Categories: ಅಂಕಣ

ಫ್ಯಾಷನ್ ರೂಪದಲ್ಲಿ ಹೆಣ್ಣು ಮಕ್ಕಳ ಗಮನಸೆಳೆಯುತ್ತಿದೆ ಮೂಗುತಿ

ಹೆಣ್ಣು ಫ್ಯಾಷನ್ ಪ್ರೀಯೆ. ಆಕೆ ಸಾಂಪ್ರದಾಯಿಕ ಒಡವೆಯನ್ನು ಟ್ರೆಂಡಿಂಗ್ ಲುಕ್ ನೀಡಿ ಬಳಕೆ ಮಾಡುತ್ತಾಳೆ. ಅದಕ್ಕೆ ಸೂಕ್ತ ಉದಾಹರಣೆ ಎಂದರೆ ಮೂಗು ಬೊಟ್ಟು ಕೂಡ. ಮೂಗು ಬೊಟ್ಟು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಇಂದಿಗೂ ತನ್ನ ಚಾಪನ್ನು ಕಳೆದುಕೊಳ್ಳದೇ ಹೊಸ ಹೊಸ ಹಾಗೂ ವಿಭಿನ್ನ ಶೈಲಿಯಲ್ಲಿ ಮಾರ್ಕೆಟ್‌ಗಳಿಗೆ ಲಗ್ಗೆ ಇಟ್ಟು ಯುವತಿಯರಿಗೆ ಪ್ರೀಯವಾಗಿದೆ.

ಸಾಂಪ್ರದಾಯಿಕ ಒಡವೆ ಎಂದೆನಿಸಿಕೊಳ್ಳುವ ಮೂಗು ಬೊಟ್ಟು ಹಿಂದೆ ಕೆಲವೊಂದು ಜನಾಂಗಗಳಲ್ಲಿ ಕಡ್ಡಾಯವಾಗಿ ಹೆಣ್ಣು ಧರಿಸಲೇ ಬೇಕಿತ್ತು. ಏಕೆಂದರೆ ಮೂಗು ಬೊಟ್ಟು ಮುತ್ತೈದೆಯ ಪ್ರತೀಕ ಅನ್ನೋ ನಂಬಿಕೆ ಜನರಲ್ಲಿ ಆಲವಾಗಿ ಬೇರೂರಿತ್ತು. ಆ ಸಂಪ್ರದಾಯವನ್ನು ಮುರಿಯಲೆಂದೇ ಕೆಲವರು ಮೂಗು ಬೊಟ್ಟು ಧರಿಸುತ್ತಿರಲಿಲ್ಲ.

ಹೆಣ್ಣಿನ ಮನಸೆಳೆಯಲೆಂದು ಹೊಸ ಹೊಸ ಶೈಲಿಯ ಮೂಗು ಬೊಟ್ಟುಗಳು ಮಾರ್ಕೆಟ್‌ಗಳಗೆ ಲಗ್ಗೆ ಇಟ್ಟಿವೆ. ಅದಕ್ಕೆ ತಕ್ಕಂತೆ ಇಂದು ಮಹಿಳೆಯರು ಬಂಗಾರದ ಮೂಗುತಿಗಿಂತ ಕೃತಕ ಮೂಗು ಬೊಟ್ಟಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ವಿಧವಿಧದ ಆಕಾರದಲ್ಲಿ ಕೃತಕ ಮೂಗು ಬೊಟ್ಟುಗಳನ್ನು ನಾವು ನೋಡಬಹುದು. ಮೀನಿನ ಆಕಾರ. ನಕ್ಷತ್ರ, ಚಂದ್ರನಾಕಾರ ಹೀಗೆ ಹಲವು ರೀತಿಯಲ್ಲಿ ಲಭ್ಯವಾಗಿದೆ. ಇವುಗಳು ಹೆಣ್ಣಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಯುವತಿಯರು ಬಲು ಇಚ್ಛೆಯಿಂದ ಉಡುವ ಸೀರಗೆ ಕೃತಕ ಮೂಗು ಬೊಟ್ಟುಗಳು ವಿಭಿನ್ನ ಲುಕ್ಕ್ ಕೊಡುತ್ತದೆ.

ಮೂಗುತ್ತಿ ಒಲ್ಡ್ ಫ್ಯಾಷನ್ ಅಂತಿದ್ದ ಯುವತಿಯರು, ಇಂದು ಕೃತಕ ಮೂಗು ಬೊಟ್ಟಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇಂತಹ ಬದಲಾವಣೆಗೆ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿಮಣಿಯರು ಕಾರಣ ಎಂದರೂ ತಪ್ಪಾಗದು. ಏಕೆಂದರೆ ಇಂದು ಹೆಣ್ಣು ಮಕ್ಕಳು ಸಿನಿಮಾ ನಟಿಯನ್ನು ಹೆಚ್ಚು ಅನುಕರಣೆ ಮಾಡುತ್ತಾರೆ.

ಕಾಶ್ಮೀರದಿಂದ ಹಿಡಿದು ಕನ್ನಾಕುಮಾರಿವರೆಗೂ ಯಾವುದೇ ಜಾತಿ ಧರ್ಮದ ಭೇದವಿಲ್ಲದೆ ಅವರವರ ಧರ್ಮಕ್ಕೆ ಅನುಗುಣವಾಗಿ ಮೂಗುತಿ ಧರಿಸುತ್ತಾರೆ.

ಮೂಗುತಿ ಹಾಕುವುದು ಕೇವಲ ಸಂಪ್ರದಾಯವಲ್ಲದೆ, ಇದರಿಂದ ಉಪಯೋಗವೂ ಇದೆ. ಋತುಚಕ್ರದ ಸಮಯದಲ್ಲಾಗುವ ನೋವು ಮೂಗುಬೊಟ್ಟು ಹಾಕುದರಿಂದ ಕಡಿಮೆಯಾಗುತ್ತದೆ. ಮಹಿಳೆಯರಿಗೆ ಗರ್ಭಕೋಶ ಮತ್ತಿತರ ಜನನಾಂಗಗಳಿಗೆ ಸಂಬಂಧಿಸಿದ ನರಗಳು ಮೂಗಿನ ಎಡಭಾಗದೊಂದಿಗೆ ಸಂಬಂಧ ಹೊಂದಿರುತ್ತದೆ, ಆದ್ದರಿಂದ ಮೂಗು ಬೊಟ್ಟು ಎಡ ಭಾಗಕ್ಕೆ ಚುಚ್ಚಿಸಿಕೊಳ್ಳುದರಿಂದ ಹೆರಿಗೆ ಸಮಯದಲ್ಲಿ ನೆರವಾಗಲಿದೆ ಎನ್ನುತ್ತಾರೆ.

Gayathri SG

Recent Posts

ಕಡಬ: ಸಿಡಿಲು ಬಡಿದು ಮರಳುಗಾರಿಕೆ ಮಾಡುತ್ತಿದ್ದ ಕಾರ್ಮಿಕ ಸಾವು

ದಕ್ಷಿಣಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆಗೆ ವರುಣ ತಂಪೇರಗಿದ್ದಾನೆ. ಈ ನಡುವೆ ಸಿಡಿಲು…

23 mins ago

ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥ

ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಹುಣಸೂರು ತಾಲೂಕಿನ ಕಡೇಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ

23 mins ago

ಮಂಜೂರಾದ ಜಮೀನು ಪಿಟಿಸಿಎಲ್ ಕಾಯಿದೆಯಡಿ ಮರು ಸ್ಥಾಪನೆ ಇಲ್ಲ

ಕರ್ನಾಟಕ ಭೂ ಸುಧಾರಣಾ ಕಾಯಿದೆಯಡಿಯಲ್ಲಿ ಭೂ ನ್ಯಾಯಮಂಡಳಿಗಳಿಂದ ಮಂಜೂರಾಗಿರುವ ಜಮೀನುಗಳನ್ನು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಜಮೀನುಗಳ…

35 mins ago

ಗೆಳಯನಿಗೆ ಸಾತ್‌ ನೀಡಲು ಹೋಗಿದ್ದ ಅಲ್ಲು ವಿರುದ್ಧ ಕೇಸ್ ದಾಖಲು

ಪುಷ್ಪಾ-2 ರಿಲೀಸ್​ ಕ್ರೇಜ್​ನಲ್ಲಿರೋ ಐಕಾನ್​ ಸ್ಟಾರ್ ಅಲ್ಲು ಅರ್ಜುನ್​ಗೆ ಆಂಧ್ರ ಪ್ರದೇಶ ಪೊಲೀಸರು ಬಿಗ್ ಶಾಕ್ ನೀಡಿದ್ದು, ಅಲ್ಲು ಅರ್ಜುನ್…

38 mins ago

ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆ : ನಾಲ್ಕನೇ ಆರೋಪಿ ಅರೆಸ್ಟ್‌

ಕೆನಡಾದಲ್ಲಿ ಕಳೆದ ವರ್ಷ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರನಾಗಿದ್ದ, ಖಲಿಸ್ತಾನಿ ಪರ ಹೋರಾಟಗಾರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ನನ್ನು ಹತ್ಯೆ…

1 hour ago

ಆರು ತಿಂಗಳ ಬಳಿಕ ಭಕ್ತರಿಗೆ ದರ್ಶನ ನೀಡಿದ ಬದರಿನಾಥ

ಉತ್ತರಾಕಾಂಡ ಚಮೋಲಿಯಲ್ಲಿರುವ ಬದರಿನಾಥ ಬಾಗಿಲನ್ನು ಇಂದು(ಬಾನುವಾರ) ಬೆಳಿಗ್ಗೆ 6 ಗಂಟೆಗೆ ತೆರೆಯಲಾಯಿತು. ಈ ವೇಳೆ ವೇದ ಘೋಷಗಳು ಮತ್ತು ನೆರೆದಿದ್ದ…

1 hour ago