News Karnataka Kannada
Monday, April 29 2024
ಅಂಕಣ

ಮುಖದ ಅಂದವನ್ನು ಹೆಚ್ಚಿಸುತ್ತದೆ ದಾಸವಾಳ ಹೂವಿನ ಫೇಸ್ ಪ್ಯಾಕ್

Hibiscus flower face pack enhances the beauty of the face
Photo Credit : Freepik

ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಮುಖದ ಅಂದ ಹಾಳು ಮಾಡುವ ಮೊಡವೆ, ಟ್ಯಾನ್ , ಕಪ್ಪು ಕಲೆ ಇಂತಹ ಸಮಸ್ಯೆಯಿಂದ ದೂರಾಗಲು ಮನೆಯಲ್ಲೇ ಫೇಸ್ ಪ್ಯಾಕ್, ಫೇಸ್ ಸ್ಕ್ರಬ್ ತಯಾರಿಸಿಕೊಂಡರೆ ಉತ್ತಮ ರಿಸಲ್ಟ್ ಪಡೆಯಬಹುದು. ಹಾಗಾದರೆ ಇಂದು ನಾವು ಮನೆಯಲೇ ಸಿಗುವಂತಹ ದಾಸವಾಳದ ಪೇಸ್ ಪ್ಯಾಕ್, ಫೇಸ್ ಸ್ಕ್ರಬ್ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಈ ದಾಸವಾಳದ ಗಿಡಗಳು ಎಲ್ಲಾ ಮನೆಗಳಲ್ಲೂ ಇರುತ್ತದೆ. ಇದರಲ್ಲಿ ಅನೇಕ ರೀತಿಯ ಉಪಯೋಗಗಳಿವೆ. ಇತ್ತ ಮುಖದ ಅಂದ ಹೆಚ್ಚಿಸಲು ಸಹಾಯ ಮಾಡುತ್ತದೆ, ಜೊತೆಗೆ ಕೂದಲ ಸೌಂದರ್ಯ ವೃದ್ಧಿಗೂ ಸಹಕಾರಿಯಾಗಿದೆ.

ದಾಸವಾಳ ಹೂವಿನ ಫೇಸ್ ಪ್ಯಾಕ್ ತಯಾರಿಸಲು ಮೊದಲಿಗೆ, ದಾಸವಾಳದ ಹೂವುಗಳನ್ನು ಒಣಗಿಸಿ ಪುಡಿ ಮಾಡಿ ಇಡಿ. ಜೊತೆಗೆ ಹಸಿ ಗೋಧಿಯನ್ನು ಪುಡಿ ಮಾಡಿ. ಇವೆರಡೂ ಪುಡಿಯನ್ನು ಬೌಲ್ ಗೆ ಹಾಕಿ ಸ್ವಲ್ಪ ಗುಲಾಬಿ ನೀರು (ರೋಸ್ ವಾಟರ್) ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ ನಂತರ ಚೆನ್ನಾಗಿ ತಣ್ಣೀರಿನಿಂದ ಮುಖ ತೊಳೆಯಿರಿ. ಹೀಗೆ ಕ್ರಮೇಣ ಮಾಡುವುದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.

ದಾಸವಾಳ ಹೂವನ್ನು ಒಣಗಿಸಿ ಪುಡಿ ಮಾಡಿ ನಂತರ ಅದಕ್ಕೆ ಸ್ವಲ್ಪ ಹಾಲು ಮತ್ತು ಜೇನು ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಸ್ಪಲ್ಪ ಸಮಯ ಹಾಗೆ ಬಿಟ್ಟು ನಂತರ ಮುಖ ಚೆನ್ನಾಗಿ ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಮುಖದ ಅಂದ ಹೆಚ್ಚುತ್ತದೆ.

ಒಂದು ಬೌಲ್ ಗೆ ಸ್ವಲ್ಪ ದಾಸವಾಳದ ಹೂವಿನ ಪುಡಿ ಹಾಕಿ ನಂತರ ಅದಕ್ಕೆ ಅಂದಾಜು ಪ್ರಮಾಣದಲ್ಲಿ ಅಲೋವೆರ ಜೆಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಶುದ್ಧ ನೀರಿನಿಂದ ಮುಖವನ್ನು ಸ್ವಚ್ಛ ಮಾಡಿ ಕೊಳ್ಳಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಕ್ರಮೇಣ ಹೆಚ್ಚಾಗುತ್ತದೆ.

ದಾಸವಾಳ ಹೂವನ್ನು ಚೆನ್ನಾಗಿ ಒಣಗಿಸಿ, ನಂತರ ಪುಡಿ ಮಾಡಿ ಅದಕ್ಕೆ ಅಕ್ಕಿ ಹಿಟ್ಟು, ಮೊಸರು, ಅಲೋವೆರ ಜೆಲ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಶುದ್ಧ ನೀರಿನಿಂದ ಮುಖವನ್ನು ಸ್ವಚ್ಛ ಮಾಡಿ ಕೊಳ್ಳಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು