News Karnataka Kannada
Sunday, April 28 2024
ಅಂಕಣ

ಒಂದೇ ಬದುಕು, ಸಾರ್ಥಕ ಜೀವನ ನಡೆಸಿದರೆ ಸಾಕು

It's enough if life feels worthwhile
Photo Credit : Freepik

ಮನುಷ್ಯ ಎಷ್ಟು ದಿನ ಬದುಕಿದ ಅನ್ನುವುದಕ್ಕಿಂತ ಬದುಕಿದಷ್ಟು ದಿನ ಹೇಗಿದ್ದ ಅನ್ನುವುದು ತುಂಬಾನೇ ಮುಖ್ಯ ಅನಿಸುತ್ತದೆ. ಒಂದಿಷ್ಟು ಸಮಯ ಬದುಕಿದರು ಅದು ಸಾರ್ಥಕ ಎನಿಸುವುದು ಮುಖ್ಯವಾಗಿರುತ್ತದೆ.

ಸಾಮನ್ಯವಾಗಿ ಒಬ್ಬ ಮನುಷ್ಯ ತಾನು ತನ್ನ ಮನೆಯವರ ಬಗ್ಗೆ ಮಾತ್ರ ಯೋಚನೆ ಮಾಡುವುದು. ಆದರೆ ತನ್ನ ಜೊತೆಗೆ ತನ್ನವರು ಎಂದು ಅಂದು ಕೊಂಡಿರುವ ಆಪ್ತರನ್ನು ತನ್ನೊದಿಂಗೆ ಇತರರನ್ನು ಜೊತೆಗೂಡಿಸಿ ಕೈ ಹಿಡಿದು ನಡೆಸುವುವವರನ್ನು ನಾವು ತಂಬಾನೇ ವಿರಳವಾಗಿ ಕಾಣುತ್ತೇವೆ.

ಅವರೊಬ್ಬರು ಜಾಸ್ತಿ ಓದದಿರುವ ವ್ಯಕ್ತಿ. ಆದರೆ ಬದುಕಲು ಎನೂ ಮಾಡಬೇಕು ಎಂದು ತಿಳಿದವರು. ಸಣ್ಣ ಪ್ರಾಯದಲ್ಲೆ ಒಂದಷ್ಟು ಕನಸ್ಸುನ್ನು ಹೊತ್ತು ನಗರಕ್ಕೆ ಬಂದವರು ತಮ್ಮ ಬುದ್ದಿ ಮತ್ತು ವಿವೇಚನ ಶಕ್ತಿಯಿಂದಲೇ ತಮ್ಮ ಮನೆಯನ್ನು ಪೋಷಣೆಯಿಂದ ಸವರಿದವರು.

ಮನೆ, ಮಡದಿ ಮಕ್ಕಳು ಜೊತೆಗೆ ಸಮಾಜವನ್ನೇ ಮುನ್ನಡೆಸುವ ಜವಬ್ದಾರಿಯನ್ನು ಹೊತ್ತು, ಒಂದು ಸುಂದರ ಕನಸ್ಸನ್ನು ಕಂಡವರು. ಯುವಕರಲ್ಲಿ ಸ್ಫೂರ್ತಿಯನ್ನು ತುಂಬಿ ಕೈಲಾದಷ್ಟು ಸಹಾಯ ಹಸ್ತವನ್ನು ನೀಡಿರುತ್ತಾರೆ.

ರಾಜಕೀಯ ಬದುಕಿನಲ್ಲಿಯು ನಿಷ್ಟೆ ಹಾಗೂ ಶಿಸ್ತಿನಿಂದ ಬದುಕಿದವರು. ತನ್ನ ಬೆಂಬಲಿಗರನ್ನು ಸದಾ ಕಾಪಾಡಿಕೊಂಡು ಬಂದಿರುವವರು. ಇಂತಹ ಅಪರೂಪದ ವ್ಯಕ್ತಿ ಇಲ್ಲಾವಾದಗ ಎಲ್ಲವು ಬರಡಾಯಿತ್ತು ಎಂದು ಅನಿಸಿ ಬಿಡುತ್ತದೆ. ಆ ವ್ಯಕ್ತಿ ಇಲ್ಲಾವಾದಗ ನೆರೆದ ಜನ ಅವರ ಪ್ರೀತಿ ವಿಶ್ವಾಸ ಕಂಡವರು ಎಂದು ಗಟ್ಟಿಯಾಗಿ ಭಾಸವಾಗುತ್ತದೆ. ಬದುಕಿನ ಉದ್ದಕ್ಕೂ ಆದರ್ಶವನ್ನು ಪಾಲಿಸಿಕೊಂಡು ಬಂದವರು. ತಮ್ಮ ಸಮುದಾಯದ ಸಂಸ್ಕೃತಿಯನ್ನು ಪುನರ್ ಜೀವನಗೋಳಿಸಿದವರು.

ಎಲ್ಲಾ ಕಷ್ಟವನ್ನೆಲ್ಲ ತಾನೊಬ್ಬನೆ ನುಂಗಿ ಈ ಜಗತ್ತನ್ನೇ ಬಿಟ್ಟು ಹೋಗಿರುವವರ ಬಗ್ಗೆ ಮಾತ್ತಾಡಬೇಕೆಂದರು ಮಾತಿಗಿ ಮಾತು ಬರುತ್ತಿಲ್ಲ, ಬರೆಯಲು ಪದಗಳು ಸಿಗುತ್ತಿಲ್ಲ. ಬದುಕಿದಷ್ಟು ದಿನ ಎಲ್ಲರೊಂದಿಗೂ ಉತ್ತಮವಾಗಿರುವುದು ಲೇಸು. ಮಣ್ಣಲ್ಲಿ ಮಣ್ಣಾಗಿ ಸೇರುವ ಜೀವಕ್ಕೆ ಬೇಕಾಗಿರುವುದು ನೆಮ್ಮದಿಯ ಜೀವನ ಅಷ್ಟೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು