News Karnataka Kannada
Thursday, May 02 2024
ಅಂಕಣ

ಚರ್ಮದ ಕಾಂತಿ ಹೆಚ್ಚಿಸಲು ಕಿವಿಹಣ್ಣಿನ ಫೇಸ್ ಪ್ಯಾಕ್

Kiwifruit face pack to enhance skin glow
Photo Credit : News Kannada

ಕಿವಿಹಣ್ಣು ಆರೋಗ್ಯಕ್ಕೆ ಹೇಗೆ ಉಪಕಾರಿಯೋ ಅದೇ ರೀತಿ ಸೌಂದರ್ಯ ವೃದ್ಧಿಗೂ ಸಹಕಾರಿ. ಸೌಂದರ್ಯದ ಬಗ್ಗೆ ಅತೀವ ಕಾಳಜಿ ಇರುವವರು ಈ ಕಿವಿಹಣ್ಣಿನ ಫೇಸ್ ಪ್ಯಾಕ್ ಟ್ರೈ ಮಾಡಿದರೆ ಉತ್ತಮ ರಿಸಲ್ಟ್ ಪಡೆಯಬಹುದು. ಕಿವಿಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ ಇದಕ್ಕೆ ಸ್ವಲ್ಪ ಮೊಸರು ಮತ್ತು ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ತೆಳುವಾಗಿ ಲೇಪಿಸಿ ಸ್ವಲ್ಪ ಸಮಯದ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ಕಿವಿ ಹಣ್ಣನ್ನು ಕಿವುಚಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ಮಿಶ್ರಣ ಮಾಡಿಕೊಂಡು ಅದನ್ನು ಮುಖದ ಮೇಲೆ ಮಸಾಜ್ ಮಾಡಿ. ಇದೂ ಉತ್ತಮ ರಿಸಲ್ಟ್ ಕೊಡುತ್ತದೆ.

ಬಾಳೆಹಣ್ಣು ಮತ್ತು ಒಂದು ಕಿವಿ ಹಣ್ಣನ್ನು ಕಿವುಚಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಒಂದು ಚಮಚ ಮೊಸರನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಹಾಗೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಒಂದು ಕಿವಿಹಣ್ಣುತೆಗೆದುಕೊಂಡು ಅದಕ್ಕೆ ಎರಡು ಚಮಚ ನಿಂಬೆ ರಸವನ್ನು ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡ ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದರಿಂದ ಕ್ರಮೇಣ ಕಾಂತಿಯುತ ಚರ್ಮವು ನಿಮ್ಮದಾಗುವುದು.

ಒಂದು ಕಿವಿ ಹಣ್ಣನ್ನು ಚೆನ್ನಾಗಿ ಕಿವುಚಿ ಅದಕ್ಕೆ ಅಲೋವೆರಾ ಜೆಲ್ ಸೇರಿಸಿ ನಂತರ ಈ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚಿ ಹೀಗೆ ಮಾಡುವುದರಿಂದ ಮುಖದ ಕಳೆಗಳು ಮಾಯವಾಗಿ ಕಾಂತಿ ಹೆಚ್ಚಾಗುತ್ತದೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು