ಅಂಕಣ

ಸುಮಂಗಲಿಯರ ಸಂಕೇತ ಬೆಳ್ಳಿ ಕಾಲುಂಗುರ

ಭಾರತೀಯ ಸಂಸ್ಕೃತಿಯಲ್ಲಿ ಸುಮಂಗಲಿಯರ ಸಂಕೇತ ಎಂದೆನಿಸಿಕೊಳ್ಳುವ ಐದು ಮುತ್ತುಗಳಲ್ಲಿ ಕಾಲುಂಗುರವೂ ಒಂದಾಗಿದ್ದು, ಮಹಿಳೆಯರ ವೈವಾಹಿಕ ಬದುಕಿನಲ್ಲಿ ಮಾಂಗಲ್ಯ, ಕರಿಮಣಿಯಂತೆ ಕಾಲುಂಗುರವು ಮಹತ್ವದ ಸ್ಥಾನವನ್ನು ಪಡೆದಿದೆ.

ನಮ್ಮ ಸಂಪ್ರದಾಯದಲ್ಲಿ ಹಣೆಗೆ ಕುಂಕುಮ, ಕೈಗೆ ಬಳೆ, ಮೂಗುತಿ ಹಾಗೂ ಕಿವಿಯೋಲೆ ಧರಿಸಿದರೆ ಆಕೆ ಮುತ್ತೈದೆ ಎಂದೆನಿಸಿಕೊಳ್ಳತ್ತಾಳೆ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಿರಿಯರು ಮಾಡಿದ ಇಂತಹ ಸಂಪ್ರದಾಯ ಆರೋಗ್ಯಕ್ಕೆ ಪೂರಕವಾಗಿರುವಂತಹ ಸಂಪ್ರದಾಯ.

ಮದುವೆಯ ದಿನದಂದು ಕಾಲುಂಗುರವನ್ನು ತೊಡಿಸುವ ಶಾಸ್ತ್ರವಿದೆ. ಹೆಣ್ಣಿನ ತಾಯಿ, ಹಿರಿಯ ಸುಮಂಗಲಿಯರು, ಮದುಮಗ, ಸೋದರಮಾವ, ಅತ್ತೆ ಹೀಗೆ ಅವರವರ ಸಂಪ್ರದಾಯಕ್ಕೆ ತಕ್ಕಂತೆ ಮದುಮಗಳಿಗೆ ಉಂಗುರ ತೊಡಿಸುವ ಶಾಸ್ತ್ರ ಇದೆ. ಇನ್ನೂ ಕೆಲವು ಸಂಪ್ರದಾಯದಲ್ಲಿ ಮದುಮಗನೂ ತೋರು ಬೆರಳಿಗೆ ಒಂದು ಸುತ್ತಿನ ಕಾಲುಂಗುರ ಹಾಕುವ ಪದ್ಧತಿ ಇದೆ.

ಸಾಮಾನ್ಯವಾಗಿ ಕಾಲುಂಗುರ ಹೆಬ್ಬೆರೆಳಿನ ಪಕ್ಕದ ಬೆರೆಳಿಗೆ ತೊಡುತ್ತಾರೆ. ಮದುವೆಯಾದ ಬಳಿಕ ಧರಿಸುವ ಬೆಳ್ಳಿ ಕಾಲುಂಗುರ ಸಾಂಪ್ರದಾಯಿಕ, ಫ್ಯಾಷನ್ ಮತು ಅಲಂಕಾರಿಕಾ ಆಭರಣ. ಹೆಣ್ಣು ಮಕ್ಕಳು ಕಾಲಕ್ಕೆ ತಕ್ಕಂತೆ ತಮ್ಮ ಫ್ಯಾಷನ್‌ಗಳನ್ನು ಟ್ರೆಂಡ್‌ಗೆ ಅನುಗುಣವಾಗಿ ಬದಲಾಯಿಸಿಕೊಳ್ಳುತ್ತಾರೆ. ಬೆಳ್ಳಿಯ ಕಾಲುಂಗುರದ ಬದಲು ವೈಟ್ ಮೆಟಲ್, ಅಥವಾ ಆನ್ಯ ಲೋಹದಿಂದ ತಯಾರಿಸಲ್ಪಟ್ಟ ಕಾಲುಂಗುರಗಳತ್ತವೂ ಆಕರ್ಷಿತರಾಗುತ್ತಿದ್ದಾರೆ.

ಕಾಲುಂಗುರಗಳು ಹೆಚ್ಚಾಗಿ ಬೆಳ್ಳಿಯದ್ದೇ ಆಗಿರುತ್ತದೆ. ಆದರೆ ಇಂದು ಕೆಲವರು ಬಂಗಾರದ ಕಾಲುಂಗುರವನ್ನು ತೋಡುತ್ತಾರೆ. ಅದು ಅಷ್ಟೊಂದು ದೇಹಕ್ಕೆ ಒಳ್ಳೆಯದಲ್ಲ. ಮಾತ್ರವಲ್ಲದೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದು ನಂಬಿಕೆ ಇದೆ. ಚಿನ್ನ ಲಕ್ಷ್ಮಿ ದೇವಿಯ ಸಂಕೇತ. ಆದ್ದರಿಂದ ಚಿನ್ನವನ್ನು ಕಾಲಿಗೆ ಹಾಕಲು ಕೆಲವರು ಇಷ್ಟ ಪಡೋದಿಲ್ಲ.

ಬೆಳ್ಳಿ ಉಂಗುರ ಹಾಕುವುದರಿಂದ ಹಲವಾರು ಉಪಯೋಗಗಳಿವೆ. ಬೆಳ್ಳಿಯ ಕಾಲುಂಗುರ ಭೂಮಿಯ ಧ್ರುವಶಕ್ತಿಯನ್ನು ಹೀರಿಕೊಂಡು ದೇಹದಲ್ಲೆಲ್ಲಾ ಧನಾತ್ಮಕ ಶಕ್ತಿಯನ್ನು ಸಂಚಾರವಾಗುವಂತೆ ಮಾಡುತ್ತದೆ. ಜೊತೆಗೆ ಬೆಳ್ಳಿಗೆ ಚರ್ಮರೋಗವನ್ನು ತಡೆಯುವ ಶಕ್ತಿಯಿದೆ. ರಕ್ತದ ಪರಿಚಲನೆ ಉತ್ತಮವಾಗುತ್ತದೆ. ಇದರಿಂದ ಗರ್ಭಕೋಶ ಆರೋಗ್ಯದಿಂದಿರಲು ಸಹಕಾರಿಯಾಗುತ್ತದೆ.

Gayathri SG

Recent Posts

ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಠಾಣೆಗೆ ಮುತ್ತಿಗೆ ಯತ್ನ, ಪ್ರತಿಭಟನೆ

ನಗರದಲ್ಲಿ ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು…

8 mins ago

ಅಕ್ರಮ ಅಡುಗೆ ಎಣ್ಣೆ ಮಾರಾಟ: ಚಾಲಕ ಪೊಲೀಸರ ವಶಕ್ಕೆ

ಅಕ್ರಮವಾಗಿ ಅಡುಗೆ ಎಣ್ಣೆ ಮಾರಾಟ ಮಾಡಿ ಲಾರಿ ಪಲ್ಟಿಯಾಗಿ ಎಣ್ಣೆ ಕಳುವಾಗಿದೆ ಎಂದು ಮಾಲೀಕರಿಗೆ ಸುಳ್ಳು ಹೇಳಿದ್ದ ಚಾಲಕ ಸಿಕ್ಕಿಬಿದ್ದಿರುವ…

9 mins ago

ತ್ರಿವಳಿ ತಲಾಖ್‌ನಿಂದ ನೊಂದು ಹಿಂದೂ ಯುವಕನ್ನು ಮದುವೆಯಾದ ಮುಸ್ಲಿಂ ಮಹಿಳೆ

ತ್ರಿವಳಿ ತಲಾಖ್‌ ನಿಂದ ನೊಂದಿದ್ದ ಮುಸ್ಲಿಂ ಮಹಿಳೆಯೊಬ್ಬಳು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಯುವಕನನ್ನು ಮದುವೆ ಆಗಿರುವ ಘಟನೆ ಉತ್ತರಪ್ರದೇಶದಲ್ಲಿ…

27 mins ago

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್​​ ಫೈರ್; ಯುವಕ ಸಾವು

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್ ಫೈರ್ ಆದ ಘಟನೆ ಚಿಕ್ಕಮಗಳೂರಿನ ತಾಲೂಕಿನ ಉಲುವಾಗಿಲು ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದಲ್ಲಿ…

38 mins ago

ಖಾರವಾದ ಚಿಪ್ಸ್ ತಿಂದ 14ರ ಬಾಲಕನಿಗೆ ಹೃದಯ ಸ್ತಂಭನ

ಅತ್ಯಂತ ಖಾರವಾದ ಟೋರ್ಟಿಲ್ಲಾ ಚಿಪ್ ತಿನ್ನುವ ಸಾಮಾಜಿಕ ಮಾಧ್ಯಮ ಚಾಲೆಂಜ್‌ ನಲ್ಲಿ ಭಾಗವಹಿಸಿದ ಅಮೆರಿಕದ 14ರ ಹರೆಯದ ಹುಡುಗನೊಬ್ಬ ಹೃದಯ…

53 mins ago

ನಂಜನಗೂಡು ಶ್ರೀ ನಂಜುಂಡೇಶ್ವರನ ದರ್ಶನ ಪಡೆದ ಹೆಚ್. ಡಿ ರೇವಣ್ಣ

ಮಹಿಳೆ ಕಿಡ್ನಾಪ್ ಕೇಸ್ ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಮಾಜಿ ಸಚಿವ ಹೆಚ್.…

1 hour ago