News Karnataka Kannada
Tuesday, May 07 2024
ಅಂಕಣ

ಮುಖದ ಕಾಂತಿ ಹೆಚ್ಚಿಸಲು ಬಳಸಿ ಜೇನುತುಪ್ಪ

Honey used to enhance the glow of the face
Photo Credit :

ಜೇನುತುಪ್ಪ ಆರೋಗ್ಯಕ್ಕೆ ಹೇಗೆ ಉಪಕಾರಿ ಯಾಗಿದೆಯೋ ಅದೇ ರೀತಿ ಸೌಂದರ್ಯ ವರ್ಧಕ ಗುಣವನ್ನು ಹೊಂದಿದೆ. ಜೇನುತುಪ್ಪವು ಎಪ್ಪೋಲಿಯೇಟಿಂಗ್ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಮುಖದ ಮೇಲೆ ಬಳಸಿದರೆ ಸತ್ತ ಚರ್ಮದ ನಿವಾರಿಸುತ್ತದೆ. ಇದು ಮುಖದ ತ್ವಚೆಯನ್ನು ಕಾಂತಿಯುತವಾಗಿಸುತ್ತದೆ. ಮುಖವನ್ನು ತೊಳೆದ ನಂತರ, ಶುದ್ಧ ಜೇನುತುಪ್ಪ ಅಥವಾ ಪಾಶ್ಚರೀಕರಿಸದ ಜೇನುತುಪ್ಪವನ್ನು ಮುಖಕ್ಕೆ ಹಚ್ಚಿ ಹಲವಾರು ನಿಮಿಷಗಳ ಕಾಲ ಚರ್ಮದ ಮೇಲೆ ಬಿಟ್ಟು ನಂತರ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ.

ಜೇನು ತುಪ್ಪದಿಂದ ಹಲವಾರು ರೀತಿಯಲ್ಲಿ ಫೇಸ್ ಪ್ಯಾಕ್ ರೆಡಿ ಮಾಡಬಹುದು. ಅದನ್ನು ಮಾಡಲು ಒಂದು ಕಪ್ ಪಪ್ಪಾಯಿಯನ್ನು ಹಿಸುಕಿ, ಅದಕ್ಕೆ ಸುಮಾರು 1-2 ಚಮಚ ಜೇನುತುಪ್ಪ ಸೇರಿಸಿ, ನಯವಾದ ಪೇಸ್ಟ್ ಮಾಡಿ ಮತ್ತು ಮುಖದ ಮೇಲೆ ದಪ್ಪ ಪದರವಾಗಿ ಹಚ್ಚಿ. ಸುಮಾರು 15-20 ನಿಮಿಷಗಳ ಕಾಲ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಬೇಕು. ಈ ಪ್ಯಾಕ್ ಮುಖಕ್ಕೆ ಅತೀ ಕಡಿಮೆ ಅವಧಿಯಲ್ಲಿ ಹೊಳಪನ್ನು ನೀಡುತ್ತದೆ.

ಜೇನುತುಪ್ಪ ಮತ್ತು ಟೊಮೆಟೊವನ್ನು ಒಟ್ಟಿಗೆ ಬೆರೆಸಿ, ಪ್ರತಿದಿನ 10 ನಿಮಿಷ ಕಾಲ ಚರ್ಮದ ಮೇಲೆ ಹಚ್ಚಿದಾಗ ಮುಖದ ಮೇಲಿನ ರಂಧ್ರಗಳ ಗಾತ್ರವನ್ನು ಕಡಿಮೆ ಮಾಡಬಹುದು.

ಜೇನುತುಪ್ಪ ಎಪ್ಪೋಲಿಯೇಶನ್ ಮಾಡುವುದರಿಂದ ಸತ್ತ ಚರ್ಮವನ್ನು ತೆಗೆದುಹಾಕುತ್ತದೆ ಮತ್ತು ಚರ್ಮವನ್ನು ಸುಲಭವಾಗಿ ಉಸಿರಾಡಲು ಅನುವು ಮಾಡಿಕೊಡುತ್ತದೆ. ಮನೆಯಲ್ಲಿಯೇ ತಯಾರಿಸಬಹುದಾದ ಸುಲಭವಾದ ಎಕ್ಸ್‌ ಫೋಲಿಯೇಟರ್ ಎಂದರೆ ನಿಂಬೆ ರಸ, ಸಕ್ಕರೆ ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಚರ್ಮವನ್ನು ಸ್ಟ್ರಬ್ ಮಾಡಿದ ನಂತರ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಬೇಕು. ಇದು ರಂಧ್ರಗಳನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ, ಸತ್ತ ಚರ್ಮವನ್ನು ಹೋಗಲಾಡಿಸುತ್ತದೆ ಮತ್ತು ತ್ವಚೆಗೆ ಹೊಳಪು ನೀಡುತ್ತದೆ.

ಸೂರ್ಯನ ಬೆಳಕಿನಿಂದಾಗಿ ಕಪ್ಪಾದ ಚರ್ಮಕ್ಕೆ ಒಂದು ಚಮಚ ಜೇನುತುಪ್ಪಕ್ಕೆ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಪ್ಯಾಕ್ ಒಣಗಿದ ಮೇಲೆ ಮುಖವನ್ನು ತೊಳೆದರೆ ಒಳ್ಳೆಯ ರಿಸಲ್ಟ್ ಕೊಡುತ್ತದೆ.

ಚರ್ಮದ ಬಣ್ಣ ಹೊಳಪು ಪಡೆಯಲು ಒಂದು ಚಮಚ ಕಡಲೆ ಹಿಟ್ಟಿಗೆ ಒಂದು ಚಮಚ ಜೇನುತುಪ್ಪ, ಸ್ವಲ್ಪ ಅರಿಶಿನ ಬೆರೆಸಿ ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಒಣಗಿದ ನಂತರ ಮುಖವನ್ನು ತೊಳೆಯಬೇಕು. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿ ಉತ್ತಮ
ರಿಸಲ್ಟ್ ಪಡೆಯುತ್ತೀರಿ.

Photo credit- Freepik

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು