Categories: ಅಂಕಣ

ಮುಖದ ಮೇಲಿನ ಅನಗತ್ಯ ಕೂದಲನ್ನು ತೆಗೆಯಲು ಹಾಕಲು ಇಲ್ಲಿದೆ ಪರಿಹಾರ

ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುವಂತಹ ವಿಚಾರ. ಆದರೆ ಮುಖದ ಮೇಲಿನ ಮೊಡವೆ, ಮೊಡವೆ ಕಲೆಗಳು, ಅನಗತ್ಯ ಕೂದಲು, ಬ್ಲಾಕ್ಹೆಡ್ಸ್, ವೈಟೆಡ್ಸ್ ಮುಖದ ಅಂದವನ್ನು ಹಾಳುಮಾಡುತ್ತದೆ. ಇಂದು ನಾವು ಮುಖದ ಮೇಲೆ ಬೆಳೆಯುವ ಅನಗತ್ಯ ಕೂದಲನ್ನು ಹೇಗೆ ತೆಗೆದು ಹಾಕಬಹುದು ಎಂದು ತಿಳಿಯೋಣ. ಇದಕ್ಕಾಗಿ ನೀವು ಮನೆಯಲ್ಲೇ ಸಿಗುವ ಕೆಲವೊಂದು ವಸ್ತುಗಳನ್ನು ಬಳಸಿಕೊಂಡರೆ ಆಯ್ತು, ಸುಲಭವಾಗಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.

ಅರಿಶಿನದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ಇದು ಸೌಂದರ್ಯ ಹೆಚ್ಚಿಸಿಕೊಳ್ಳಲು ಸಹಕಾರಿ. ಈ ಅರಶಿನ ಪುಡಿಯಿಂದ ಹೇಗೆ ಮುಖದ ಮೇಲಿನ ಅನಗತ್ಯ ಕೂದಲನ್ನು ತೆಗೆಯಲು ಸಾಧ್ಯ ಎಂಬುದನ್ನು ತಿಳಿದುಕೊಳ್ಳೋಣ. ಅರಶಿನ ಪುಡಿಯನ್ನು ನೀರು ಅಥವಾ ಹಾಲಿನೊಂದಿಗೆ ಬೆರೆಸಿ. ಈ ಪೇಸ್ಟ್ ಅನ್ನು ಅನಗತ್ಯ ಕೂದಲಿರುವ ಜಾಗಕ್ಕೆ ಹಚ್ಚಿರಿ. ಅದನ್ನು ಒಣಗಲು ಬಿಟ್ಟು, ನಂತರ ಮಸಾಜ್ ಮಾಡಿ. ನಂತರ ಮುಖ ತೊಳೆಯಿರಿ.

ನಿಂಬೆ ರಸದೊಂದಿಗೆ ಸಕ್ಕರೆಯನ್ನು ಮಿಶ್ರಣ ಮಾಡಿ. ನಂತರ ತಯಾರಾದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ನಿಧಾನವಾಗಿ ಸ್ಕ್ರಬ್ ಮಾಡಿ ಉಗುರು ಬೆಚ್ಚಗಿನ ನೀರಿನಿಂದ ತೊಳೆದು ಕೊಳ್ಳಿ.

ಅಕ್ಕಿ ಹಿಟ್ಟಿನಲ್ಲಿ ಸ್ವಲ್ಪ ರೋಸ್ ವಾಟರ್ ಬೆರೆಸಿ ಮೃದುವಾದ ಪೇಸ್ಟ್ ಮಾಡಿಕೊಳ್ಳಿ. ಬಳಿಕ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಕೆಲವು ನಿಮಿಷಗಳ ನಂತರ ಅದನ್ನು ಸ್ಕ್ರಬ್ ಮಾಡಿ. ನಂತರ ಸ್ವಚ್ಛ ನೀರಿನಿಂದ ತೊಳೆದು ಕೊಳ್ಳಿ ಇದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.

ಕಡಲೆ ಹಿಟ್ಟಿನಲ್ಲಿಯೂ ಸೌಂದರ್ಯ ವೃದ್ಧಿಸುವ ಗುಣ ಇದೆ. ಈ ಕಡಲೆ ಹಿಟ್ಟಿಗೆ ರೋಸ್ ವಾಟರ್ ( ಗುಲಾಬಿ ನೀರು) ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಸ್ಕ್ರಬ್ ಮಾಡಿ. ನಂತರ ಮುಖ ತೊಳೆದುಕೊಳ್ಳಿ.

Gayathri SG

Recent Posts

ಅರವಿಂದ್ ಕೇಜ್ರಿವಾಲ್ ಗೆ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ಏಳು ಹಂತದ ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನವಾದ ಜೂನ್ 1ರವರೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ…

21 mins ago

ಚಾಮರಾಜನಗರದಲ್ಲಿ ಉಡ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳನ್ನು ಜೀವಂತವಾಗಿ ಸೆರೆ ಹಿಡಿದು ಸಾಗಾಟ ಮಾಡುವ ಜಾಲ ಕಾರ್ಯಾಚರಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ಪ್ರಾಣಿಗಳನ್ನು ಬೇಟೆಯಾಡಿ ಮಾಂಸ…

33 mins ago

ಮೈಸೂರಿನಲ್ಲಿ ಪರಶುರಾಮ ಜಯಂತಿ ಕಾರ್ಯಕ್ರಮ

ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಪರಶುರಾಮ‌ ಜಯಂತಿ ಅಂಗವಾಗಿ ಚಾಮರಾಜಪುರಂನಲ್ಲಿರುವ ಬ್ರಾಹ್ಮಣ ಯುವ ವೇದಿಕೆ ಕಛೇರಿಯಲ್ಲಿ ಪರಶುರಾಮ ಜಯಂತಿಯನ್ನು…

43 mins ago

ಪಕ್ಷಿಗಳಿಗೆ ಆಹಾರ ನೀಡುತ್ತಿರುವ ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳು

ವಿದ್ಯಾಕಾಶಿ ಧಾರವಾಡದಲ್ಲಿ ಕೆಎಲ್‌ಇ ಸಂಸ್ಥೆಯ ಬಿಬಿಎ ಕಾಲೇಜಿನ ವಿದ್ಯಾರ್ಥಿಗಳು ಪಕ್ಷಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.

54 mins ago

ನರೇಂದ್ರ ದಾಭೋಲ್ಕರ್​ ಹತ್ಯೆ ಕೇಸ್: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

ಸುಮಾರು 11 ವರ್ಷಗಳ ನಂತರ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ನೀಡಿದೆ. ನ್ಯಾಯಾಲಯ ಇಬ್ಬರು ಆರೋಪಿಗಳನ್ನು…

1 hour ago

ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕಾಗಿ ವ್ಯಕ್ತಿಯ ಹತ್ಯೆ

ನಗರದಲ್ಲಿ ರಾಜಕೀಯ ವೈಷಮ್ಯದ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ್ದಕ್ಕಾಗಿ ಅಫಜಲಪುರ ತಾಲೂಕಿನ…

1 hour ago