News Karnataka Kannada
Tuesday, April 30 2024
ಅಂಕಣ

ಥ್ರಿಲ್ಲರ್ ರೂಪದಲ್ಲಿ ಪ್ರತಿಬಿಂಬಿಸುವ ಕಾದಂಬರಿ “ಲೇಡೀಸ್ ಹಾಸ್ಟೆಲ್”

Ladies Hostel Sneha
Photo Credit :

ಯಂಡಮೂರಿ ವೀರೇಂದ್ರನಾಥರ ಕೃತಿಗಳೆಂದರೆ ಸಾಕು, ಅವುಗಳಲ್ಲಿ ರೋಚಕತೆ ತಾನೇ ತಾನಾಗಿ ಮೂಡಿರುತ್ತದೆ; ಬದುಕಿನ ತವಕ ತಲ್ಲಣಗಳು ಮನಮುಟ್ಟುವಂತೆ ಚಿತ್ರಿತಗೊಂಡಿರುತ್ತವೆ; ಸಾಮಾಜಿಕ ಸಮಸ್ಯೆಗಳ ನಿಖರ ವಿಶ್ಲೇಷಣೆ ಇರುತ್ತದೆ. ಲೇಡೀಸ್ ಹಾಸ್ಟೆಲ್ ಸಹ ಅಂತಹ ಒಂದು ಕೃತಿ.

ಹಾಸ್ಟೆಲ್ ಸೇರುವ ಹೆಣ್ಣುಮಕ್ಕಳು ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಗೆಳತಿಯರನ್ನು ಆರಿಸಿಕೊಳ್ಳುತ್ತಾರೆ; ಕೆಲವರು ಮಿತಿಯನ್ನು ಮೀರಿ ದುರಂತದತ್ತ ಸಾಗಿದರೆ ಇನ್ನು ಕೆಲವರು ತಮ್ಮ ಗುರಿಯನ್ನು ಸಮರ್ಥವಾಗಿ ತಲಪುತ್ತಾರೆ.

ಹಾಸ್ಟೆಲ್ ಒಂದರಲ್ಲಿ ಸಂಭವಿಸುವ ಹುಡುಗಿಯೊಬ್ಬಳ ಸಾವು. ಅದು ಆತ್ಮಹತ್ಯೆಯೋ ಕೊಲೆಯೋ ಎನ್ನುವುದೇ ಜಿಜ್ಞಾಸೆ. ಅದರ ಸಂಬಂಧ ಬಂಧಿತನಾಗುವ ವ್ಯಕ್ತಿಯೊಬ್ಬನ ಪತ್ನಿ ನಡೆಸುವ ತನಿಖೆ, ಆಕೆಯ ಧೈರ್ಯ, ಬುದ್ಧಿವಂತಿಕೆ ಓದುಗರನ್ನು ಅಯಸ್ಕಾಂತದಂತೆ ಸೆಳೆಯುತ್ತದೆ. ಮಹಿಳಾ ಹಾಸ್ಟೆಲ್‌ನಲ್ಲಿ ನಡೆಯುತ್ತಿರುವ ಎಲ್ಲಾ ಚಟುವಟಿಕೆಗಳನ್ನು ಥ್ರಿಲ್ಲರ್ ರೂಪದಲ್ಲಿ ಪ್ರತಿಬಿಂಬಿಸುವ ಕಾದಂಬರಿ.

ಕಾದಂಬರಿಯು ವಿವಿಧ ರೀತಿಯ ಮಹಿಳಾ ಪಾತ್ರಗಳನ್ನು ನಿರ್ಮಿಸುತ್ತದೆ. ಮತ್ತು ಕಿರಣ್ಮಯಿ ಪಾತ್ರ ತುಂಬಾ ಚೆನ್ನಾಗಿದೆ. ರಾಜಾ ಚೆಂಡೂರರ ಎಂದಿನ ಸೊಬಗಿನ ಅನುವಾದ ಕೃತಿಗೆ ಮತ್ತಷ್ಟು ಕಳೆತಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4383

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು