವ ರೀತಿಯ ಸ್ಲೀವ್ಸ್ ಸೂಕ್ತ ಎಂದು ನಾವು ತಿಳಿದುಕೊಳ್ಳಬೇಕು.

ಇಂದು ಮಹಿಳೆಯರಿಗೆ ಸರಿಹೊಂದುವಂತೆ ಬಗೆ ಬಗೆಯ ಸೀರೆಗಳು ಮಾರುಕಟ್ಟೆಯಲ್ಲಿ ಇವೆ. ಅದರಂತೆ ಸೀರೆಗೆ ಎಷ್ಟು ಬೆಲೆಯೋ, ಅದಕ್ಕಿಂತ ಹೆಚ್ಚು ಬೆಲೆ ಟೈಲರ್ ಬಳಿ ಹೊಲಿಸುವ ಬ್ಲೌಸ್ ಗೆ ಕೊಡಬೇಕಾಗುತ್ತದೆ. ಹೌದು, ಇತ್ತೀಚಿನ ದಿನಗಳಲ್ಲಿ ನಾವು 2000ರೂ ಕೊಟ್ಟು ಸೀರೆಯನ್ನು ತೆಗೆದುಕೊಂಡು ಬಂದರೇ, ಬ್ಲೌಸ್ ಗೆ ಡಿಸೈನ್, ಹ್ಯಾಂಡ್ ವರ್ಕ್, ಬುಟ್ಟ, ಟೈ ಹೀಗೆ ಒಂದೊಂದಕ್ಕೂ ಲೆಕ್ಕಹಾಕಿದರೂ 4000ರೂ. ಖರ್ಚಾಗುತ್ತದೆ. ಸಿಂಪಲ್ ಡಿಸೈನ್ಸ್ ಅಂದ್ರು 800 ಅಥವಾ 900 ರೂ. ಆಗೆ ಆಗುತ್ತದೆ.

ಇನ್ನು ಕೆಲವರು ಲೆಹೆಂಗಾಗಳಿಗೆ ಮಾತ್ರ ಡಿಸೈನ್ಸ್ ಸ್ಲೀವ್ಸ್ ಬ್ಲೌಸ್ ಸೂಕ್ತ ಎಂದು ಹೇಳುತ್ತಾರೆ ಆದರೆ ಲೆಹೆಂಗಾಗೇ ನೀಡುವಷ್ಟೇ ಲುಕ್ ಸೀರೆಗೂ ಕೂಡ ಡಿಸೈನ್ಸ್ ಬ್ಲೌಸ್ ನೀಡುತ್ತದೆ.

ಇಂದು ಮಹಿಳೆಯರು ಹೆಚ್ಚು ಆಕರ್ಷಿತರಾಗಿರುವುದು, ಪಫ್ ಸ್ಲೀವ್ಸ್ ಬ್ಲೌಸ್ ಗೆ. ಈ ಪಫ್ ಸ್ಲೀವ್ ನಲ್ಲಿ ವೆರೈಟಿ ಪಫ್ ಗಳು ಇದೆ. ಆದ್ದರಿಂದ ಮಹಿಳೆಯರು ಇದನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ನೆಟ್ ಬ್ಲೌಸ್ ಸ್ಲೀವ್ಸ್ ಡಿಸೈನ್ ಹೆಚ್ಚಾಗಿ ಯಂಗ್ ಹುಡುಗಿಯರಿಗೆ ಬಹು ಬೇಗ ಇಷ್ಟವಾಗುತ್ತದೆ. ಸದ್ಯದ ಫ್ಯಾಶನ್‍ಗಳಲ್ಲಿ ಈ ಎರಡು ಡಿಸೈನ್‍ನನ್ನು ಹೆಚ್ಚಾಗಿ ಮಹಿಳೆಯರು ಆಯ್ಕೆ ಮಾಡುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು