News Karnataka Kannada
Wednesday, May 08 2024
ಅಂಕಣ

ಮುಖದ ಸೌಂದರ್ಯ ವೃದ್ಧಿಗೆ ಸೌತೆಕಾಯಿ ಫೇಸ್ ಪ್ಯಾಕ್

Cucumber face pack for facial beauty enhancement
Photo Credit : Freepik

ಸೌತೆಕಾಯಿ ಸೌಂದರ್ಯ ವರ್ಧಕ ಗುಣವನ್ನು ತನ್ನೊಳಗೆ ಇರಿಸಿಕೊಂಡಿದ್ದು, ಇದು ಮುಖದ ಸೌಂದರ್ಯ ವೃದ್ಧಿಗೆ ಹಾಗೂ ಮುಖದ ಹಲವಾರು ಸಮಸ್ಯೆಗಳಿಂದ ಪಾರಾಗಲು ಸಹಕಾರಿಯಾಗಿದೆ. ಸೌತೆಕಾಯಿ ಫೇಸ್ ಪ್ಯಾಕ್ ಮಾಡಲು ಕೆಲವೊಂದು ಸುಲಭ ವಿಧಾನಗಳು ಇಲ್ಲಿದೆ. ಸೌತೆಕಾಯಿ ಮತ್ತು ಮೊಸರಿನ ಫೇಸ್ ಪ್ಯಾಕ್ ಮಾಡಲು ಸೌತೆಕಾಯಿಯನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಂಡು ಅದಕ್ಕೆ ಮೊಸರು ಮಿಶ್ರಣ ಮಾಡಿ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಅನ್ವಯಿಸಿ. ಮೃದುವಾಗಿ ಮಸಾಜ್ ಮಾಡಿ. ನಂತರ ಸ್ವಚ್ಛವಾದ ನೀರಿನಿಂದ ತೊಳೆಯಿರಿ ಇದರಿಂದ ಮೊಡವೆ ಸಮಸ್ಯೆಗಳು ದೂರವಾಗಿ ಕಾಂತಿ ಹೆಚ್ಚುತ್ತದೆ.

ಸೌತೆಕಾಯಿ ಮತ್ತು ಅಲೋವೆರಾದ ಫೇಸ್ ಪ್ಯಾಕ್ ಮಾಡಲು ಸೌತೆಕಾಯಿಯನ್ನು ಚೆನ್ನಾಗಿ ಪೇಸ್ಟ್ ಮಾಡಿ ಅದಕ್ಕೆ ಅಲೋವೆರಾ ಜೆಲ್ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಒಣಗಲು ಬಿಟ್ಟು ನಂತರ ಮುಖ ತೊಳೆಯಬೇಕು ಇದರಿಂದ ತ್ವಚೆಯನ್ನು ಮೃದುವಾಗಿ ಹೊಳಪು ಹೆಚ್ಚುತ್ತದೆ.

ಕಡ್ಲೆ ಹಿಟ್ಟು ಮತ್ತು ಸೌತೆಕಾಯಿಯ ಪೇಸ್ ಪ್ಯಾಕ್ ತಯಾರಿಸಲು ಸೌತೆಕಾಯಿ ಪೇಸ್ಟ್ ಗೆ ಕಡ್ಲೆ ಹಿಟ್ಟು ಮತ್ತು ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಒಣಗಲು ಬಿಟ್ಟು, ನಂತರ ನೀರಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.

ಮುಖ ಕಾಂತಿಯುತ ಹೊಳಪನ್ನು ಪಡೆಯಲು ಸೌತೆಕಾಯಿ ಪೇಸ್ಟ್ ಗೆ ಟೊಮೆಟೊ ಪೇಸ್ಟ್ ಸೇರಿಸಿ, ಮಿಶ್ರಣ ಮಾಡಿ ಮುಖ ಹಚ್ಚಿ ಸ್ವಲ್ಪ ಸಮಯದ ನಂತರ ಸ್ವಚ್ಛವಾದ ನೀರಿನಿಂದ ತೊಳೆಯಬೇಕು.

ಒಂದು ಚಮಚ ಆಲೂಗೆಡ್ಡೆ ರಸ ಮತ್ತು ಒಂದು ಚಮಚ ಸೌತೆಕಾಯಿ ರಸ ತೆಗೆದುಕೊಂಡು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಸ್ವಚ್ಛ ನೀರಿನಿಂದ ತೊಳೆಯಬೇಕು ಇದು ಕೊಡ ಉತ್ತಮ ರಿಸಲ್ಟ್ ಕೊಡುತ್ತದೆ.

ಸೌತೆಕಾಯಿ ಮತ್ತು ಅರಿಶಿನ ಪುಡಿಯ ಫೇಸ್ ಪ್ಯಾಕ್ ತಯಾರಿಸಲು ಸೌತೆಕಾಯಿಯನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ಅದಕ್ಕೆ ಅರಿಶಿನ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ನಂತರ ಸ್ವಲ್ಪ ಸಮಯ ಹಾಗೆ ಬಿಡಿ, ನಂತರ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ತ್ವಚೆ ಹೊಳಪು ಪಡೆಯುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು