ಅಂಕಣ

ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ ದಾಸವಾಳ ಹೂವು

ಕೂದಲು ಅಂದವಾಗಿರಬೇಕು ಎಂದು ಎಲ್ಲರು ಇಚ್ಛೆ ಪಡುತ್ತಾರೆ. ಆದರೆ ಇಂದಿನ ನಮ್ಮ ಬದಲಾದ ಜೀವನಶೈಲಿ, ನೀರು, ಧೂಳು, ದೇಹದಲ್ಲಿ ಉಷ್ಣತೆ ಎಲ್ಲವು ನಮ್ಮ ಕೂದಲಿನ ಮೇಲೆ ಅಗಾದವಾದ ಪರಿಣಾಮ ಬೀರುತ್ತಿದೆ. ಕೂದಲು ಉದುವುದು, ತಲೆಹೊಟ್ಟು ಹೀಗೆ ಒಂದೊಂದೆ ಸಮಸ್ಯೆ ಆರಂಭ ಆಗುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಶಾಂಪೂಗಳನ್ನು ತಂದು ಉಪಯೋಗಿಸಿದರೂ ಕೂದಲು ಉದುರುವ ಸಮಸ್ಯೆ ಸರಿಯಾಗುವುದಿಲ್ಲ.

ಇಂತಹ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸಮಾಡುವಲ್ಲಿ ದಾಸವಾಳ ಹೂವು ಕೂಡ ಒಂದು. ದಾಸವಾಳದ ಹೂವು ಕೂದಲನ್ನು ಬುಡದಿಂದಲೇ ಗಟ್ಟಿಗೊಳಿಸಿ ಉದುರುವ ಸಮಸ್ಯೆಗೆ ಪರಿಹಾರ ನೀಡುತ್ತದೆ. ಅಲ್ಲದೆ ಕೂದಲಿಗೆ ಬೇಕಾದ ಪೋಷಕಾಂಶಗಳನ್ನು ಪೂರೈಸುತ್ತದೆ. ಇದರಿಂದ ಸುಂದರವಾದ ಕೂದಲನ್ನು ಪಡೆಯಬಹುದಾಗಿದೆ.

ಇನ್ನು ದಾಸವಾಳದ ಹೂವಿನ ರಸವನ್ನು ತೆಗೆದು ನೆತ್ತಿಗೆ ಹಾಕಿಕೊಂಡರೆ ನೆತ್ತಿಗೆ ತಂಪಿನ ಅನುಭವವಾಗುತ್ತದೆ. ಅಲ್ಲದೆ ಇದು ಸೂರ್ಯನ ಬಿಸಿಲಿನ ಕಿರಣಗಳಿಂದ ನೆತ್ತಿ ಸುಡುವುದನ್ನು ತಪ್ಪಿಸುತ್ತದೆ. ಹೀಗಾಗಿ ತಲೆಬಿಸಿಯಾಗುವುದನ್ನು ತಡೆದು ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ. ಇದರ ಜೊತೆಗೆ ಕೂದಲು ಜಿಡ್ಡಾಗುವುದನ್ನು ಹಾಗೂ ನೆತ್ತಿ ಒಣಗಿ ಡ್ಯಾಂಡ್ರಫ್ ಆಗುವುದನ್ನು ತಡೆಯುತ್ತದೆ. ಇದು ದೇಹದ ಉಷ್ಣತೆಯನ್ನೂ ನಿಯಂತ್ರಿಸುತ್ತದೆ.

ದಾಸವಾಳದ ಹೂವುಗಳು ಮತ್ತು ಎಲೆಗಳಲ್ಲಿ ಇರುವ ಪ್ಲೇವನಾಯ್ಡ್ಗಳು ಮತ್ತು ಅಮೈನೋ ಆಮ್ಲಗಳು, ತಲೆಯ ಮೇಲೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ, ಅಲ್ಲದೆ ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಮೈನೋ ಆಮ್ಲಗಳು ಕೂದಲಿನ ಬುಡದಲ್ಲಿ ಜೀವಕೋಶಗಳಲ್ಲಿ ಕೆರಾಟಿನ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ, ಆರೋಗ್ಯಕರ ಕೂದಲು ಬೆಳವಣಿಗೆಯಾಗುವಂತೆ ಮಾಡುತ್ತದೆ. ಕೂದಲು ಸಣ್ಣ ವಯಸ್ಸಿನಲ್ಲಿಯೇ ಬಿಳಿಯಾಗುವುದನ್ನು ದಾಸವಾಳದ ಹೂವು ತಡೆಯುತ್ತದೆ.

ಡಾಂಡ್ರಫ್ ನಿವಾರಣೆಗೂ ದಾಸವಾಳ ಪರಿಣಾಮಕಾರಿ. ದಾಸವಾಳದ ಸೊಪ್ಪು ಮತ್ತು ಹೂವಿನ ನೀರು ಎರಡೂ ಕೂಡ ನೆತ್ತಿಯನ್ನು ತಂಪುಗೊಳಿಸಿ ಅಂದವಾದ ಕಪ್ಪನೆಯ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

Gayathri SG

Recent Posts

11 ತಿಂಗಳಿನಲ್ಲಿ ಬರೋಬ್ಬರಿ 5.38 ಕೋಟಿ ದಂಡ ವಸೂಲಿ ಮಾಡಿದ ಬಿಎಂಆರ್‌ಸಿಎಲ್‌

ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್‌ಸಿಎಲ್‌ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…

13 mins ago

ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ: ಸೈಬರ್‌ ಖದೀಮರಿಂದ ವಂಚನೆ

ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ…

29 mins ago

ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾದ ಸರಕಾರ

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…

44 mins ago

ಬಹುಭಾಷೆಯಲ್ಲಿ ಡಬ್ ಆಗಿದೆ ದೊಡ್ಮನೆ ಕುಡಿಯ ‘ಯುವ’ ಸಿನಿಮಾ

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ನಟನೆಯ ‘ಯುವ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಇದೀಗ ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ.…

1 hour ago

ಕೊನೆಯ ಸ್ಥಾನದೊಂದಿಗೆ ಐಪಿಎಲ್ ಅಂತ್ಯಗೊಳಿಸಿದ ಮುಂಬೈ ಇಂಡಿಯನ್ಸ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ  ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ  ಹಾರ್ದಿಕ್ ಪಾಂಡ್ಯ ಪಡೆ ಮುಂಬೈ ಇಂಡಿಯನ್ಸ್ ಸೋಲನುಭವಿಸಿದೆ.

2 hours ago

8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌: ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ

ರಾಜ್ಯಾದ್ಯಂತ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು,  40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಿ, ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.

2 hours ago