Categories: ಅಂಕಣ

ಮನೆಯವರ ಸುಖ ನೆಮ್ಮಂದಿಗಾಗಿ ನಿತ್ಯ ಸವೆಯುವ ಜೀವ ಅಪ್ಪ

ನಿತ್ಯ ಬೆಳಗ್ಗೆ ಮಕ್ಕಳ ಮುಖ ನೋಡಿ ಕೆಲಸಕ್ಕೆ ಹೊರಡುವ ಅಪ್ಪ ಸಂಜೆ ತಿಂಡಿಯ ಜೊತೆ ಮನೆ ಸೇರುತ್ತಾರೆ. ಮಕ್ಕಳನ್ನು ಹೃದಯದಲ್ಲಿ ಮಾತ್ರ ಅಲ್ಲ ತಲೆಯ ಮೇಲೆ ಕೂರಿಸಿ ಪ್ರೀತಿಸುವ ಜೀವ. ಕೇಳಿದನ್ನು ಇಲ್ಲ ಎನ್ನದೆ ಕೋಡುವ ಜೀವ. ಬಯಸಿದನ್ನು ಸದ್ದಿಲ್ಲದೇ ತಂದು ಸರ್ ಪ್ರೈಸ್ ನೀಡುವ ರೀತಿ ಭಿನ್ನವಾಗಿರುತ್ತದೆ. ಈ ಜಗತ್ತಿನಲ್ಲಿ ಅಪ್ಪ ಒಬ್ಬ ಎಲ್ಲದಕ್ಕೂ ತಥಾಸ್ತು ಹೇಳುವ ದೇವ ಮಾನವ.

ಹಬ್ಬ ಹರಿದಿನಗಳಲ್ಲಿ ನಮೆಗೆಲ್ಲ ಒಳ್ಳೆಯ ಬಟ್ಟೆ ಕೊಡಿಸಿ ತಾನು ಹಳೆ ಬಟ್ಟೆಯಲ್ಲಿ ಇರುವುದನ್ನು ಎಂದಾದರೂ ಗಮನಿಸಿದ್ದೀರಾ? ನಾವು ಇಷ್ಟ ಪಟ್ಟ ವಸ್ತುವನ್ನು ತರಲು ಎಷ್ಟು ಕಷ್ಟ ಪಟ್ಟಿರಬಹುದು ಎಂದು ಗಮನಿಸಿದಿರ.ಇಲ್ಲ ಇದರ ಕಲ್ಪನೆ ಕೂಡ ನಮ್ಮಗೆ ಇಲ್ಲ. ಯಾಕೆಂದರೆ ನಾವು ಇದು ಯಾವುದರ ಬಗ್ಗೆ ಯೋಚನೆ ಮಾಡಲು ಅವಕಾಶ ನೀಡಿಲ್ಲ. ತನ್ನ ನೋವನ್ನು ಎಂದಿಗೂ ಯಾರೊಂದಿಗೆನೂ ಹಂಚದೆ ಒಬ್ಬನೇ ನಿತ್ಯ ಕೆಲಸ ಮನೆಯ ಜಂಜಾಟದಲ್ಲಿ ಸವೆಯುತ್ತಿರುತ್ತಾನೆ. ಮನೆಯವರಿಗೆ ಆಸರೆಯಾಗಿ ಆಧಾರ ಸ್ತಂಭವಾಗಿ ನಿಲ್ಲುವ ಗಟ್ಟಿ ಜೀವ ಇವರದು.

ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸದಾ ಶ್ರಮಿಸುವ, ಮಕ್ಕಳ ಕನಸಿಗೆ ದಾರಿ ದೀಪ, ಬೆನ್ನೆಲುಬುವಾಗಿ ನಿಲ್ಲುವರು. ಮಕ್ಕಳೊಂದಿಗೆ ತಾನು ಮಗುವಾಗುತ್ತಾರೆ. ಮಕ್ಕಳು ಬೆಳೆದು ನಿಂತಾಗ ಅವರ ಗೆಳೆಯರಾಗುತ್ತಾರೆ. ಸಮಯ ಸಂದರ್ಭಕ್ಕೆ ತಕ್ಕಂತೆ ಮಾರ್ಗದರ್ಶಕರು ಆಗುತ್ತಾರೆ. ತಮ್ಮ ಜೀವನದ ಅನುಭವನ್ನು ಧಾರೆ ಎರೆಯುತ್ತಾರೆ.

ಅಪ್ಪನಿಗಿಂತ ಒಳ್ಳೆ ಸೇಹ್ನಿತ ಬೇರೆಲ್ಲೂ ಸಿಗಲ್ಲ. ಜೊತಗೆ ಪ್ರತಿಯೋಬ್ಬ ಮಗುವಿನ ಸುಪರ್ ಹೀರೋ. ಮನೆಯವರ ಬೇಕು ಬೇಡಗಳ ಬಗ್ಗೆ ಸದಾ ಗಮನಹರಿಸುವವರು. ನಮಗೆ ಸ್ಪೂರ್ತಿಯಾಗಿರುವ ಇವರು ತಮ್ಮ ದೃಷ್ಟಿಕೋನ ಮತ್ತು ವ್ಯಕ್ತಿತ್ವದಿಂದ ಮಕ್ಕಳ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಾರೆ. ಅಪ್ಪ ಮನೆಗೆ ಬರುವುದನ್ನೇ ಕಾಯುವ ಆ ಕ್ಷಣ ತುಂಬಾನೇ ಆವಿಸ್ಮರಣೀಯ. ಮನೆಯಲ್ಲಿ ಯಾರೇ ಎನೇ ಅಂದರು ಅಪ್ಪನಲ್ಲಿ ದೂರು ಹೇಳುವ ಮತ್ತು ಅದನ್ನು ಬಗೆಹರಿಸುವ ರೀತಿ ಅದ್ಭುತ.

ಅಪ್ಪ-ಅಪ್ಪನ ಪ್ರೀತಿಇಲ್ಲದ ಜೀವನ ಅಪೂರ್ಣವಾಗಿರುತ್ತದೆ. ಯಾಕೆಂದರೆ ಜೀವನದ ಉದ್ದಕ್ಕೂ ನಮ್ಮನ್ನು ಕಾಡುವ ಪ್ರೀತಿ ಅಪ್ಪ ನೀಡಿರುವ ಪ್ರೀತಿ. ಹೆಜ್ಜೆ ಹೆಜ್ಜೆಗೂ ಸದಾ ನೆನೆಪಿಸಿಕೊಳ್ಳುವುದು ಇವರನ್ನು ಮಾತ್ರ. ಅಳು ಬಂದಾಗ ಎದೆತಲೆ ಇಟ್ಟು ಬಿಕ್ಕಿ ಮಕ್ಕಳು ಅತ್ತಾಗ ತಾನೂ ಅತ್ತಂತಹ ನಿದರ್ಶನಗಳೂ ಹಲವು. ಮಕ್ಕಳ ಸಂತೋಷನೇ ತನ್ನ ಸಂತೋಷ ಎಂದೂ ತನ್ನ ನೋವನ್ನು ಸದಾ ಮರೆಮಾಚುವ ಕಲೆಗಾರ.

ಅಪ್ಪನೇ ಮೇಲೆ ಬೇಸರ ಎನಿಸಿದ್ದರೆ, ಒಮ್ಮೆ ತಮ್ಮ ಬಾಲ್ಯವನ್ನು ಎಲ್ಲರು ನೆನೆಸಿಕೋಳ್ಳುವುದು ಉತ್ತಮ ಎಕೆಂದರೆ ಎಲ್ಲಾವನ್ನು ಸಮಾದಾನದಿಂದಲೇ ಸಹಿಸಿಕೊಂಡು ಬಂದಿರುವ ಜೀವ. ತನ್ನ ಕರ್ತವ್ಯ ಜವಬ್ಬಾರಿಯಂದ ಯಾವತ್ತೂ ಹಿಂಜರಿಯದ ವ್ಯಕ್ತಿ. ಸದಾ ನಗು ಮೊಗದಿಂದ ಎಲ್ಲರೊಂದಿಗೂ ಬೆರೆಯುವ ಇವರು ಮನೆಯ ಅದ್ಭುತ ವ್ಯಕ್ತಿ.ಮಕ್ಕಳ ಜೀವನದ ಕುರಿತು ಬೆಟ್ಟದಷ್ಟು ಆಸೆ ಕನಸ್ಸನ್ನು ಹೊತ್ತಿರುವ ಜೀವವೇ ಅಪ್ಪ.

Ashika S

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

5 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

5 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

6 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

6 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

6 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

7 hours ago