News Karnataka Kannada
Monday, April 29 2024
ವಿಶೇಷ

ಬೆಂಡೆಕಾಯಿ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

Here's some information about okra crop
Photo Credit : Pixabay

ಬೆಂಡೆಕಾಯಿ ಅಥವಾ ಲೇಡಿ ಫಿಂಗರ್ ಎಂದು ಕರೆಯಲ್ಪಡುವ ಈ ತರಕಾರಿಯು ಭಾರತದ ಪ್ರಮುಖ ತರಕಾರಿ ಬೆಳೆಗಳಲ್ಲಿ ಒಂದಾಗಿದೆ. ಇದು ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಹಾಗೂ ಸಮಶೀತೋಷ್ಣ ಪ್ರದೇಶಗಳ ಬೆಚ್ಚಗಿನ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಈ ಸಸ್ಯವು “ಮಾಲ್ವೇಸಿ” ಕುಟುಂಬಕ್ಕೆ ಸೇರಿದೆ.

ಬೆಂಡೆಕಾಯಿಯಲ್ಲಿ ಹಲವು ಪೌಷ್ಟಿಕಾಂಶ ಗುಣಗಳನ್ನು ಹೊಂದಿದ್ದು 100 ಗ್ರಾಂ ಬೆಂಡೆಕಾಯಿಯಲ್ಲಿ 1.9 ಗ್ರಾಂ ಪ್ರೋಟೀನ್ 0.2 ಗ್ರಾಂ ಕೊಬ್ಬು 6.4 ಗ್ರಾಂ ಕಾರ್ಬೋಹೈಡ್ರೇಟ್ ಹಾಗೂ ಇನ್ನು ಹಲವು ಖನಿಜಾಂಶಗಳನ್ನು ಹೊಂದಿದೆ. ಭಾರತದಲ್ಲಿ ಮುಖ್ಯವಾಗಿ ಉತ್ತರ ಪ್ರದೇಶ ಬಿಹಾರ ಒರಿಸ್ಸಾ ಪಶ್ಚಿಮ ಬಂಗಾಳ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಪ್ರಮುಖವಾಗಿ ಬೆಂಡೆಕಾಯಿ ತರಕಾರಿಯನ್ನು ಉತ್ಪಾದಿಸುತ್ತಾರೆ.

ಬೆಂಡೆಕಾಯಿ ಬೆಳೆಯಲು ಹವಾಮಾನ ಪರಿಸ್ಥಿತಿ: ಲೇಡಿ ಫಿಂಗರ್ ಅಥವಾ ಬೆಂಡೆಕಾಯಿ ಬೆಳೆಯ ಅವಧಿಯಲ್ಲಿ ದೀರ್ಘ ಬೆಚ್ಚಗಿನ ಋತುವಿನ ಅಗತ್ಯವಿರುತ್ತದೆ. ಇದು ಬೆಚ್ಚಗಿನ ಆದ್ರ ಸ್ಥಿತಿಯಲ್ಲಿ ಉತ್ತಮ ಇಳುವರಿಯನ್ನು ನೀಡುತ್ತದೆ. ಬೆಂಡೆಕಾಯಿ ಗಿಡಗಳು 22° ಸೆಲ್ಸಿಯಸ್ ನಿಂದ 32° ಸೆಲ್ಸಿಸ್ ವರೆಗಿನ ತಾಪಮಾನದ ವ್ಯಾಪ್ತಿಯಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಇದನ್ನು ಮಳೆಗಾಲದ ಋತುವಿನಲ್ಲೂ ಸಹ ಯಶಸ್ವಿಯಾಗಿ ಬೆಳೆಯಬಹುದು. ಹಾಗೂ 20 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನದಲ್ಲಿ ಬೀಜಗಳು ಮೊಳಕೆ ಒಡೆಯಲು ವಿಫಲವಾಗುವುದರಿಂದ ಇಂಥಹ ಪ್ರದೇಶಗಳಲ್ಲಿ ಇವುಗಳ ಬೆಳವಣಿಗೆ ಸಾಧ್ಯವಿರುವುದಿಲ್ಲ.

ಬೆಂಡೆಕಾಯಿ ಕೃಷಿಗೆ ಸೂಕ್ತವಾದ ಮಣ್ಣು: ಬೆಂಡೆಕಾಯಿಯನ್ನು ಎಲ್ಲ ರೀತಿಯ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯಬಹುದು ಆದರೆ ಮರಳು ಮಿಶ್ರಿತ ಲೋಮ್ ಮತ್ತು ಜೇಡಿ ಮಣ್ಣು ಇದರ ಕೃಷಿಗೆ ಸೂಕ್ತವಾಗಿದೆ.

ಎರಡರಿಂದ ಮೂರು ಬಾರಿ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಮಣ್ಣಿಗೆ ಬೇವಿನ ಹಿಂಡಿ ಮತ್ತು ಕೋಳಿ ಗೊಬ್ಬರ ಅಥವಾ ಇನ್ಯಾವುದೇ ಕಾಂಪೋಸ್ಟು ಗೊಬ್ಬರದ ಬಳಕೆಯನ್ನು ಮಾಡುವುದರಿಂದ ಉತ್ತಮ ಫಸಲು ಸಿಗುವ ಸಾಧ್ಯತೆ ಇದೆ.

ಹವಾಮಾನ ಮತ್ತು ಬೆಳವಣಿಗೆ ಅನುಗುಣವಾಗಿ ತಾಪಮಾನದ ಅಗತ್ಯವನ್ನು ಅವಲಂಬಿಸಿ ಜನವರಿ ಮಾರ್ಚ್ ಮತ್ತು ಜೂನ್ ಅಗಸ್ಟ್ ನಡುವೆ ಬೆಂಡೆಕಾಯಿಯನ್ನು ಬಿತ್ತನೆ ಮಾಡಲಾಗುತ್ತದೆ.

ಬೆಂಡೆಕಾಯಿ ಕೊಯ್ಲು: ಬೆಂಡೆಕಾಯಿ ಬಿತ್ತನೆ ಮಾಡಿದ 35 ರಿಂದ 40 ದಿನಗಳ ನಂತರ ಹೂ ಬಿಡಲು ಪ್ರಾರಂಭವಾಗುತ್ತದೆ. ನಾಟಿ ಮಾಡಿದ 55 ರಿಂದ 65 ದಿನಗಳಲ್ಲಿ ಬೆಳೆ ಕಟಾವು ಮಾಡಲು ತಯಾರಾಗುತ್ತದೆ. ಬೆಂಡೆಕಾಯಿಗಳು ಬಹಳ ವೇಗವಾಗಿ ಬೆಳೆಯುವುದರಿಂದ ಅದನ್ನು ಎರಡು ದಿನಗಳಿಗೊಮ್ಮೆ ಕೊಯ್ಲು ಮಾಡಬೇಕು.

ಬೆಂಡೆಕಾಯಿ ಆರೋಗ್ಯ ಪ್ರಯೋಜನಗಳು: ಬೆಂಡೆಕಾಯಿ ರುಚಿಯನ್ನು ಹೊಂದಿರುವುದಲ್ಲದೆ ತನ್ನದೇ ಆದ ವಿಶಿಷ್ಟ ರುಚಿ ಹಾಗೂ ಔಷಧೀಯ ಗುಣಗಳನ್ನು ಹೊಂದಿದ್ದು ದೇಹದಲ್ಲಿ ಅನೇಕ ರೋಗಗಳನ್ನು ತಡೆಗಟ್ಟಲು ಇದು ಸಹಾಯ ಮಾಡುತ್ತದೆ.

* ಮಧುಮೇಹವನ್ನು ತಡೆಯಲು ಸಹಾಯಮಾಡುತ್ತದೆ

* ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯಕ

* ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ

* ಕ್ಯಾನ್ಸರ್ ನಿಂದ ಕಾಪಾಡುತ್ತದೆ

* ಮಲಬದ್ಧತೆಯನ್ನು ತಡೆಗಟ್ಟುತ್ತದೆ

* ತೂಕ ಇಳಿಸಲು ಸಹಕಾರಿ

* ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

* ಕೂದಲ ಆರೋಗ್ಯಕ್ಕೆ ಉತ್ತಮ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು