Categories: ಅಂಕಣ

ಒಂದೊಂಮ್ಮೆ ಬಂಧುಗಳು ಕೂಡ ಒಳ್ಳೆಯ ಪಾಠ ಕಲಿಸುತ್ತಾರೆ

ಜೀವನದ ಹೆಜ್ಜೆ ಹೆಜ್ಜೆಯಲ್ಲು ನಮಗೆ ಹೊಸದೊಂದು ಅನುಭವ ಆಗುತ್ತಾ ಹೋಗುತ್ತದೆ. ಅ ಅನುಭವಗಳು ಹೊಸ ಹೊಸ ಪಾಠ ಕಲಿಸುತ್ತಾ ಹೋಗುತ್ತದೆ. ಒಂದೊಮ್ಮೆ ಅನುಭವ ನೆನಪಿಗೆ ಬಂದಾಗ ಹೃದಯದ ಭಾರ ಕಮ್ಮಿಯಾಗುತ್ತದೆ.

ಅವರೊಬ್ಬ ದಾನಶೂರ ಕಲಿಯುಗ ಕರ್ಣ. ಸಾಮನ್ಯ ಮದ್ಯಮ ವರ್ಗದ ಕಟುಂಬದ ವ್ಯಕ್ತಿ. ಹೆಂಡ್ತಿ ಮಕ್ಕಳು ಇವರ ಜೊತೆ ಈ ತನ್ನ ಬಂಧು ಬಳಗವನ್ನೆ ಮುನ್ನಡೆಸುತ್ತಾ, ಹೋಗುವ ಯಜಮಾನ. ಇವರ ಈ ಯಜಮಾನತ್ವದಿಂದ ನೊಂದು ಬೆಂದು ಬಸವಳಿಯುತ್ತಿರುವುದು ಹೆಂಡ್ತಿ ಮಕ್ಕಳು.

ತನ್ನದೆಲ್ಲ ತನ್ನ ಬಂಧುಬಳಗಕ್ಕೆ ಸೇರಿದ ಸೋತ್ತು ಅನ್ನುವ ಮನೋಬಾವ ಈ ವ್ಯಕ್ತಿದು.ಅದಕ್ಕೆ ತಕ್ಕಂತೆ ಬಂಧುಬಳಗದವರು ಕೂಡ ಸಂಪೂರ್ಣ ಅವಕಾಶವಾದಿಯಂತೆ ಬಳಸಿಕೊಳ್ಳುತ್ತಾರೆ. ಹುಷಾರು ತಪ್ಪಿದಾಗಲೆಲ್ಲಾ ಬಂಧುಗಳು ಈ ಕರ್ಣನ್ನು ನೆನೆಸಿಕೋಳ್ಳುತ್ತಾರೆ. ಮಕ್ಕಳಿಗೆ ಮದುವೆ ಮಾಡುವಾಗಲು ಈ ಕರ್ಣನನ್ನು ನೆನೆಸಿಕೋಳ್ಳುತ್ತಾರೆ.

ಅಂದಹಾಗೆ ಈ ಕರ್ಣನಿಗೆ ಮೂರು ಜನ ಹೆಣ್ಣು ಮಕ್ಕಳು. ಆದರೆ ಇವರು ಕರ್ಣನ ಜೀವನದಲ್ಲಿ ಲೆಕ್ಕಕಿಲ್ಲದವರು. ಒಬ್ಬ ತಂದೆ ತನ್ನದೇ ಹೆಣ್ಣು ಮಕ್ಕಳ ಈ ರೀತಿ ತಾತ್ಸರವಾಗಿ ಕಾಣಲು ಹೇಗೆ ಅಂತ ಯೋಚನೆ ಮಾಡಿದಾಗ ಉತ್ತರ ಸಮಾಜದ ಕೃಪೆ ಅನಿಸುತ್ತಾದೆ. ಕರ್ಣ ಬ್ಯಾಂಕ್ ಉದ್ಯಮಿ. ಕಂಠ ಪೂರ್ತಿ ಕುಡಿಯುವ ಕುಡಿ ಪಾರ್ಟಿ. ಒಮ್ಮೆ ತನ್ನ ಬಂಧುವಿನ ಮಗಳಿಗೆ ತಾನೇ ಮುಂದೆ ನಿಂತು ಮದುವೆ ಮಾಡುತ್ತಾನೆ. ಸಂಪೂರ್ಣ ವೆಚ್ಚ ಉಸ್ತುವರಿ ನಮ್ಮ ಕರ್ಣನದೇ ಆಗಿರುತ್ತದೆ.

ಈ ಮಧ್ಯೆ ಕುಡಿತದ ಚಟದ ಹೆಚ್ಚಾಗಿ ಆರೋಗ್ಯ ಕೆಡುತ್ತದೆ. ಮದುವೆಯ ಮಾರನೆ ದಿನವೇ ಕರ್ಣನ್ನು ಅಸ್ಪತ್ರೆಗೆ ಸೇರಿಸುತ್ತಾರೆ. ಅಪ್ಪನ್ನು ನೋಡಲು ಹೋದ ಮಗಳಿಗೆ ಶಾಕ್ ಕಾದಿತ್ತು. ಹೊಟ್ಟೆ ಉಬ್ಬರಿಸಿತ್ತು, ಎದೆಗಿಂತಲು ಎತ್ತರವಾಗಿ ಕಾಣುತ್ತಿತ್ತು. ಡಾಕ್ಟರ್ ವಿಪರೀತ ಕುಡಿತದಿಂದ ಲಿವರ್ ಡ್ಯಾಮೆಜ್ ಆಗಿದೆ ಎಂದಾಗ ಸಿಡಿಲು ಬಡಿದಂತಾಗಿತ್ತು.  ಎಕೆಂದರೆ ಹೆಂಡ್ತಿ ಮಕ್ಕಳಲ್ಲಿ ನಯಪೈಸೆ ದುಡ್ಡು ಇರಲಿಲ್ಲ. ಇತ್ತ ಬಂಧುಬಳಗದವರು ತಮ್ಮಗೂ ಇದಕ್ಕು ಎನು ಸಂಭದನೇ ಇಲ್ಲ ಎನ್ನುವರೀತಿ ಮುಖ ತಿರುಗಿಸುತ್ತಾರೆ.

ಇಲ್ಲಿ ನಾವು ಕಲಿಯುವಂತಹ ಪಾಠ ನಾವೂ ಎಲ್ಲರನ್ನು ನಮ್ಮವರು ಅಂದುಕೋಳ್ಳುತ್ತೇವೆ. ಆದರೆ ಅವರು ನಮ್ಮನ್ನು ಎಷ್ಟು ನಮ್ಮವರು ಎಂಬ ಭಾವನೆಯನ್ನು ಹೊಂದಿರುತ್ತಾರೆ ಎನ್ನುವುದು ಕಾಣುತ್ತದೆ.

ಅವಶ್ಯಕತೆ ಇರುವವರಿಗೆ ಸಹಾಯ ಮಾಡುವುದು ಒಳ್ಳೆಯ ವಿಷಯ ಆದರೆ ನಮ್ಮವರನ್ನು ಕಡೆಗಣಿಸುವುದು ಎಷ್ಟರಮಟ್ಟಿಗೆ ಸರಿ. ನಮ್ಮ ಸಮಸ್ಯೆಗೆ ಸ್ಪಂದಿಸದ ಜನರ ಸಹವಾಸ ಬೇಕಿತ್ತ. ಈ ಎಲ್ಲರ ಮಧ್ಯೆ ಕಷ್ಟ ಅನುಭವಿಸಿದ ಮಕ್ಕಳು ತಾವು ಒಂದು ಪಾಠ ಕಲಿತರು ಬಂಧುಬಳಗ ಅಂದರೆ ಯಾರು ಎನ್ನುವುದು. ತಮ್ಮ ಜೀವನದಲ್ಲಿ ಯಾರ ಮೇಲೆಯೂ ಅವಲಂಬಿತವಾಗಿರಬಾರದು. ಎಲ್ಲ ನೋವನ್ನು ಮರೆಯತ್ತಾ ಬದುಕುವ ದಾರಿ ಕೊಂಡುಕೊಳ್ಳುತ್ತಾರೆ.

Ashika S

Recent Posts

ಜಿಂದಾಲ್‌ನ ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದು 3 ಎಂಜಿನಿಯರ್‌ಗಳು ಮೃತ್ಯು

ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಮೂವರು ಎಂಜಿನಿಯರ್‌ಗಳು ಸಾವಿಗೀಡಾದ ಘಟನೆ ಬಳ್ಳಾರಿ ಜಿಲ್ಲೆಯ ಜಿಂದಾಲ್‌ನ ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನಡೆದಿದೆ.

19 mins ago

ವಿದ್ಯುತ್ ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಮೃತ್ಯು

ವಿದ್ಯುತ್ ಹೈಟೆನ್ಷನ್ ವೈರ್ ತಾಕಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದಿದೆ.

32 mins ago

ಅದೃಷ್ಟ ನಮ್ಮ ಕೈ ಹಿಡಿಯಬೇಕಿದೆ: ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​

ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ನಡೆದ 17ನೇ ಆವೃತ್ತಿಯ 58ನೇ ಐಪಿಎಲ್​ ಪಂದ್ಯದಲ್ಲಿ ಅಲ್ರೌಂಡ್​ ಪ್ರದರ್ಶನದ ಫಲವಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು…

47 mins ago

“ಜೈಶ್ರೀರಾಮ್” ಹಾಡಿನಿಂದ ಕಾಲೇಜಿನಲ್ಲಿ ಧರ್ಮದಂಗಲ್: ಸಂಸದ ಪ್ರತಾಪ್​ ಸಿಂಹ ಖಂಡನೆ

ಧರ್ಮ ದಂಗಲ್​ ಕಿಡಿ ಮೈಸೂರಿನಲ್ಲಿ ಹೊತ್ತಿಕೊಂಡಿದ್ದು, ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜಯತು ಜಯತು ಜೈ…

1 hour ago

ಭಾರತದಲ್ಲಿ ಹಿಂದುಗಳ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ: ಆರ್ಥಿಕ ಸಲಹಾ ಮಂಡಳಿ

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿದ್ದು ಇದೇ ವೇಳೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ…

1 hour ago

ಪಟಾಕಿ ತಯಾರಿಕಾ ಕಾರ್ಖಾನೆ ಸ್ಫೋಟ: 8 ಮಂದಿ ಮೃತ್ಯು

ಕಾರ್ಖಾನೆಯೊಂದರಲ್ಲಿ ಪಟಾಕಿ ಸಿಡಿದು 8 ಜನರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಕಾಶಿಯಲ್ಲಿ ನಡೆದಿದೆ.

2 hours ago