News Karnataka Kannada
Monday, April 29 2024
ವಿಶೇಷ

ಹಾಗಲಕಾಯಿ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

Here is some information about bitter gourd cultivation
Photo Credit : Pixabay

ಕಹಿಯಾಗಿರುವ ಹಾಗಲಕಾಯಿ ಭಾರತದ ಅತ್ಯಂತ ಜನಪ್ರಿಯ ತರಕಾರಿಗಳಲ್ಲಿ ಒಂದಾಗಿದೆ ಭಾರತದ ಅತ್ಯಂತ ವ್ಯಾಪಕವಾಗಿ ಬೆಳೆಯಲಾಗುವ ಹಾಗಲಕಾಯಿಯು ಉತ್ತಮವಾದ ಔಷಧೀಯ ಗುಣವನ್ನು ಸಹ ಹೊಂದಿದೆ.

ಇಂಗ್ಲಿಷ್ ನಲ್ಲಿ ಬೆಟರ್ ಮೆಲನ್ ಅಥವಾ ಬಿಟರ್ ಗಾರ್ಡ್ ಎಂದು ಕರೆಯಲಾಗುವ ಇದು ಸೌತೆಕಾಯಿ ಅಂತಹ ಉದ್ದನೆಯ ಆಕಾರವನ್ನು ಹೊಂದಿದೆ. ಏಷ್ಯಾ ಆಫ್ರಿಕಾ ಹಾಗೂ ಕೆರೆಬಿಯನ್ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಇದು ಇತರ ಯಾವುದೇ ತರಕಾರಿಗಳಿಗಿಂತ ಹೆಚ್ಚು ಕಹಿಯಾಗಿದ್ದು ಇವುಗಳಲ್ಲಿ ಹಲವಾರು ಪ್ರಭೇದಗಳಿವೆ.

ಹಾಗಲಕಾಯಿ ಉತ್ಪಾದನೆಗೆ ಬೇಕಾದ ಹವಾಮಾನ: ಹಾಗಲಕಾಯಿ ಮುಖ್ಯವಾಗಿ ಬೆಚ್ಚಗಿನ ಋತುವಿನ ಸಸ್ಯ ಬಿಸಿ ಮತ್ತು ಆದ್ರ ವಾತಾವರಣದಲ್ಲಿ ಬೆಳೆಯುತ್ತದೆ.

ಹಾಗಲಕಾಯಿ ಕೃಷಿಗೆ ಉತ್ತಮ ಮಣ್ಣು: ಹಾಗಲಕಾಯಿ ಬೀಜಗಳಿಗೆ ಉತ್ತಮ ಮಾಧ್ಯಮವೆಂದರೆ ಅದು ಫಲವತ್ತಾದ ಮಣ್ಣು ಚೆನ್ನಾಗಿ ಬರೆದು ಹೋದ ಮಣ್ಣು. ಹಾಗೂ ಕಾಂಪೋಸ್ಟ್ ಅಥವಾ ಒಣಗಿದ ಗೊಬ್ಬರದಂತಹ ಸಾವಯವ ಪದಾರ್ಥಗಳಿಂದ ಸಮೃದ್ಧವಾಗಿದ್ದರೆ ಹಾಗಲಕಾಯಿ ಬೆಳೆಯಲು ಉತ್ತಮ.

ಹಾಗಲಕಾಯಿb ಬೆಳೆಯನ್ನು ಬೇಸಿಗೆ ಬೆಳೆಗೆ ಜನವರಿಯಿಂದ ಮಾರ್ಚ್ ವರೆಗೆ ಬಯಲು ಸೀಮೆಯಲ್ಲಿ ಮಳೆಗಾಲದ ಬೆಳೆಗಾಗಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಹಾಗೂ ಬೆಟ್ಟಗಳಲ್ಲಿ ಮಾರ್ಚ್ ನಿಂದ ಜೂನ್ ವರೆಗೆ ಬೀಜವನ್ನು ಬಿತ್ತಲಾಗುತ್ತದೆ.

ಹಾಗಲಕಾಯಿ ನೀರಾವರಿಯ ಅವಶ್ಯಕತೆ: ಬೀಜಗಳನ್ನು ಬಿತ್ತಿದ ನಂತರ ವಾರಕ್ಕೊಮ್ಮೆ ನೀರಾವರಿ ಮಾಡುವುದು ಮುಖ್ಯ. ಡ್ರಿಪ್ಪಿಂಗ್ ನೀರಾವರಿಯೂ ಕೂಡ ಸ್ಥಾಪಿಸಬಹುದು

ಹಾಗಲಕಾಯಿ ಆರೋಗ್ಯ ಪ್ರಯೋಜನಗಳು: ಹಾಗಲಕಾಯಿಯಲ್ಲಿ ಹಲವಾರು ಉತ್ಕರ್ಷಣ ರೋಗನಿರೋಧಕ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿದ್ದು ಮನುಷ್ಯನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚುವುದರಿಂದ ಹಿಡಿದು ಗಾಯಗಳನ್ನು ಗುಣಪಡಿಸುವವರೆಗೂ ಇವು ಔಷಧೀಯ ಅಧಿಕಾರಿ ನಿರ್ವಹಿಸುತ್ತವೆ

# ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

# ಚರ್ಮ ಮತ್ತು ಕೂದಲಿಗೆ ಉತ್ತಮ ಆಹಾರವಾಗಿದೆ

# ತೂಕವನ್ನು ನಿಯಂತ್ರಿಸಲು ಸಹಕಾರಿಯಾಗಿದೆ

# ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

# ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ

# ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು