News Karnataka Kannada
Sunday, April 28 2024
ಅಂಕಣ

ಕೆಸುವಿನ ಗೆಡ್ಡೆಯಲ್ಲಿದೆ ಅದ್ಭುತ ಪೌಷ್ಟಿಕಾಂಶ ಗುಣಗಳು

Amazing nutritional properties present in mucus tubers
Photo Credit : Facebook

ಕೆಸುವನ್ನು ಕಂಡರಿಯದವರು ಯಾರು ಇಲ್ಲ. ಮಳೆಗಾಲದಲ್ಲಿ ಸೊಂಪ್ಪಾಗಿ ನೀರಿನ ತೇವಾಂಶ ಇರುವಲ್ಲಿ, ಕೆಸರು ಇರುವಲ್ಲಿ ವಿಶಾಲವಾಗಿ ಹರಡಿಕೊಂಡು ಬೆಳೆಯುತ್ತವೆ. ಸಾಮನ್ಯವಾಗಿ ಎಲೆಯ ಪತ್ರೋಡೆ, ದಂಟನ್ನು ಅರಿವೆ ಜೊತೆ ಪಲ್ಯ, ಸಾರು ಹೀಗೆ ವಿಭಿನ್ನ ಖಾದ್ಯಗಳನ್ನು ಮಾಡಲಾಗುವುದು.ಆದರೆ ಕೆಸುವಿನ ಗೆಡ್ಡೆಯಿಂದ ತಯಾರಾಗುವ ಆಹಾರಗಳು ರುಚಿಕರವಾಗಿರುತ್ತದೆ.

ಕೆಸುವಿನ ಗೆಡ್ಡೆಯ ಫ್ರೈ , ಕೆಸುವಿನನ ಗೆಡ್ಡೆಯ ಗೊಜ್ಜು, ಕೆಸುವಿನ ಗೆಡ್ಡೆಯ ಪುಳಿಮುಂಚಿ ಮತ್ತು ಪಲ್ಯ, ಸಾರು ಉತ್ತಮ ಸ್ವಧಿಷ್ಟಭರಿತವಾಗಿರುವ ಆಹಾರವಾಗಿದೆ. ಹಳ್ಳಿಗಳಲ್ಲಿನ ಹೆಚ್ಚಾಗಿ ಇದು ಸುಲಭವಾಗಿ ಸಿಗುವಂತಹ ಕೆಸುವಿನ ಗೆಡ್ಡೆಯನ್ನು ಆಹಾರವಾಗಿ ಬೆಳೆಸಲಾಗುತ್ತದೆ. ಆದರೆ ಪಟ್ಟಣಗಳಲ್ಲಿ ಇದನ್ನು ತರಕಾರಿ ಮಾರುಕಟ್ಟೆಯಲ್ಲಿ ದುಬಾರಿ ದುಡ್ಡುಕೊಟ್ಟು ತೆಗೆದುಕೊಳ್ಳ ಬೇಕಾಗುತ್ತದೆ. ಹಳ್ಳಿಗಳಲ್ಲಿ ಹೆಚ್ಚಾಗಿ ಜನರು ತಮ್ಮ ಮನೆಯ ಹಿತ್ತಲಲ್ಲಿ ಅಥಾವಾ ಮನೆಯ ಮುಂಭಾಗದಲ್ಲಿ ಖಾಲಿ ಜಾಗಗಳಲ್ಲಿ ಇದನ್ನು ಬೆಳೆಸುತ್ತಾರೆ. ಕೆಸುವಿನ ನೈಸರ್ಗಿಕ ಗುಣಲಕ್ಷಣದಂತೆ ಇದರ ಸಿಪ್ಪೆ ಸುಳಿದಾಗ ಕೈ ತುರಿಸುವುದು ಗ್ಯಾರಂಟಿ.ಆದರೆ ಬೇಯಿಸಿದಾಗ ಆಲೂಗಡ್ಡೆ, ಗೆಣಸಿನಂತೆ ಮೆತ್ತಗಾಗುತ್ತದೆ.

ಕೆಸುವಿನ ಗೆಡ್ಡೆಯು ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ನಾರಿನಂಶ ಹಾಗೂ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿ ಅಡಕವಾಗಿದೆ.
ಆಫ್ರೀಕ, ಕರಾವಳಿ ಪ್ರದೇಶ, ದಕ್ಷಿಣ ಏಷ್ಯಗಳ ಆಹಾರ ಸಂಸ್ಕೃತಿಯಲ್ಲಿ ಕಾಣಬಹುದಾಗಿದೆ. ಭಾರತದಲ್ಲಿ ಅದರಲ್ಲೂ ದಕ್ಷಿಣ ಪ್ರದೇಶಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಸುಭವಾಗಿ ಸಿಗುವ ಈ ಕೆಸುವಿನ ಗೆಡ್ಡೆಯಲ್ಲಿ ವಿಟಮಿನ್ ಬಿ೬, ವಿಟಮಿನ್ ಇ, ಪೊಟ್ಯಾಸಿಯಂ, ತಾಮ್ರ, ರಂಜಕ, ಮೆಗ್ನಷಿಯಂ, ವಿಟಮಿನ್ ಇ, ಮತ್ತು ೩೦% ರಷ್ಟು ಮ್ಯಾಂಗನೀಸ್ ಮತ್ತ ನಾರಿನಂಶವನ್ನು ಒಳಗೊಂಡಿದೆ. ಇದರಲ್ಲಿರುವ ಕಾರ್ಬೋಹೈಡ್ರೇಟ್ಸ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ನಾರಿನಂಶದ ಆಹಾರಗಳು ಹೃದಯ ಸ್ನೇಹಿ ಎನ್ನಬಹುದು. ಆದ್ದರಿಂದಲೇ ಕೆಸುವಿನ ಗೆಡ್ಡೆಯು ಹೃದಯ ಸಂಬಂಧಿ ಕಾಯಿಲೆಯ ಆಪಾಯವನ್ನು ಕಡಿಮೆ ಮಾಡುತ್ತದೆ.ತೂಕ ಇಳಿಸಿಕೋಳ್ಳಲು ಉಪಯುಕ್ತವಾಗಿದೆ. ಒಟ್ಟಿನಲ್ಲಿ ಅಗ್ಗದಲ್ಲಿ ಮನೆಯ ಹಿತ್ತಲಲ್ಲಿ ಸಿಗುವ ಸೊಪ್ಪು ತರಕಾರಿಗಳಲ್ಲಿ ಇರುವ ಆರೋಗ್ಯವು ದುಬಾರಿ ರೆಡಿಮೆಡ್ ಫುಡ್‌ಗಳಲ್ಲಿ ಸಿಗಲಾರದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು