ಅಂಕಣ

ಮಧ್ಯ ವಯಸ್ಕರನ್ನು ಕಾಡುವ ಮೊಡವೆ ಸಮಸ್ಯೆ ನಿವಾರಿಸಲು ಇಲ್ಲಿದೆ ಪರಿಹಾರ

ಹದಿಹರೆಯದ ಹುಡುಗ ಹುಡುಗಿಯ ದೊಡ್ಡ ಸಮಸ್ಯೆ ಮುಖದ ಮೇಲೆ ಮೊಡವೆ ಬೀಳುವುದು. ಕಾಲೇಜಿಗೆ ಹೋಗೋ ತರುಣ ತರುಣಿಯರು ಮುಖದ ಬಗ್ಗೆ ಅತೀ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅಂತವರಿಗೆ ಮುಖದಲ್ಲಿ ಸಣ್ಣ ಕಳೆ ಯಾದರೂ ಅದು ಅವರರಿಗೆ ದೊಡ್ಡ ಸಮಸ್ಯೆಯಂತೆ ಭಾಸವಾಗುತ್ತದೆ. ಮೊಡವೆ ಉಂಟಾಗಲು ಅನೇಕ ಕಾರಣಗಳಿವೆ. ಹಾರ್ಮೋನುಗಳ ಬದಲಾವಣೆ, ವೈದ್ಯಕೀಯ ಕಾರಣಗಳು ಮತ್ತು ಜೀವನಶೈಲಿಯ ಅಂಶಗಳು ಸಾಮಾನ್ಯವಾಗಿ ಮೊಡವೆ ಉಂಟಾಗಲು ಕಾರಣವಾಗಿರುತ್ತವೆ.

ಮೊಡವೆಗಳು ಬಂದರೂ ಅವುಗಳ ಕಲೆ ಉಳಿಯದಂತೆ ನೋಡಿಕೊಳ್ಳಬೇಕು. ಆಹಾರದಲ್ಲಿ ಹೆಚ್ಚು ಕರಿದ ಪದಾರ್ಥಗಳ ಸೇವನೆ ಬೇಡ. ಮಲಬದ್ಧತೆಯ ತೊಂದರೆಯಿದ್ದಲ್ಲಿ ಅದನ್ನು ನಿವಾರಿಸಿಕೊಳ್ಳಬೇಕು. ದಿನಕ್ಕೆ ನಾಲ್ಕೈದು ಬಾರಿ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು. ಮುಖದಲ್ಲಿ ಜಿಡ್ಡಿನಂಶವಿಲ್ಲದಂತೆ ನೋಡಿಕೊಳ್ಳಬೇಕು. ಮುಖ ಒರೆಸಿಕೊಳ್ಳಲು ಮೃದುವಾದ ಹತ್ತಿ ಬಟ್ಟೆಯನ್ನು ಇಟ್ಟುಕೊಳ್ಳಬೇಕು

ಜಿಡ್ಡಿನ ಆಹಾರ ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡುವವರಲ್ಲಿ ಮೊಡವೆಯು ಹೆಚ್ಚು ಉಂಟಾಗುತ್ತದೆ. ಕೊಬ್ಬು ದೇಹದಲ್ಲಿ ಪ್ರವೇಶಿಸಿ ರಕ್ತದಲ್ಲಿ ಸೇರಿಕೊಳ್ಳುತ್ತದೆ. ಹೆಚ್ಚಾದ ಕೊಬ್ಬು ತೈಲಗ್ರಂಥಿಗಳ ಮೂಲಕ ಹೊರಹೋಗುತ್ತದೆ. ಅದು ಹೊರಹೋಗುವಾಗ ರಂಧ್ರಗಳನ್ನು ಪ್ರಚೋದಿಸುವುದಲ್ಲದೇ ಮೊಡವೆಗಳಿಗೆ ಕಾರಣವಾಗುತ್ತದೆ. ಬೆಣ್ಣೆ, ಚೀಸ್, ಹಾಲು, ಆಲೂಚಿಪ್ಸ್, ತುಪ್ಪ, ಮಾಂಸಾಹಾರ ಮುಂತಾದವುಗಳಲ್ಲಿ ಕೊಬ್ಬು ಅಧಿಕ ಪ್ರಮಾಣದಲ್ಲಿರುತ್ತದೆ.

ಕೆಲವೊಂದು ರೀತಿಯ ಔಷಧಿಗಳು ಮೊಡವೆಗೆ ಕಾರಣ ಆಗುತ್ತವೆ. ನಿಮ್ಮ ಚರ್ಮಕ್ಕೆ ಹೊಂದಿಕೆಯಾಗದ ಚರ್ಮ ಮತ್ತು ಮೇಕಪ್ ಉತ್ಪನ್ನಗಳನ್ನು ಬಳಸಿದಾಗ. ಮುಖದಲ್ಲಿ ಬೆವರನ್ನು ಪದೇ ಪದೇ ಅಥವಾ ಸರಿಯಾಗಿ ತೊಳೆದುಕೊಳ್ಳದಿರುವುದು ಮತ್ತು ದಿನದ ಅಂತ್ಯದಲ್ಲಿ ಮೇಕಪ್ ತೆಗೆಯದಿರುವುದು. ಪಿಸಿಓಡಿ ಸಮಸ್ಯೆಯಿದ್ದರೂ ಮೊಡವೆ ಉಂಟಾಗುತ್ತದೆ. ಮೈನೆರೆಯುವಿಕೆ ಅಥವಾ ಗರ್ಭಾವಸ್ಥೆಯಂತಹ , ಹಾರ್ಮೋನು ಬದಲಾವಣೆಯ ಸಂದರ್ಭಗಳು. ರಿಫೈನ್‍ಡ್ ಸಕ್ಕರೆ , ಉಪ್ಪು ಮತ್ತು ಕಾರ್ಬೋಹೈಡ್ರೇಟ್‍ ಗಳನ್ನು ಹೊಂದಿರುವ ಆಹಾರ ಕ್ರಮ ಕೂಡ ಮೊಡವೆಗಳಿಗೆ ಕಾರಣವಾಗಬಹುದು.

ಮುಖದ ಮೇಲಿನ ಮೊಡವೆಯನ್ನು ಮಾಯ ಮಾಡಲು ಇಲ್ಲದೆ ಸುಲಭ ಉಪಾಯ,  ಚರ್ಮದ ಆರೈಕೆಯ ಪ್ರಮುಖ ಸಾಮಾಗ್ರಿಯಾಗಿ ಲೋಳೆಸರ (ಅಲೋವೇರಾ) ಹೆಸರುವಾಸಿ. ತಾಜಾ ಅಲೋವೇರಾ ಜೆಲ್ ರಾತ್ರಿ ಬೆಳಗಾಗುವುದರ ಒಳಗೆ ಮೊಡವೆ ಸಮಸ್ಯೆಯನ್ನು ಪರಿಹರಿಸಬಲ್ಲದು.

ಮೊಡವೆಯಿಂದ ಹಾನಿಗೊಂಡ ಚರ್ಮಕ್ಕೆ ಜೇನು ತುಪ್ಪ ಲೇಪಿಸುವುದರಿಂದ ಬಹಳ ಪ್ರಯೋಜನ ಇದೆ. ಅದರಲ್ಲಿರುವ ಆ್ಯಂಟಿಬ್ಯಾಕ್ಟೀರಿಯಲ್ ಅಂಶಗಳು ಉರಿಯೂತನ್ನು ತಗ್ಗಿಸಿ, ಬೇಗ ಗುಣಮುಖವಾಗಲು ಸಹಕರಿಸುತ್ತದೆ. ಹಾನಿಗೊಂಡ ಜಾಗಕ್ಕೆ ರಾತ್ರಿ ಒಂದು ಅಥವಾ ಎರಡು ಹನಿ ಜೇನು ತುಪ್ಪ ಲೇಪಿಸಿ ಮತ್ತು ಅದನ್ನು ಬೆಳಗ್ಗೆ ತೊಳೆದು ತೆಗೆಯಿರಿ.

ಮಂಜುಗಡ್ಡೆಯ ತುಂಡನ್ನು ಒಂದು ಒಳ್ಳೆಯ ಬಟ್ಟೆಯಲ್ಲಿ ಸುತ್ತಿ, ಮೊಡವೆ ಇರುವ ಜಾಗಕ್ಕೆ ಇಡಿ. ಮಂಜುಗಡ್ಡೆಯನ್ನು ನೇರವಾಗಿ ಚರ್ಮಕ್ಕೆ ಇಡಬೇಡಿ ಅಥವಾ ಒಂದೇ ಜಾಗದಲ್ಲಿ 20 ನಿಮಿಷಗಳ ಕಾಲ ಇಡಬೇಡಿ. ನೀವು ಎರಡು ದಿನಕ್ಕೊಮ್ಮೆ ಇದನ್ನು ಮಾಡಬಹುದು.

ಹಸಿರು ಚಹಾದ ಬ್ಯಾಗನ್ನು ಬಿಸಿ ನೀರಲ್ಲಿ ಹಾಕಿ, ಸ್ವಲ್ಪ ಸಮಯದ ನಂತರ ಅದನ್ನು ತೆಗೆದು , ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಅದನ್ನು ಮೊಡವೆಗಳ ಮೇಲೆ ಇಡಿ. ರಾತ್ರಿ ಮಲಗುವ ಮೊದಲು ಹಸಿರು ಚಹಾದ ಬ್ಯಾಗನ್ನು ಮೊಡವೆ ಮೇಲೆ ಇಟ್ಟುಕೊಳ್ಳಿ. ಅದರಲ್ಲಿರುವ ಉರಿಯೂತ ನಿವಾರಕ ಅಂಶಗಳು , ಊರಿಯೂತ ಮತ್ತು ಕೆಂಪಾದ ಚರ್ಮವನ್ನು ಕಡಿಮೆ ಮಾಡಬಹುದು.

Gayathri SG

Recent Posts

ವಾಸವಿ ಯುವಜನ ಸಂಘದಿಂದ ರಕ್ತದಾನ ಶಿಬಿರ : ದಿನೇಶ್‌ಗುಪ್ತ

ನಗರದ ವಾಸವಿ ಯುವಜನ ಸಂಘ ಮತ್ತು ವಾಸವಿ ಕ್ಲಬ್‌ ಆಶ್ರಯದಲ್ಲಿ ಇಂದು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು…

11 mins ago

ಗ್ರಾಮಸ್ಥರ ಆರೋಗ್ಯ ಸುರಕ್ಷತೆಗೆ ಕ್ರಮಕೈಗೊಳ್ಳಲು ಬಿಜೆಪಿ ಒತ್ತಾಯ

ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿ ಗಳ ತಂಡವನ್ನು ರಚಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು ಎಂದು ಎರೆಹಳ್ಳಿ ಗ್ರಾಮಸ್ಥರು…

19 mins ago

ಕಿಯಾ ಕಾರಿಗೆ ಅಡ್ಡ ಬಂದ ಕುದುರೆ: ಸರಣಿ ಅಪಘಾತ

ಕುದುರೆಯೊಂದು ಏಕಾಏಕಿ ಕಿಯಾ ಕಾರಿಗೆ ಅಡ್ಡ ಬಂದ ಕಾರಣ ಸರಣಿ ಅಪಘಾತ ಸಂಭಿಸಿರೋ ಘಟನೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹ್ಯಾಂಡ್…

20 mins ago

ಹಿರಿಯಡ್ಕ: ಕಾಲೇಜಿಗೆ ಹೋದ ಯುವತಿ ನಾಪತ್ತೆ

ಹಿರಿಯಡ್ಕ ನಿವಾಸಿ ವಿದ್ಯಾಲಕ್ಷ್ಮೀ (20) ಎಂಬ ಯುವತಿಯು ಏಪ್ರಿಲ್ 19 ರಂದು ಕಾಲೇಜಿಗೆಂದು ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

29 mins ago

ಕೆಸರು ಗದ್ದೆಯಾದ ತಾಲೂಕು ಆಡಳಿತ ಸೌಧ: ಕೆಲಸಕ್ಕಾಗಿ ಬಂದ ಸಾರ್ವಜನಿಕರ ಪರದಾಟ

ಅಫಜಲಪುರ ತಾಲೂಕು ಆಡಳಿತ ಸೌಧ ಅಕ್ಷರಶಃ ಕೆಸರು ಗದ್ದೆಯಾಗಿದೆ. ದಿನಾಲು ಸಾವಿರಾರು ಜನರು ತಹಶೀಲ್ದಾರ ಕಚೇರಿಗೆ ತಮ್ಮ ಕೆಲಸಗಳಿಗೆ ಬಂದು…

44 mins ago

ಮರಾಠಿ ಭಾಷೆಯಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನ ಅನಾವರಣ

ಯಕ್ಷಗಾನದ ಹಿರಿಮೆ ಇದೀಗ ಗಡಿದಾಟಿ ಮಹಾರಾಷ್ಟ್ರದಲ್ಲೂ ಸದ್ದು ಮಾಡಿದೆ. ಸಂಪೂರ್ಣ ಮರಾಠಿ ಭಾಷೆಯಲ್ಲಿ ನಡೆದ ಅಪರೂಪದ ಯಕ್ಷಗಾನ ಮಹಾರಾಷ್ಟ್ರ ಪ್ರೇಕ್ಷಕರ…

58 mins ago