Categories: ಅಂಕಣ

ಮರದಲ್ಲೊಂದು ಮನೆ: ಅದ್ಭುತವಾದ ಟ್ರೀ ಹೌಸ್

ಟ್ರೀ ಹೌಸ್, ಟ್ರೀಶೆಡ್ ಎಂಬುದು ನೆಲಮಟ್ಟದಿಂದ ಮೇಲಿರುವ ಹೆಚ್ಚು ಪ್ರಬುದ್ಧ ಮರಗಳ ಕಾಂಡ ಅಥವಾ ಕೊಂಬೆಗಳನ್ನು ಅವಲಂಬಿಸಿ ಅದರ ಸುತ್ತಲೂ ನಿರ್ಮಿಸಲಾದ ಮನೆಯಾಗಿದೆ. ಮರದ ಮನೆಗಳನ್ನು ಮನರಂಜನೆ, ಕೆಲಸದ ಸ್ಥಳ, ಜನವಸತಿ, ಹ್ಯಾಂಗ್ಔಟ್ ಸ್ಥಳ ಮತ್ತು ವೀಕ್ಷಣೆಗೆ ಬಳಸಬಹುದು. ಸುಂದರವಾದ ಆಕರ್ಷಣಿಯವಾದ ವಿನ್ಯಾಸವುಳ್ಳ ಮನೆಯು ಹೆಚ್ಚಾಗಿ ಇಂದು ಪ್ರೇಕ್ಷಣಿಯ ಸ್ಥಳಗಳಲ್ಲಿ ಕಾಣಬಹುದು.

ಈ ಟ್ರೀ ಹೌಸ್ ಪರಿಕಲ್ಪನೆಯ ಸುಮಾರು ಪ್ರಾಚೀನ ಕಾಲದಷ್ಟು ಹಳೆಯದು ಎಂಬುದು ಕೆಲವರ ವಾದ. ಆಯಾ ದೇಶದ ಮೂಲ ನಿವಾಸಿಗಳು ಮರವನ್ನು ಅವಲಂಬಿಸಿ ಆಶ್ರಯಿಸಿರುವ ಬಗ್ಗೆ ಉದಾಹರಣೆಗಳನ್ನು ಕಾಣಬಹುದು.ಇಂದಿಗೂ, ಉಷ್ಣವಲಯದ ಕೆಲವು ಭಾಗಗಳಲ್ಲಿ ನೆಲದ ಮೇಲಿನ ಅಪಾಯ ಮತ್ತು ಪ್ರತಿಕೂಲತೆಯಿಂದ ಪಾರಾಗಲು ಕೆಲವು ಸ್ಥಳೀಯ ಜನರು ಮರದ ಮನೆಗಳನ್ನು ನಿರ್ಮಿಸಿದ್ದಾರೆ.

ಆಧುನಿಕ ಯುಗದಲ್ಲಿ ಐಷರಾಮಿ ಟ್ರೀ ಹೌಸ್ ನಿಂದ, ರೆಸಾರ್ಟ್ ಹೋಟೆಲ್ ಗಳು ಲಭ್ಯ. ಸುಂದರ ಕ್ಷಣಗಳನ್ನು ಕಳೆಯಲು ಒಂದು ಉತ್ತಮ ಜಾಗ ಎನ್ನಬಹದು. ಟ್ರೀ ಹೌಸ್ ಇಂದು ಟೂರಿಸಂನ ಒಂದು ಅವಿಭಾಜ್ಯ ಅಂಗವಾಗಿದೆ. ಸಾಕಷ್ಟು ಸ್ಥಳಗಳಲ್ಲಿ ಇಂದು ಟ್ರೀ ಹೌಸ್ ಗಳನ್ನು ಕಾಣಬಹುದು. ಆನರನ್ನು ಆಕರ್ಷಿಸಲು ಸತತ ಪ್ರಯತ್ನಗಳು ನಡೆಯುತ್ತಿದೆ.

ಟ್ರೀ ಹೌಸ್ ಗಳ ಒಳನೋಟ ಇನ್ನು ಅಧ್ಭುತವಾಗಿರುತ್ತದೆ. ಸಾಮಾನ್ಯವಾಗಿ ನಾವು ವಾಸ ಮಾಡುವ ಮನೆಗಳು ಹೇಗಿರುತ್ತದೇಯೋ ಅದೇ ರೀತಿ ಬೆಡ್ ರೂಂ, ಅಡುಗೆ ಮನೆ, ಹಾಲ್, ಡೈನಿಂಗ್ ಹಾಲ್ ಬಾತ್ ರೂಂ ಹೀಗೆ ಮನೆಯ ಎಲ್ಲಾ ಎನಿಮೆಂಟ್ ಗಳು ಇರುತ್ತವೆ.

ವಿದೇಶಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ಹೋಟೆಲ್ ಗಳು ಕೂಡ ಟ್ರೀ ಹೌಸ್ ನ ಪರಿಕಲ್ಪನೆಯೊಂದಿಗೆ ವಿನ್ಯಾಸಗೊಂಡು ಜನರನ್ನು ತನ್ನತ್ತ ಸೆಳೆಯುತ್ತಿದೆ.

Ashika S

Recent Posts

ಅನೈತಿಕ ಸಂಬಂಧ ಶಂಕೆ: ಬೀದರ್​​ನಲ್ಲಿ ಯುವಕರಿಂದ ನೈತಿಕ ಪೊಲೀಸ್​ ಗಿರಿ

ಹಿಂದೂ ಯುವಕನ ಜೊತೆ ಮುಸ್ಲಿಂ ಸಮುದಾಯದ ಮಹಿಳೆ ಕುಳಿತಿದಕ್ಕೆ ಅದೇ ಕೋಮಿನ ಯುವಕರ ಗುಂಪೊಂದು ಹಲ್ಲೆ ನಡೆಸಿ, ನೈತಿಕ ಪೊಲೀಸ್​​…

4 hours ago

ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಆರೋಪಿ ಸೆರೆ

ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀಕನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ  ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದ ಆರೋಪಿಯನ್ನು…

4 hours ago

ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ

ಸಿಲಿಕಾನ್ ಸಿಟಿಯಲ್ಲಿ ಹುಸಿ ಬಾಂಬ್ ಬೆದರಿಕೆ ಮೇಲ್ ಮುಂದುವರೆದಿದ್ದು, ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಾದ ನಾಗವಾರದ ಸೇಂಟ್ ಫಿಲೋಮಿನಾ ಸೇರಿದಂತೆ…

5 hours ago

ಬೀದರ್‌: ಜಿಲ್ಲೆಯಾದ್ಯಂತ ತಂಪೆರೆದ ಮಳೆ, ಸಿಡಿಲಿಗೆ ವ್ಯಕ್ತಿ ಸಾವು

ಜಿಲ್ಲೆಯಾದ್ಯಂತ ಭಾನುವಾರ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.

5 hours ago

ಆಮ್ ಆದ್ಮಿ ಪಕ್ಷವನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ

ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಚುನಾವಣಾ…

6 hours ago

ಗೌಡರ ಕುಟುಂಬಕ್ಕೆ ಮೋಸ ಮಾಡುವುದಿಲ್ಲ: ಕೆ.ಮಂಜು

ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ಎಚ್.ಡಿ.ದೇವೇಗೌಡರು, ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಎ.…

7 hours ago