News Karnataka Kannada
Monday, April 29 2024
ಅಂಕಣ

ನೀವು ಆರೋಗ್ಯವಾಗಿದ್ದೀರಾ? ಈ ಪ್ರಶ್ನೆಯನ್ನು ನಿಮ್ಮಲ್ಲಿ ನೀವು ಒಂದು ಬಾರಿ ಕೇಳಿ ನೋಡಿ…

Swathi Column (13 01 2022)
Photo Credit :

ನೀವು ಆರೋಗ್ಯವಾಗಿದ್ದೀರಾ? ಈ ಪ್ರಶ್ನೆಯನ್ನು ನಿಮ್ಮಲ್ಲಿ ನೀವು ಒಂದು ಬಾರಿ ಕೇಳಿ ನೋಡಿ. ನಿಮ್ಮ ಉತ್ತರ ಸಾಮಾನ್ಯವಾಗಿ ಹೌದು ಎಂದು ಇರಬಹುದು ಆದರೆ ಈ ಕೆಳಗಿನ ಅಂಶಗಳು ವಾಸ್ತವದಲ್ಲಿ ನೀವೆಷ್ಟು ಆರೋಗ್ಯವಾಗಿದ್ದೀರಿ ಎಂಬುದನ್ನು ತಿಳಿಯಲು ಸಹಾಯವಾಗುತ್ತದೆ.
ಆರೋಗ್ಯಯುತವಾಗಿ ಇರುವುದೆಂದರೆ ಕೇವಲ ಕಾಯಿಲೆಗಳಿಂದ ದೂರವಿರುವುದು ಮಾತ್ರವಲ್ಲ,ಬದಲಾಗಿ ಆರೋಗ್ಯಯುತ ವಾಗಿರುವುದು ಎಂದರೆ ದೈಹಿಕವಾಗಿ ಮಾನಸಿಕವಾಗಿ ಸಾಮಾಜಿಕವಾಗಿ ಸದೃಢ ವಾಗಿರುವುದು. ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಯಂತ್ರಗಳ ಮೂಲಕ ನಮ್ಮ ಆರೋಗ್ಯದ ಬಗ್ಗೆ ತಿಳಿಯಬಹುದು, ಅಲ್ಲಿ ನಿಮಗೆ ಬಿಪಿ ಶುಗರ್ ಗಳಂತಹ ಸಮಸ್ಯೆ ಇಲ್ಲವೆಂದು ಬರಬಹುದು ಈ‌ ಕೆಳಗಿನ ಪ್ರಶ್ನೆಗಳನ್ನು ಒಂದು ಬಾರಿ ನಿಮ್ಮಲ್ಲಿ ನೀವು ಪ್ರಶ್ನಿಸಿಕೊಳ್ಳಿ,
1) ನನಗೆ ಸಮಯಕ್ಕೆ ಸರಿಯಾಗಿ ಹಸಿವು ಆಗುತ್ತಿದೆಯೇ?
2) ಸೇವಿಸಿದಂತಹ ಆಹಾರವು ಉತ್ತಮ ರೀತಿಯಲ್ಲಿ ಜೀರ್ಣವಾಗುತ್ತಿದೆಯೇ?
3) ಮಲಮೂತ್ರ ಯಾವುದೇ ಸಮಸ್ಯೆ ಇಲ್ಲದೆ ಹೋಗುತ್ತಿದೆ?
4) ನನಗೆ ಉತ್ತಮ ರೀತಿಯಲ್ಲಿ ನಿದ್ರೆ ಬರುತ್ತಿದೆಯೇ? ಇಲ್ಲ ಮಧ್ಯೆ ಎಚ್ಚರವಾಗಿ ಮತ್ತೆ ನಿದ್ರಿಸಲು ಕಷ್ಟವಾಗುತ್ತಿದೆಯೇ?
5) ಅದೇ ರೀತಿ ಬೆಳಗ್ಗೆ ಎದ್ದಕೂಡಲೇ ನಿಮ್ಮ ದಿನ ಉಲ್ಲಾಸದಿಂದ ಇರುತ್ತದೆಯೇ?
6) ಇಲ್ಲವೇ ಮೈಕೈ ನೋವು ಉದಾಸೀನತೆ ಎದುರಾಗುತ್ತಿದೆ?
7) ಮುಖ್ಯವಾಗಿ ಆರೋಗ್ಯಯುತ ಜೀವನದ ಲಕ್ಷಣ ಮನಸ್ಸು ಖುಷಿಯಲ್ಲಿ ಇರುವುದು. ಆದ್ದರಿಂದ ನಾನೆಷ್ಟು ಆರಾಮವಾಗಿದ್ದೇನೆ ಖುಷಿಯಾಗಿದ್ದೇನೆ ಎಂಬುದನ್ನು ನಾವು ನಮ್ಮಲ್ಲಿ ಪ್ರಶ್ನಿಸಿಕೊಳ್ಳಬೇಕು.

ಈ ಎಲ್ಲಾ ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನಿದೆಯೋ ಅದರ ಮೇಲೆ ನೀವೇಷ್ಟು ಆರೋಗ್ಯವಾಗಿದ್ದೀರಿ ಎಂಬುವುದನ್ನು ತಿಳಿಯಬಹುದು.
ಜೀವನದಲ್ಲಿ ಆರೋಗ್ಯಯುತವಾಗಿ ಇರುವುದೆಂದರೆ ಕೇವಲ ರೋಗಗಳಿಂದ ದೂರವಿರುವುದು ಮಾತ್ರವಲ್ಲ ಬದಲಾಗಿ ಪ್ರತಿದಿನದ ಪ್ರತಿಕ್ಷಣದ ತಮ್ಮ ಬದುಕು ಎಷ್ಟು ಉಲ್ಲಾಸಭರಿತವಾಗಿ ಹೋಗುತ್ತಿದೆಯೋ ಎಂಬುದರ ಮೇಲೆ ತಿಳಿಯಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4283
Swathi M G

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು