News Karnataka Kannada
Monday, May 06 2024
ಅಂಕಣ

ಸಮಾಜಶಾಸ್ತ್ರ ಪದವಿ ನವ ಸಮಾಜಕ್ಕೊಂದು ಕೊಡುಗೆ

Photo Credit :

ಸಮಾಜಶಾಸ್ತ್ರ ಪದವಿ ನವ ಸಮಾಜಕ್ಕೊಂದು ಕೊಡುಗೆ

ವಿದ್ಯೆ ಮಾನವನ ಜೀವನ ಶೈಲಿಯನ್ನೇ ಬದಲಿಸುತ್ತದೆ. ಒಬ್ಬ ಅನಕ್ಷರಸ್ಥ ಬದುಕುವ ರೀತಿಗೂ, ಒಬ್ಬ ಶಿಕ್ಷಿತನ ಬಾಳಿಗೂ ತುಂಬಾ ವ್ಯತ್ಯಾಸವಿದೆ. ಸಮಾಜದ ಆಗುಹೋಗುಗಳಿಗೆ ಒಬ್ಬ ಶಿಕ್ಷಿತ ಬೇಗ ಹೊಂದಿಕೊಳ್ಳುತ್ತಾನೆ. ಇಂಗ್ಲೀಷ್ ಅಥವಾ ಹಿಂದಿ ಭಾಷೆ ಬರದೆ, ಒಂದು ಬ್ಯಾಂಕ್ ಒಳಗಡೆ ಒದ್ದಾಡುವ ಗ್ರಾಹಕರಿರಬಹುದು, ಶಾಪಿಂಗ್ ಮಾಲ್ ಒಳಗೆ ಹೋಗಿಯೂ ಬರೇ ಒಂದು ಸುತ್ತು ತಿರುಗಿ ಬಂದು ಏನೂ ಆಯ್ಕೆ ಮಾಡದಿರುವ ಜನರ ಅದೆಷ್ಟೋ ಉದಾಹರಣೆಗಳು ದೈನಂದಿನಲ್ಲಿ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ. ಶಾಲೆಗಳಲ್ಲಿ ಕಲಿಸುವ ಅನೇಕ ವಿಷಯಗಳು ಪರಿಸರ, ವಿಜ್ಞಾನ, ಸಮಾಜ, ಗಣಿತ, ಕ್ರೀಡೆ, ಕಲೆ ಮತ್ತು ಸಾಹಿತ್ಯ ಮೇಲಿನ ತರಗತಿಗಳಿಗೆ ಹೋಗುವಾಗ ಅನೇಕ ರೂಪ ಪಡೆದುಕೊಂಡಿರುತ್ತದೆ. ಸಮಾಜದ ಬಗ್ಗೆ, ಮಾನವನ ಸಾಮಾಜಿಕ ವರ್ತನೆಯ ಕುರಿತು, ಆಳವಾಗಿ ಅಧ್ಯಯನ ಮಾಡುವುದಕ್ಕೆ ಪದವಿಯಲ್ಲಿ ‘ಸಮಾಜಶಾಸ್ತ್ರ’ ಪದವಿಯಿದೆ. ಈ ಪದವಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

ಸಮಾಜಶಾಸ್ತ್ರ ಪದವಿ ಎಂದರೇನು?

ಮಾನವನ ಸಾಮಾಜಿಕ ಸಂಬಂಧಗಳು, ಸಾಮಾಜಿಕ ಗುಂಪುಗಳ ಬಗ್ಗ, ಒಂದು ಸಣ್ಣ ಕುಟುಂಬದಿಂದ ಹಿಡಿದು ರಾಜ್ಯದ ಬಗ್ಗೆ, ಜಾತಿ, ಧರ್ಮ, ಸಾಮಾಜಿಕ ವರ್ಗ, ಆದಾಯ, ಸಾಮಾಜಿಕ ಸ್ಥಿರತೆ ಹೀಗೆ ಹತ್ತು ಹಲವು ಆಯಾಮಗಳನ್ನಿಟ್ಟುಕೊಂಡು ಆಳವಾಗಿ ಅಧ್ಯಯನ ಮಾಡುವ ಪದವಿಯೇ ಸಮಾಜಶಾಸ್ತ್ರ ಪದವಿ. ಸಾಮಾಜಿಕ ಪರಿವರ್ತನೆಯ ಕುರಿತು ಬೆಳಕು ಚೆಲ್ಲುವ ಈ ಪದವಿ, ಕಲಾ ವಿಭಾಗದ ವಿದ್ಯಾರ್ಥಿಗಳನ್ನು ಉತ್ತಮ ರೀತಿಯಲ್ಲಿ ತಯಾರು ಮಾಡಿ ಸಮಾಜಕ್ಕೆ ಒಂದು ಕೊಡುಗೆಯನ್ನಾಗಿ ನೀಡುತ್ತದೆ. ಹತ್ತನೆ ತರಗತಿಯ ಬಳಿಕ ಪಿ.ಯು.ಸಿ.ಯಲ್ಲಿ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಮುಂದೆ ಪದವಿಯಲ್ಲಿ ಸೋಶಿಯಾಲಜಿ ತಗೊಂಡು, ಇದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆಯನ್ನೂ ಮಾಡಬಹುದು.

ಯಾವ ಕೌಶಲಗಳಿರಬೇಕು..?

ಸಮಾಜಶಾಸ್ತ್ರ ಕಲಿಯುವ ವಿದ್ಯಾರ್ಥಿಯು ಹಲವು ಕೌಶಲಗಳನ್ನು ಮೈಗೂಡಿಸಿಕೊಂಡಿರಬೇಕು. ಸಾಮಾಜಿಕ ಸ್ಥಿತಿಗತಿಗಳ ಅರಿವು, ಸಂಶೋಧನಾ ಗುಣ, ತನಿಖಾ ಮನೋಭಾವ, ಸಾಮಾನ್ಯ ಕಾನೂನಿನ ತಿಳುವಳಿಕೆ ಮಾತ್ರವಲ್ಲದೆ, ಕ್ರಿಯಾತ್ಮಕವಾಗಿದ್ದು, ಸಲಹಗಾರರಾಗಿಯೂ, ಸಮಾಲೋಚನೆ ಮಾಡುವ ಮನಸ್ಸುಳ್ಳವರಾಗಬೇಕು. ಸಮಾಜಶಾಸ್ತ್ರಜ್ಞನಾಗಬಯಸು್ವವರು ಈ ಕೆಳಗಿನ ಕೌಶಲಗಳನ್ನು ಹೊಂದಿರಬೇಕು:

* ಸಾಮಾಜಿಕ ನೆಲೆಗಟ್ಟಿನಲ್ಲಿ ನಿಂತು, ಅನೇಕ ವರ್ಗಗಳ ಜನರ ಜೊತೆ ಬೆರೆಯುವ, ಸಂದರ್ಶನ ಮಾಡುವ ಗುಣ ಹೊಂದಿರಬೇಕು

* ಸಾಮಾಜಿಕ ಸಮಸ್ಯೆಗಳನ್ನು ಗುರುತಿಸಿ, ಅಧ್ಯಯನ ಮಾಡಿ ಪರಿಹರಿಸುವ ಗುಣವನ್ನೂ ಮೈಗೂಡಿಸಿಕೊಂಡಿರಬೇಕು

* ಸಂಶೋಧನಾ ಮನೋಭಾವವನ್ನು ಹೊಂದಿದ್ದು, ಮಾಹಿತಿ ಸಂಗ್ರಹ, ಅದರ ಸಂಶೋಧನೆ ಮತ್ತು ವರದಿ ಮಾಡುವ ಸಾಮರ್ಥ್ಯವಿರಬೇಕು

* ತುಂಬಾ ಒಳ್ಳೆಯ ಬರವಣಿಗೆಯ ಶೈಲಿ ಹೊಂದಿದ್ದು, ಕಾಲಕ್ಕೆ ತಕ್ಕಂತೆ ಸಂಶೋಧನಾ ವರದಿಯಲ್ಲಿ ಆಗುವ ಬದಲಾವಣೆಗೆ ತಕ್ಕಂತೆ ಬರೆಯುವ ಗುಣ ಹೊಂದಿರಬೇಕು

* ಕಲೆ ಮತ್ತು ಸಂಸ್ಕ್ರತಿಯ ಬಗೆಗಿನ ಅರಿವು ಮತ್ತು ಸಮಾಜದ ಮೇಲಿನ ಪ್ರಭಾವದ ಕುರಿತು ಅರಿವಿರಬೇಕು

* ಕಾನೂನು ಸಲಹೆಗಾರರು, ಶಿಕ್ಷಣತಜ್ಞರು, ಆಡಳಿತಗಾರರು, ನೀತಿಶಾಸ್ತ್ರಜ್ಞರು ತೆಗೆದುಕೊಳ್ಳುವ ಅದೆಷ್ಟೋ ನಿರ್ಧಾರಗಳು, ಸಮಾಜಶಾಸ್ತ್ರಜ್ಞರು ಮಾಡಿದ ಸಂಶೋಧನಾ ವರದಿಯ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಇವರೊಂದಿಗೆ ಚರ್ಚೆ ಮತ್ತು ಮಾರ್ಗದರ್ಶನ ಮಾಡುವ ಸಾಮರ್ಥ್ಯವಿರಬೇಕು

* ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ಆರ್ಥಿಕ ಬದಲಾವಣೆಗಳನ್ನು, ವಿವಿಧ ಸಂಸ್ಥೆಗಳನ್ನು ಜನರ ವರ್ತನೆಗಳನ್ನು ಅಧ್ಯಯನ ಮಾಡುವ ಗುಣ ಹೊಂದಿರಬೇಕು

* ಯಾವುದೇ ನಿರ್ಣಯವನ್ನು ತಿಳಿಸುವ ಮುಂಚೆ ಸಾಕಷ್ಟು ಪುರಾವೆ ಇಟ್ಟುಕೊಂಡಿದ್ದು ಅಂಕೆ-ಸಂಖ್ಯೆಗಳ ಬಗ್ಗೆ ಗಮನ ನೀಡುವ ಉತ್ತಮ ಸಂಖ್ಯಾಕಾರನೂ ಆಗಿರಬೇಕು.

ಸಮಾಜಶಾಸ್ತ್ರ ಪದವಿ ಹೊಂದಿದವರಿಗೆ ಆದ್ಯತೆ ಕೊಡುವ ಉದ್ಯೋಗ ವಲಯಗಳು ಮತ್ತು ಉದ್ಯೋಗಾವಕಾಶಗಳು:

ಕಲಾವಿಭಾಗದ ಕೆಲವಾರು ಪದವಿಗಳಿಗೆ ಉದ್ಯೋಗದ ಕೊರತೆಯಿದೆ ಹಾಗಾಗಿ ವಿದ್ಯಾರ್ಥಿಗಳು ಆ ಪದವಿಗಳತ್ತ ಮುಖ ಮಾಡುವುದಿಲ್ಲ ಎನ್ನುವ ಮಾತಿದೆ. ಅದು ಒಂದು ಮಟ್ಟಿಗೆ ನಿಜವಾದರೂ ಎಲ್ಲಾ ರೀತಿಯಲ್ಲಿ ಒಪ್ಪುವಂತದ್ದಲ್ಲ. ಕಾರಣ ಅನೇಕ ಉದ್ಯೋಗಾವಕಾಶಗಳಿದ್ದರೂ ಅದಕ್ಕೆ ತಕ್ಕ ಸಾಮರ್ಥ್ಯದ ಕೊರತೆಯಿರುವುದರಿಂದ ಅದು ನಿರುದ್ಯೋಗಕ್ಕೆ ಒಯ್ಯುತ್ತದೆ. ಕೆಲವು ಉದ್ಯೋಗದ ವಲಯಗಳು ಇಲ್ಲಿವೆ:

* ವ್ಯವಹಾರ ವಲಯ: ಸಮಾಜಶಾಸ್ತ್ರ ಪದವಿ ಮಾಡಿದವರು ಕೇವಲ ಕೆಲವು ಕಲಾ ವಿಭಾಕ್ಕೆ ಸಂಬಂಧಪಟ್ಟ ಕೆಲಸ ಮಾತ್ರ ಗಮನದಲ್ಲಿಟ್ಟುಕೊಂಡಿರುತ್ತಾರೆ. ವ್ಯಾಪಾರ-ವ್ಯವಹಾರ ಕ್ಷೇತ್ರದಲ್ಲೂ ವಿಫುಲ ಅವಕಾಶಗಳಿವೆ. ಸಾರ್ವಜನಿಕ ಸಂಪರ್ಕಕ್ಕಾಗಿ, ಮಾರುಕಟ್ಟೆ ಮತ್ತು ಮಾರಟ ವಲಯದಲ್ಲಿ, ಗ್ರಾಹಕ ಸಂಶೋಧನೆಯಲ್ಲಿ, ಮಾನವ ಅಭಿವ್ರದ್ದಿ ವಿಭಾಗದಲ್ಲಿ, ವಿಮಾ ವಿಭಾಗದಲ್ಲಿ, ಮಾಧ್ಯಮದಲ್ಲಿ, ತರಬೇತಿಯಲ್ಲಿ ಮತ್ತು ಸ್ವ-ಉದ್ಯೋಗ ಮಾದರಿಯಲ್ಲೂ ಈ ಪದವಿಯವರು ಕೆಲಸ ಮಾದಬಹುದು.

* ಸಮುದಾಯ ಸೇವಾ ವಲಯ: ಹಲವಾರು ಸರಕಾರೇತರ ಸಂಸ್ಥೆಗಳು, ನಗರ ಯೋಜನೆ, ಶಿಶು ಪಾಲನೆ, ಸಮುದಾಯ ಅಭಿವ್ರದ್ದಿ, ಪರಿಸರವಾದಿ ಸಂಘ ಸಂಸ್ಥೆಗಳು ಮತ್ತು ವಕಾಲತ್ತು ವಹಿಸುವ ಕ್ಷೇತ್ರಗಳಲ್ಲಿ, ಸಮಾಜಶಾಸ್ತ್ರ ಪದವಿ ವಿದ್ಯಾರ್ಥಿಗಳು ಉದ್ಯೋಗ ಮಾಡಬಹುದು.

* ಆರೋಗ್ಯ ಸೇವಾ ವಲಯದಲ್ಲಿ: ಕುಟುಂಬ ಯೋಜನೆ, ಪುನರ್ವಸತಿ ಕೇಂದ್ರಗಳಲ್ಲಿ, ಆಸ್ಪತ್ರೆ ದಾಖಲಾತಿ ವಿಭಾಗಗಳಲ್ಲಿ, ಅರೋಗ್ಯ ವಿಮಾ ಯೋಜನೆಗಳಲ್ಲೂ ಸಮಾಜಶಾಸ್ತ್ರ ಪದವಿಧರರು ಕೆಲಸ ಮಾಡಬಹುದು.

* ಶೈಕ್ಷಣಿಕ ಮಲಯ: ಸಮಾಜಶಾಸ್ತ್ರ ಪದವಿಯ ಬಳಿಕ ಶಿಕ್ಷಕರಾಗಿಯೂ ಕೆಲಸ ಮಾಡಬಹುದು. ಪಿ.ಹೆಚ್.ಡಿ. ಮಾಡಿ ಸಂಶೋಧಕರಾಗಿಯೂ ಕೆಲಸ ಮಾಡಬಹುದು. ಅದೂ ಅಲ್ಲದೆ, ದಾಖಲಾತಿ ವಿಭಾಗದಲ್ಲಿ, ಸಲಹೆಗಾರರಾಗಿ, ಆಡಳಿತ ವರ್ಗದಲ್ಲಿ, ಹಳೆವಿದ್ಯಾರ್ಥಿ ಸಂಘಗಳಲ್ಲೂ ಉದ್ಯೋಗವಿರುತ್ತದೆ.

* ಕಾನೂನು ವಲಯ: ಕಾನೂನು ಜಾರಿಯಲ್ಲಿ, ತನಿಖೆಯಲ್ಲಿ, ಅಪರಾಧ ನ್ಯಾಯಾಲಯಗಳಲ್ಲಿ, ಅಟ್ಟೋರ್ನಿ ಮತ್ತು ಪಾರಾ-ಲೀಗಲ್ ರೀತಿಯಲ್ಲೂ ಸಮಾಜಶಾಸ್ತ್ರ ಪದವಿಯವರು ಉದ್ಯೋಗ ಮಾಡಬಹುದು.

* ಪ್ರಕಟನಾಲಯಗಳಲ್ಲಿ: ವ್ರತ್ತಿಪರ ಬರಹಗಾರರಾಗಿ, ಸಂಶೋಧಕರಾಗಿ, ಸಂಪಾದಕರಾಗಿ, ಸಮೂಹ ಮಾಧ್ಯಮದಲ್ಲೂ ಈ ಪದವಿಗೆ ಅವಕಾಶಗಳಿವೆ.

* ಸಮಾಜ ಸೇವಾ ವಲಯ: ಪುನರ್ವಸತಿ, ಪ್ರಕರಣ ನಿರ್ವಹಣೆ, ಹದಿಹರೆಯದ ಮತ್ತು ಇಳಿವಯಸ್ಸಿನ ಸೇವಾ ಕೇಂದ್ರಗಳಲ್ಲಿ, ಆಡಳಿತ, ಮನರಂಜನೆ ಮತ್ತು ಸಮಾಜಕಾರ್ಯ ವಿಭಾಗದಲ್ಲೂ ಸಮಾಜಶಾಸ್ತ್ರ ಪದವಿಯವರು ಉದ್ಯೋಗ ಮಾಡಬಹುದು.

ಶಾಲಾ ಸಲಹೆಗಾರರಾಗಿ, ಮಾರ್ಗದರ್ಶನ ಸಲಹೆಗಾರರಾಗಿ, ಮಾನವ ಸಂಪನ್ಮೂಲ ಅಧಿಕಾರಿಗಳಾಗಿ, ಆಡಳಿತ ಸಲಹೆಗಾರರಾಗಿ, ಸಮೀಕ್ಷಾ ಸಂಶೋಧಕರಾಗಿ, ನೀತಿ ವಿಶ್ಲೇಷಕರಾಗಿ, ಮಾಧ್ಯಮ ಆಯೋಜಕರಾಗಿ, ಮಾರುಕಟ್ಟೆ ಸಂಶೋಧಕ ವಿಶ್ಲೇಷಕರಾಗಿ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿಯೂ ಸಮಾಜಶಾಸ್ತ್ರ ಪದವಿಯವರು ಉದ್ಯೋಗ ಮಾಡಬಹುದು.

ಕೊನೆಗೊಂದು ಕಿವಿಮಾತು:

ಬದಲಾಗುತ್ತಿರುವ ಸಮಾಜದ ಆಗುಹೋಗುಗಳನ್ನು ಅಧ್ಯಯನ ಮಾಡಿ ಸಮಾಜದೊಳಗೆ ಅಭ್ಯಸಿಸುವ ವಿದ್ಯಾರ್ಥಿಗಳ ಮನಸ್ಸು ಒಂದು ಉತ್ತಮ ಸಮಾಜವನ್ನು ಕಟ್ಟಬೇಕೆಂದು ಬಯಸುತ್ತದೆ. ಅಂತಹ ಮನಸ್ಸುಳ್ಳ ಯಾವುದೇ ವಿದ್ಯಾರ್ಥಿಯು ಖಂಡಿತಾ ಈ ಪದವಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಉದ್ಯೋಗದ ಬಗ್ಗೆ ಭಯ ಬೇಡ ಇನ್ನಷ್ಟು ಹೊಸ ಉದ್ಯೋಗಗಳ ಬೆಳವಣಿಗೆ ಇದ್ದೇ ಇರುತ್ತದೆ. ನಿಮ್ಮ ಮೇಲಿನ ಭರವಸೆ ಕಳೆದುಕೊಳ್ಳಬೇಡಿ.

ಮತ್ತೊಮ್ಮೆ ಸಿಗೋಣ… ಹೊಸ ಪದವಿ.. ಹೊಸ ಉದ್ಯೋಗದ ಜೊತೆ…..

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
197
Ashok K. G.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು