News Karnataka Kannada
Sunday, May 05 2024
ಅಂಕಣ

ಮುಖದ ಸೌಂದರ್ಯಕ್ಕೆ ಶ್ರೀ ಗಂಧದ ಫೇಸ್ ಪ್ಯಾಕ್

Sandalwood face pack for face beauty
Photo Credit : Freepik

ಶ್ರೀಗಂಧವನ್ನು ಸೌಂದರ್ಯವರ್ಧಕವಾಗಿ ಬಳಸಲಾಗುತ್ತದೆ. ಇದು ಮುಖದ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಗಂಧ ಒಂದು ನೈಸರ್ಗಿಕ ಸೌಂದರ್ಯ ವರ್ಧಕವೂ ಆಗಿರುವ ಕಾರಣ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಗಂಧಯುಕ್ತ ಸೌಂದರ್ಯ ವರ್ಧಕಗಳು ಇದೇ ಕಾರಣಕ್ಕಾಗಿ ಹೆಚ್ಚು ಜನಪ್ರಿಯವಾಗಿದೆ.

ಈ ಶ್ರೀಗಂಧವನ್ನು ಬಳಸಿಕೊಂಡು ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು, ಮೂರು ಚಮಚ ಶ್ರೀಗಂಧದ ಹುಡಿಗೆ ಒಂದು ಚಮಚ ಅರಿಶಿನ ಹುಡಿಯನ್ನು ಹಾಕಿಕೊಂಡು ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ನೀರು ಹಾಕಿಕೊಂಡು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಕುತ್ತಿಗೆಗೆ ಕೂಡ ಇದನ್ನು ಹಚ್ಚಿಕೊಳ್ಳಿ 20 ನಿಮಿಷ ಬಿಟ್ಟು ಮುಖ ತೊಳೆಯಿರಿ ಇದರಿಂದ ಮೊಡವೆ, ಕಲೆಗಳು ನಿವಾರಣೆಯಾಗುತ್ತದೆ.

ನೀರು ಮತ್ತು ಗಂಧದ ಮಿಶ್ರಣವನ್ನು ಮುಖದ ಮೇಲೆ ಹಚ್ಚುದರಿಂದ, ಬಿಸಿಲಿನಿಂದ ಚರ್ಮದ ಮೇಲೆ ಬೀಳುವ ಬೊಕ್ಕೆಗಳು ಏಳದಂತೆ ಮತ್ತು ಎದ್ದಾಗ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಒಂದು ಚಮಚ ಮುಲ್ತಾನಿ ಮಿಟ್ಟಿ, ಶ್ರೀಗಂಧದ ಪುಡಿ, ಅರ್ಧ ಚಮಚ ಅರಿಶಿಣ ಪುಡಿ, ಎಲ್ಲವನ್ನೂ ಚೆನ್ನಾಗಿ ಕಲೆಸಿ, ಆನಂತರ, ನೀರಿನೊಂದಿಗೆ ಬೆರೆಸಿ, ಸ್ವಲ್ಪ ದಪ್ಪವಾಗಿ ಪೇಸ್ಟ್ ತಯಾರಿಸಿ. ನಂತರ, ಮುಖವನ್ನು ಚೆನ್ನಾಗಿ ತೊಳೆದು, ರೋಸ್ ವಾಟರ್‌ನಿಂದ ಮುಖವನ್ನು ಒದ್ದೆ ಮಾಡಿ ಹತ್ತಿಯಿಂದ ಮುಖವನ್ನು ಚೆನ್ನಾಗಿ ಒರೆಸಿಕೊಳ್ಳಿ. ಆನಂತರ, ಫೇಸ್‌ಪ್ಯಾಕನ್ನು ಮುಖ, ಕುತ್ತಿಗೆಗೆ ಹಚ್ಚಿ, ಸುಮಾರು ಇಪ್ಪತ್ತು ನಿಮಿಷಗಳ ಕಾಲ, ಹಾಗೆಯೇ ಬಿಡಿ. ನಂತರದಲ್ಲಿ ತಣ್ಣನೆಯ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಇದರಿಂದ ನಿಮ್ಮ ಹೆಚ್ಚು ಮುಖ ಕಾಂತಿಯುತವಾಗುತ್ತದೆ.

ಎರಡು ಚಮಚ ಶ್ರೀಗಂಧದ ಪುಡಿಯನ್ನು ಒಂದು ಬೌಲ್ ಗೆ ಹಾಕಿ, ಇದಕ್ಕೆ ರೋಸ್ ವಾಟರ್ ಮಿಕ್ಸ್ ಮಾಡಿಕೊಂಡು, ಗಟ್ಟಿಯಾದ ಪೇಸ್ಟ್ ತಯಾರಿಸಿ. ಮುಖವನ್ನು ಚೆನ್ನಾಗಿ ತೊಳೆದು, ತಯಾರಿಸಿದ ಪೇಸ್ಟನ್ನು ತೆಳುವಾಗಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆ ಹಾಗೆಯೇ ಒಣಗಲು ಬಿಡಿ. ನಂತರ, ತಣ್ಣನೆಯ ನೀರಿನಿಂದ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ಇದರಿಂದ ನಿಮ್ಮ ಮುಖದಲ್ಲಿನ ಹೊಳಪು ಹೆಚ್ಚಾಗಿ ಬಿಳಿಯ ಬಣ್ಣ ವೃದ್ಧಿಸುತ್ತದೆ. ಮುಖದಲ್ಲಿನ ಕಪ್ಪು ಕಲೆಗಳು ಮಾಯವಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು