ಅಂಕಣ

ಸೌಭಾಗ್ಯದ ಸಂಕೇತ ಹಸಿರು ಗಾಜಿನ ಬಳೆ

ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಹಸಿರು ಗಾಜಿನ ಬಳೆಗಳ ಸ್ಥಾನವನ್ನು ಕೃತಕ ಆಭರಣಗಳು ಆಕ್ರಮಿಸಿಕೊಂಡಿವೆ. ಬಳೆಯು ಇಲ್ಲಿನ ಸಂಸ್ಕೃತಿ, ಧಾರ್ಮಿಕ ಆಚರಣೆಯೊಂದಿಗೆ ಬೆರೆತು ಹೋಗಿದೆ. ಇದರ ಬಳಕೆಯಲ್ಲಿ ಧರ್ಮ ಭೇದವಿಲ್ಲ. ಎಲ್ಲಾ ಧರ್ಮದ ಮಹಿಳೆಯರು ಕೈತುಂಬ ಬಳೆ ಧರಿಸಿ ಸಂಭ್ರಮಿಸುತ್ತಾರೆ.

ವಿಶೇಷ ಕಾರ್ಯಕ್ರಮಗಳಾದ ಮದುವೆ, ಸೀಮಂತ, ಹಬ್ಬ ಹರಿದಿನಗಳಲ್ಲಿ ಚಿನ್ನ, ಗಾಜು, ಪ್ಲಾಸ್ಟಿಕ್ ಬಳೆಗಳು ಮಹಿಳೆಯರ ಕೈಯನ್ನು ಅಲಂಕರಿಸುತ್ತವೆ. ಹಿಂದೂ ಧರ್ಮದ ಹಾಗೂ ಬಳೆಯ ನಡುವೆ ಅವಿನಾಭಾವ ಸಂಬಂಧವಿದೆ. ಇಲ್ಲಿ ಬಳೆ ಸೌಭಾಗ್ಯದ ಸಂಕೇತ. ಮದುವೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇದರ ಪಾತ್ರ ಹಿರಿದು. ಮದುವೆ ಸಮಾರಂಭದಲ್ಲಿ ವಧು ಸುಂದರವಾಗಿ ಕಾಣುವುದರಲ್ಲಿ ಬಳೆಗಳ ಪಾಲೂ ಇದೆ. ಸೀಮಂತದ ಸಂದರ್ಭದಲ್ಲಿ ಗರ್ಭಿಣಿಗೆ ಹಸಿರು ಗಾಜಿನ ಬಳೆಗಳನ್ನು ತೊಡಿಸುವ ಸಂಪ್ರದಾಯವೂ ಇದೆ.

ಹಸಿರು ಗಾಜಿನ ಬಳೆಗಳು ಮಂಗಳದ ಸೂಚಕ. ಅದನ್ನು ತೊಟ್ಟು ಹೆಣ್ಣು ಮಕ್ಕಳು ಮನೆಯಲ್ಲಿ ಓಡಾಡುತ್ತಿದ್ದರೆ ಅದೇ ಹಬ್ಬ ಅನ್ನುತ್ತಾರೆ ಹಿರಿಯರು. ಮಹಿಳೆಗೆ ಮುತೈದೆ ಸ್ಥಾನ ತುಂಬುವಲ್ಲಿ ಮಂಗಳದಾಯಕವಾದಂತಹ ಮಧುರ ಮನಸ್ಸಿಗೆ ಮುದ ನೀಡುವ ಬಳೆಗಳು ಹೆಣ್ಣಿನ ಸೌಂದರ್ಯ ಹೆಚ್ಚಿಸುತ್ತವೆ.

ನಮ್ಮ ದೇಶದ ಸಂಸ್ಕೃತಿಯಲ್ಲಿ ಪ್ರತಿಯೊಂದು ಬಣ್ಣದ ಬಳೆಯೂ ಒಂದೊಂದು ಅರ್ಥವನ್ನು ಧ್ವನಿಸುತ್ತದೆ. ಕೆಂಪು ಬಣ್ಣದ ಬಳೆ ತೊಡುವುದರಿಂದ ಶಕ್ತಿ ಮತ್ತು ಉತ್ಸಾಹ ವೃದ್ಧಿಸಿದರೆ, ನೀಲಿ ಬಣ್ಣ ಬುದ್ಧಿವಂತಿಕೆ ಪ್ರತಿಪಾದಿಸುತ್ತದೆ. ನೇರಳೆ ಬಣ್ಣ ಸ್ವಾತಂತ್ರ‍್ಯ, ಹಸಿರು ಬಣ್ಣ ಅದೃಷ್ಟ, ಹಳದಿ ಬಣ್ಣ ಸಂತೋಷ, ಕೇಸರಿ ಬಣ್ಣ ಯಶಸ್ಸು, ಕಪ್ಪು ಮತ್ತು ಬಿಳಿ ಬಣ್ಣ ಕ್ರಮವಾಗಿ ಬಲ ಹಾಗೂ ಹೊಸ ಶಕೆಯನ್ನು ಅರ್ಥವನ್ನು ಧ್ವನಿಸುತ್ತದೆ. ಚಿನ್ನದ ಬಳೆಯನ್ನು ಧರಿಸುವುದರಿಂದ ಸುಯೋಗ ಮತ್ತು ಏಳಿಗೆ ಲಭಿಸುತ್ತದೆ ಎಂಬ ನಂಬಿಕೆ ಇದೆ.

ಇತ್ತೀಜಿನ ದಿನಗಳಲ್ಲಿ ಬಳೆಗಳನ್ನು ಒಂದು ಅದೃಷ್ಟ, ಸಂಪ್ರದಾಯ ಅಥವಾ ಫ್ಯಾಷನ್‌ಗಾಗಿ ಧರಿಸಲಾಗುತ್ತದೆ. ಮೊದಲು ಮಣ್ಣಿನಿಂದ ತಯಾರಾಗುತ್ತಿದ್ದ ಬಳೆಗಳು ಇಂದು ಮುತ್ತು, ರತ್ನ, ವಜ್ರಗಳಿಂದ ಕೂಡಿದೆ. ಆದರೆ ಅಂದಿನಿಂದ ಇಂದಿನವರೆಗೂ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ.

Gayathri SG

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

7 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

8 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

8 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

9 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

9 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

9 hours ago