News Karnataka Kannada
Monday, May 06 2024
ಅಂಕಣ

ಬರೇ ಶೋಕಿಗಲ್ಲ ಈ ವಸ್ತ್ರ ವಿನ್ಯಾಸ ಪದವಿ

Photo Credit :

ಬರೇ ಶೋಕಿಗಲ್ಲ ಈ ವಸ್ತ್ರ ವಿನ್ಯಾಸ ಪದವಿ

‘ಫ್ಯಾಶನ್ ಶೋ’ ಎಂದಾಗ ನಮಗೆ ತಕ್ಷಣ ನೆನಪಾಗುವುದು, ಒಂದು ವೇದಿಕೆ, ಅದರ ಸುತ್ತ ಕೂತಿರುವ ಹಲವು ಮಂದಿ ತೀರ್ಪುಗಾರರು ಮತ್ತು ವೀಕ್ಷಕರು, ಹತ್ತಿರದಿಂದ ಮತ್ತು ದೂರದಿಂದ ಈ ಕಾರ್ಯಕ್ರಮವನ್ನು ಚಿತ್ರೀಕರಿಸುವ ಒಂದು ತಂಡ. ಇದು ತೆರೆಯ ಮುಂದಿನ ಚಿತ್ರಣವಾದರೆ, ವೇದಿಕೆಯ ಮರೆಯಲ್ಲಿ, ಮುಖದಲ್ಲಿ ಗಂಭೀರತೆಯಿದ್ದರೂ ನಗು ಸೂಸುತ್ತಾ ವೇದಿಕೆ ಹತ್ತಲು ಓಡಾಡುವ ಯುವಕ-ಯುವತಿಯರು, ಸದಾ ಚಿಂತೆಯಲ್ಲಿ ಸಿಡಿಮಿಡಿಗೊಳ್ಳುವ ವಸ್ತ್ರವಿನ್ಯಾಸಕ, ಅವರಿಗೊಬ್ಬ ನಿರ್ದೇಶಕ, ಫಲಿತಾಂಶಕ್ಕಾಗಿ ಕಾದು ಕುಳಿತುಕೊಳ್ಳುವ ನಿರ್ಮಾಪಕ ಹೀಗೆ ಇನ್ನಷ್ಟು ಚಿತ್ರಣ ತೆರೆಮರೆಯದ್ದು..! ಇದನ್ನು ಇಲ್ಲಿ ಹೇಳುವ ಉದ್ದೇಶ ಏನೆಂದರೆ, ಹೊಸ ವಸ್ತ್ರ ವಿನ್ಯಾಸದ ಪ್ರದರ್ಶನ ಒಂದು ಶೋಕಿಗೋಸ್ಕರ ಮಾತ್ರ ಎಂದು ತಿಳಿಯುವ ಅದೆಷ್ಟೋ ಮನಸ್ಸುಗಳಿಗಾಗಿ ಈ ಲೇಖನ. ಫ್ಯಾಶನ್ ಡಿಸೈನಿಂಗ್ ಪದವಿಯ ಬಗ್ಗೆ ಆಸಕ್ತಿಯಿದ್ದರೂ, ಈ ಕೋರ್ಸ್ ನಮ್ಮಂತವರಿಗಲ್ಲ ಎಂದು ಹಿಂದುಳಿಯುವ, ಹಣ ಇದ್ದವರಿಗೆ ಮಾತ್ರ ಈ ಪದವಿ ಎಂದು ತಪ್ಪಾಗಿ ತಿಳಿದಿರುವ, ಮತ್ತು ಈ ಕೋರ್ಸ್ ಮಾಡಿದ ಮೇಲೆ ನಮ್ಮ ಮಕ್ಕಳು ಕೆಟ್ಟ ಹಾದಿಯಲ್ಲಿ ನಡೆಯುತ್ತಾರೇನೋ ಎನ್ನುವ ಪೋಷಕರಿಗೂ, ವಿದ್ಯಾರ್ಥಿಗಳಿಗೂ ಒಂದು ಕಿರುನೋಟವಷ್ಟೇ ಈ ಲೇಖನ.

ವಸ್ತ್ರ ವಿನ್ಯಾಸ ಪದವಿಯ ಬಗ್ಗೆ:

ಫ್ಯಾಶನ್ ಡಿಸೈನಿಂಗ್ ಪದವಿ ಯಾರು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದಾದ ಬಹಳ ಸುಲಭದ ಕೋರ್ಸ್. ಕಲಾ, ವಾಣಿಜ್ಯ ಅಥವಾ ವಿಜ್ಞಾನ ಹೀಗೆ ಪದವಿಪೂರ್ವ ಶಿಕ್ಷಣ ಮುಗಿಸಿ ಉತ್ತೀರ್ಣಗೊಂಡ ವಿದ್ಯಾರ್ಥಿಯು ಈ ಪದವಿಯನ್ನು ತನ್ನದಾಗಿಸಿಕೊಳ್ಳಬಹುದು. ಇಲ್ಲಿ ಒಂದು ಪ್ರಶ್ನೆ ಏಳುವುದು ಸಹಜ, ಯಾವ ಶಿಕ್ಷಣ ವ್ಯವಸ್ಥೆಯನ್ನು ಆಯ್ದುಕೊಳ್ಳುವುದೆಂದು..? ಯಾಕೆಂದರೆ ಈ ವಸ್ತ್ರ ವಿನ್ಯಾಸ ಪದವಿಯಲ್ಲಿ ಬೇರೆ ಬೇರೆ ವಿಭಾಗಗಳಿವೆ, ಸ್ನಾತಕೋತ್ತರ ಪದವಿಯೂ ಇದೆ ಹಾಗೇ ಸಂಶೋಧನಾ ಪದವಿಯೂ ಇದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸಿದ್ದೇನೆ:

ಪದವಿ ಕೋರ್ಸ್ ಗಳು:

ಬ್ಯಾಚುಲರ್ ಆಫ್ ಡಿಸೈನ್ಸ್ ಇನ್ ಫ್ಯಾಶನ್ ಡಿಸೈನ್

ಬ್ಯಾಚುಲರ್ ಆಫ್ ಆರ್ಟ್ಸ್ ಇನ್ ಫ್ಯಾಶನ್ ಡಿಸೈನ್

ಬ್ಯಾಚುಲರ್ ಆಫ್ ಸೈನ್ಸ್ ಇನ್ ಫ್ಯಾಶನ್ ಡಿಸೈನ್

ಬ್ಯಾಚುಲರ್ ಆಫ್ ಸೈನ್ಸ್ ಇನ್ ಫ್ಯಾಶನ್ ಡಿಸೈನ್ ಆಂಡ್ ಟೆಕ್ನೋಲೊಜಿ

ಸ್ನಾತಕೋತ್ತರ ಪದವಿ ಕೋರ್ಸ್ ಗಳು:

ಮಾಸ್ಟರ್ ಆಫ್ ಡಿಸೈನ್ಸ್ ಇನ್ ಫ್ಯಾಶನ್ ಡಿಸೈನ್

ಮಾಸ್ಟರ್ ಆಫ್ ಆರ್ಟ್ಸ್ ಇನ್ ಫ್ಯಾಶನ್ ಡಿಸೈನ್

ಎಂ.ಬಿ.ಎ. ಇನ್ ಫ್ಯಾಶನ್ ಡಿಸೈನ್

ಎಂ.ಬಿ.ಎ. ಇನ್ ಫ್ಯಾಶನ್ ಡಿಸೈನ್ ಮ್ಯಾನೇಜ್ ಮೆಂಟ್

ಮಾಸ್ಟರ್ ಆಫ್ ಸೈನ್ಸ್ ಇನ್ ಫ್ಯಾಶನ್ ಡಿಸೈನ್

ಮಾಸ್ಟರ್ ಆಫ್ ಸೈನ್ಸ್ ಇನ್ ಫ್ಯಾಶನ್ ಡಿಸೈನ್ ಆಂಡ್ ಟೆಕ್ನೋಲೊಜಿ

ಡಿಪ್ಲೋಮಾ ಕೋರ್ಸ್ ಗಳು:

ಡಿಪ್ಲೋಮಾ ಇನ್ ಫ್ಯಾಶನ್ ಡಿಸೈನ್

ಅಂಡರ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಫ್ಯಾಶನ್ ಅಪಾರೆಲ್ ಡಿಸೈನ್

ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಫ್ಯಾಶನ್ ಡಿಸೈನ್

ಸರ್ಟಿಫಿಕೇಟ್ ಕೋರ್ಸ್ ಗಳು:

ಸರ್ಟಿಫಿಕೇಟ್ ಕೋರ್ಸ್ ಇನ್ ಫ್ಯಾಶನ್ ಡಿಸೈನ್

ಸರ್ಟಿಫಿಕೇಟ್ ಇನ್ ಫ್ಯಾಶನ್ ಸ್ಟೈಲಿಂಗ್

ನೋಡಿ ಇಷ್ಟು ಕೋರ್ಸ್ಗಳು ಈ ಪದವಿಯಲ್ಲಿ ಇದೆ ಎಂದೇ ಹಲವರಿಗೆ ತಿಳಿದಿರುವುದಿಲ್ಲ. ನಾವು ಫ್ಯಾಶನ್ ಡಿಸೈನ್ ನ ಯಾವುದೇ ಕೋರ್ಸ್ ಆಯ್ಕೆ ಮಾಡಿಕೊಂಡರೂ ಅದಕ್ಕೆ ತಕ್ಕುದಾಗಿ ಅನೇಕ ಹುದ್ದೆಗಳು ಕೂಡಾ ಇವೆ ಮತ್ರವಲ್ಲದೆ ಅದೆಷ್ಟೋ ಕಂಪೆನಿಗಳಲ್ಲಿರುವ ಉದ್ಯೋಗಾವಕಾಶಗಳಿಗೆ ಈ ಪದವಿ ಪಡೆದವರು ಸಿಗುತ್ತಾನೇ ಇಲ್ಲ ಎನ್ನುವುದೂ ಅಷ್ಟೇ ಸತ್ಯ.

 

ಕೋರ್ಸ್ ಆಯ್ಕೆಗೂ ಮುನ್ನ ಇರಬೇಕಾದ ಆಸಕ್ತಿ ಮತ್ತು ಕೌಶಲ್ಯ:

ಪ್ರತಿಯೊಂದು ಪದವಿಯನ್ನು ಆಯ್ಕೆ ಮಾಡಿಕೊಂಡಾಗಲೂ ಆ ಕೋರ್ಸ್ ಗೆ ಸಂಬಂಧಪಟ್ಟ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಹಾಗೇಯೇ ಕೋರ್ಸ್ ಗೆ ಸೇರಿದ ಬಳಿಕ ಅದಕ್ಕೆ ತಕ್ಕ ಕಲೆಗಳನ್ನು ಹೊಂದಿರಬೇಕು. ವಸ್ತ್ರ ವಿನ್ಯಾಸದ ಪದವಿಗೆ ಬಂದಾಗ ವಿದ್ಯಾರ್ಥಿಗಳು, ಕಲಾತ್ಮಕ ಚಿಂತನೆ, ಸೃಜನಶೀಲತೆ, ವಿಸ್ತಾರವಾದ ನೋಟ, ಉತ್ತಮ ಸಂವಹನ ಕೌಶಲ್ಯ, ಕಾಲ್ಪನಿಕ ಕೌಶಲ್ಯ, ಸೂಕ್ಷ್ಮ ವಿವರಗಳನ್ನು ಗ್ರಹಿಸುವ ಶಕ್ತಿ, ಏಕಾಗ್ರತೆ, ಚಿತ್ರಕಲೆಯಲ್ಲಿನ ಆಸಕ್ತಿ, ಭಿನ್ನವಾಗಿ ಆಲೋಚಿಸುವ ಸಾಮರ್ಥ್ಯ ಇಂತಹ ಗುಣಗಳನ್ನು ವಿದ್ಯಾರ್ಥಿಯು ಮೈಗೂಡಿಸಿಕೊಳ್ಳಬೇಕು. ಬಣ್ಣಗಳನ್ನು ಗುರುತಿಸುವ ಮತ್ತು ಹೊಸ ಬಣ್ಣಗಳನ್ನು ವಸ್ತ್ರಗಳಲ್ಲಿ ಜೋಡಿಸುವ ನೈಪುಣ್ಯತೆ ಹೊಂದಿರಬೇಕು. ಮಾರುಕಟ್ಟೆಯ ಆಡಳಿತ ಮತ್ತು ನಿರ್ವಹಣೆ, ಅಲ್ಲಾಗುವ ಬದಲಾವಣೆಗಳು, ವಸ್ತ್ರ ವಿನ್ಯಾಸಕಾರರ ಅಧ್ಯಯನ, ಅವರು ಎದುರಿಸುವ ಸವಾಲುಗಳು, ಸ್ಪರ್ಧೆಗಳು ಇವುಗಳನ್ನೂ ಗಮನಿಸಬೇಕು. ಗ್ರಾಹಕನಲ್ಲಾಗುವ ಬೇಡಿಕೆಯ ವ್ಯತ್ಯಾಸವೇ ಇಲ್ಲಿ ಮರುಕಲಿಕೆಗೆ ಅವಕಾಶ ಮಾಡಿಕೊಡುತ್ತದೆ. ಎಲ್ಲಾ ರೀತಿಯ ವಸ್ತ್ರ ವ್ಯಾಪಾರಸ್ಥರ ಆಗು ಹೋಗುಗಳ ತಿಳುವಳಿಕೆ, ಹಾಗೆಯೇ ಸ್ವಂತಿಕೆ ಮತ್ತು ಪರಾವಲಂಬಿ ಬೆಳವಣಿಗೆಗಳನ್ನು ಗಮನಿಸುವುದೂ ಅತೀ ಅಗತ್ಯ. ಧೈರ್ಯ ಮತ್ತು ದಿಟ್ಟ ಗುರಿ ಯಾವುದೇ ಒಬ್ಬ ವಿದ್ಯಾರ್ಥಿಯನ್ನು ಈ ಕೋರ್ಸ್ ನ ಕಲಿಕೆಗೆ ಪುಷ್ಟಿ ನೀಡುವಂತೆ ಮಾಡುತ್ತದೆ.

 

ಉದ್ಯೋಗಾವಕಾಶಗಳು:

ನೀವೆಲ್ಲರೂ ಅತ್ಯಂತ ಆಸಕ್ತಿಯಿಂದ ಓದುವ ಭಾಗವಿದು; ಯಾವ ಕೋರ್ಸ್ ತಗೊಂಡರೇನು, ಉದ್ಯೋಗ ಸಿಗುವುದು ಅಷ್ಟರಲ್ಲೇ ಇದೆ ಎನ್ನುವ ಉದಾಸೀನದ ಮಾತುಗಳು ಇಲ್ಲಿ ಸಲ್ಲದು. ವಸ್ತ್ರ ವಿನ್ಯಾಸಕಾರನಾಗಿ ಮಾತ್ರವಲ್ಲದೆ ಅನೇಕ ಉದ್ಯೋಗಾವಕಾಶಗಳೂ ಈ ಪದವಿಗಿದೆ. ಬಟ್ಟೆ ಗಿರಣಿಗಳಲ್ಲಿ, ಕಂಪೆನಿಗಳಲ್ಲಿ, ಸಿನೆಮಾ ಕ್ಷೇತ್ರದಲ್ಲೂ ಅನೇಕ ಅವಕಾಶಗಳಿವೆ. ಸುಲಭವಾಗಿ ಸಿಗಬಹುದಾದ ಕೆಲವು ಉದ್ಯೋಗಗಳನ್ನು ಮತ್ತು ಉದ್ಯೋಗ ದೊರೆಯುವ ಕ್ಷೇತ್ರಗಳನ್ನೂ ಇಲ್ಲಿ ಹೆಸರಿಸುತ್ತಿದ್ದೇನೆ:

ಉದ್ಯೋಗ ಅಥವಾ ಹುದ್ದೆ            

ಉದ್ಯೋಗ ಕ್ಷೇತ್ರಗಳು

ಫ್ಯಾಶನ್ ಕನ್ಸಲ್ಟೆಂಟ್

ಸ್ವಂತ ಉದ್ಯೋಗ ಮತ್ತು ಫ್ಯಾಶನ್ ವಲಯದಲ್ಲಿ

ಪರ್ಸನಲ್ ಸ್ಟೈಲಿಸ್ಟ್

ಸ್ವ-ಉದ್ಯೋಗ

ಟೆಕ್ನಿಕಲ್ ಡಿಸೈನರ್

ವಿನ್ಯಾಸಕಾರರಾಗಿ, ಕಂಪೆನಿಗಳಲ್ಲಿ,

ಸರ್ಕಾರಿ ವಲಯದಲ್ಲಿ

ಫ್ಯಾಶನ್ ಕೋರ್ಡಿನೇಟರ್

ಡಿಸೈನ್ ಹೌಸ್, ಡಿಸೈನ್ ಮ್ಯಾಗಜೀನ್ಸ್,

ಡಿಪಾರ್ಟ್ಮೆಂಟ್ ಸ್ಟೋರ್ಸ್,

ಫ್ಯಾಶನ್ ಪಬ್ಲಿಕೇಶನ್ಸ್

ಫ್ಯಾಶನ್ ಶೋ ಆರ್ಗನೈಸರ್

ವಸ್ತ್ರ ವಿನ್ಯಾಸ ಕಂಪೆನಿಗಳಲ್ಲಿ, ಸ್ವ-ಉದ್ಯೋಗ

ಫ್ಯಾಶನ್ ಮಾರ್ಕೇಟರ್

ಬಟ್ಟೆ ಗಿರಣಿಗಳಲ್ಲಿ, ಬ್ರಾಂಡ್ ಡಿಸೈನರ್ಸ್, ಲೇಬಲ್  ಡಿಸೈನರ್ಸ್,

ಡಿಪಾರ್ಟ್ಮೆಂಟ್ ಸ್ಟೋರ್ಸ್,

ವಸ್ತ್ರ ವಿನ್ಯಾಸ ಕಂಪೆನಿಗಳಲ್ಲಿ,

ಕೊರಿಯೋಗ್ರಾಫರ್ಸ್

ಸಿನೆಮಾ ಕ್ಷೇತ್ರದಲ್ಲಿ,

ಕಿರುತೆರೆ ಮತ್ತು ದೂರದರ್ಶನದಲ್ಲಿ

ಓನ್ಲೈನ್ ಡಿಸೈನರ್ಸ್

ಓನ್ಲೈನ್ ಮಾರುಕಟ್ಟೆಯಲ್ಲಿ

ಫ್ಯಾಶನ್ ಡಿಸೈನ್ ಉಪನ್ಯಾಸಕರಾಗಿ, ಶಿಕ್ಷಕರಾಗಿ

ಕಾಲೇಜುಗಳಲ್ಲಿ, ಶಾಲೆಗಳಲ್ಲಿ

ಈವೆಂಟ್ ಮ್ಯಾನೇಜರ್ಸ್

ಸ್ವ-ಉದ್ಯೋಗ

ಮೋಡೆಲ್ಸ್/ಬುಟೀಕ್ ಓನರ್ಸ್

ಸ್ವ-ಉದ್ಯೋಗ

ಫ್ಯಾಶನ್ ಡಿಸೈನರ್

ಸಿನೆಮಾ ಕ್ಷೇತ್ರದಲ್ಲಿ,

ಕಿರುತೆರೆ ಮತ್ತು ದೂರದರ್ಶನದಲ್ಲಿ,

ವಿನ್ಯಾಸಕಾರರಾಗಿ, ಸರ್ಕಾರಿ ವಲಯದಲ್ಲಿ,

ವಸ್ತ್ರ ವಿನ್ಯಾಸ ಕಂಪೆನಿಗಳಲ್ಲಿ,

ಕ್ವಾಲಿಟಿ ಕಂಟ್ರೋಲರ್

ಬಟ್ಟೆ ಗಿರಣಿಗಳಲ್ಲಿ, ಬ್ರಾಂಡ್ ಡಿಸೈನರ್ಸ್, ಲೇಬಲ್  ಡಿಸೈನರ್ಸ್,

ಡಿಪಾರ್ಟ್ಮೆಂಟ್ ಸ್ಟೋರ್ಸ್,

ವಸ್ತ್ರ ವಿನ್ಯಾಸ ಕಂಪೆನಿಗಳಲ್ಲಿ

ಫ್ಯಾಶನ್ ಕಾನ್ಸೆಪ್ಟ್ ಮ್ಯಾನೇಜರ್

ಬಟ್ಟೆ ಗಿರಣಿಗಳಲ್ಲಿ, ಬ್ರಾಂಡ್ ಡಿಸೈನರ್ಸ್, ಲೇಬಲ್  ಡಿಸೈನರ್ಸ್,

ವಸ್ತ್ರ ವಿನ್ಯಾಸ ಕಂಪೆನಿಗಳಲ್ಲಿ

 

ಉದ್ಯೋಗ ನೀಡುವ ಸಂಸ್ಥೆಗಳು:

ಸ್ವ-ಉದ್ಯೋಗಕ್ಕೂ ಆದ್ಯತೆಯಿರುವ ಈ ಕೋರ್ಸ್ ಕಂಪೆನಿಗಳಲ್ಲಿ ಉದ್ಯೋಗ ಸಿಕ್ಕಿದಲ್ಲಿ ವಾರ್ಷಿಕ ಆದಾಯ 5,00,000 ದಿಂದ ಹಿಡಿದು 10,00,000 ವರೆಗೆ ಇರುತ್ತದೆ. ಇದು ಬರಿಯ ವೇತನವಷ್ಟೇ! ವೇತನದ ಹೊರತು ಆದಾಯ ತರುವ ಹಲವು ಮೂಲಗಳೂ ಇವರಿಗೆ ಅವಕಾಶಗಳಿವೆ. ಈ ಕೋರ್ಸ್ ಮಾಡಿದವರಿಗೆ ಉದ್ಯೋಗ ನೀಡುವ ಕೆಲವೊಂದು ಪ್ರಸಿದ್ಧ ಕಂಪೆನಿಗಳೆಂದರೆ; ರೇಮಂಡ್ಸ್, ಅರವಿಂದ್ ಗಾರ್ಮೆಂಟ್ಸ್, ಲೇವಿಸ್, ಮಧುರಾ ಗಾರ್ಮೆಂಟ್ಸ್, ಓಮೇಗಾ ಡಿಸೈನ್ಸ್, ಪ್ಯಾಂಟಲೂನ್, ಶಾಹಿ ಎಕ್ಸ್ಪೋರ್ಟ್ಸ್, ಸ್ಪೈಕರ್, ಯುನಿ ಸ್ಟೈಲ್ ಇಂಡಿಯಾ, ಸ್ನಾಪ್ ಡೀಲ್, ಪರ್ಲ್ ಗ್ಲೋಬಲ್, ಐಟಿಸಿ ಲಿಮಿಟೆಡ್, ಲೈಫ್ ಸ್ಟೈಲ್, ಬೆನೆಟ್ಟೋನ್, ಗೋಕುಲ್ ದಾಸ್ ಇಮೇಜಸ್, ಮಹಾಜನ್ ಓವರ್ ಸೀಸ್, ಟೆಕ್ಸ್ ಪೋರ್ಟ್ ಒವರ್ ಸೀಸ್, ಸ್ಪಾನ್ ಇಂಡಿಯಾ, ಪ್ರೊಲೈನ್, ಓರಿಯಂಟ್ ಕ್ರಾಫ್ಟ್, ಮೋಡೆಲಮ್ಮ ಎಕ್ಸ್ ಪೋರ್ಟ್ಸ್, ಶೋಪರ್ಸ್ ಸ್ಟಾಪ್ ಹೀಗೆ ಹತ್ತು ಹಲವು ಕಂಪೆನಿಗಳಿಂದ ಹಿಡಿದು ಸಣ್ಣ ಪುಟ್ಟ ವ್ಯಾಪರಸ್ಥರವರೆಗೂ ಅನೇಕ ಉದ್ಯೋಗಾವಕಾಶಗಳಿವೆ.

 

ನೋಡಿದಿರಲ್ಲಾ..! ಈ ಪದವಿಯನ್ನು ನೀವು ಯಾವ ಹಂತದಲ್ಲಾದರೂ ಮುಗಿಸಿ, ನಿಮಗೆ ಉದ್ಯೋಗ ಕಾದಿರುತ್ತದೆ. ಒಂದುವೇಳೆ ಕಂಪೆನಿ ಉದ್ಯೋಗ ಸರಿ ಹೋಗಿಲ್ಲವೆಂದಾದಲ್ಲಿ ಸ್ವ-ಉದ್ಯೋಗ ಮಾದರಿ ಯಾವತ್ತೂ ಕೈ ಬಿಡುವುದಿಲ್ಲ. ಡಿಪ್ಲೋಮಾದಿಂದ ಹಿಡಿದು ಸ್ನಾತಕೋತ್ತರ ಮತ್ತು ಸಂಶೋಧನಾ ಹಂತಕ್ಕೂ ಇದರ ಶಿಕ್ಷಣವಿದೆ. ಸರಕಾರಿ ಉದ್ಯೋಗಗಳೂ ಇವೆ. ಆಲೋಚನೆ ನಿಮ್ಮದು.. ಡಿಗ್ರಿ ನಿಮ್ಮದು.. ಉದ್ಯೋಗವೂ ನಿಮ್ಮದೇ… ಇನ್ನೊಮ್ಮೆ ಸಿಗೋಣ ಹೊಸ ಪದವಿ ಶಿಕ್ಷಣದ ಜೊತೆಗೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
197
Ashok K. G.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು