Categories: ಅಂಕಣ

ತಲೆಹೊಟ್ಟು ನಿವಾರಣೆಗೆ ಇಲ್ಲಿದೆ ಮನೆಮದ್ದು

ಇಂದು ಯುವಕ/ಯುವತಿರಿಗೆ ಕಾಡುವ ದೊಡ್ಡ ಸಮಸ್ಯೆಗಳಲ್ಲಿ ತಲೆಹೊಟ್ಟು ಕೂಡ ಒಂದು. ಇದರ ನಿವಾರಣೆಗೆ ಹಲವಾರು ಪ್ರಯೋಗಗಳನ್ನು ಮಾಡುತ್ತಾರೆ. ಇದಕ್ಕೆ ಸ್ವಚ್ಛತೆಯ ಕೊರತೆ, ಹಾರ್ಮೋನ್ ವ್ಯತ್ಯಾಸ ಹಾಗೂ ಕೆಟ್ಟ ಆಹಾರ ಪದ್ಧತಿ ಕೂಡ ಕಾರಣವಾಗಿರಬಹುದು.

ಇನ್ನು ಈ ತಲೆಹೊಟ್ಟು ನಿವಾರಣೆಗೆ ಕೆಲವೊಂದು ಮನೆಯಲ್ಲಿರುವ ವಸ್ತು ಬಳಸಿ ಮದ್ದು ತಯಾರಿಸಬಹುದು. ತಲೆಹೊಟ್ಟು ಚಿಕಿತ್ಸೆಗಾಗಿ ನೀವು ಬೆಳ್ಳುಳ್ಳಿಯನ್ನು ಸಹ ಬಳಸಬಹುದು. ಮೊದಲಿಗೆ, ಒಂದು ಅಥವಾ ಎರಡು ಬೆಳ್ಳುಳ್ಳಿಗಳನ್ನು ಪುಡಿಮಾಡಿ ನಂತರ ನೀರಿನಲ್ಲಿ ಮಿಶ್ರಣ ಮಾಡಿ ಅದನ್ನು ನಿಮ್ಮ ನೆತ್ತಿಗೆ ಹಚ್ಚಿ. ಕೆಲ ಹೊತ್ತಿನ ಬಳಿಕ ತಲೆ ಸ್ನಾನ ಮಾಡಿ.

ತಲೆಹೊಟ್ಟಿನಿಂದ ಮುಕ್ತಿ ಪಡೆಯಲು ಎರಡು ಚಮಚ ಮೆಂತ್ಯೆ ಕಾಳನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಹಾಕಿ. ಬೆಳಿಗ್ಗೆ ಎದ್ದ ನಂತ್ರ ಇದನ್ನು ಮಿಕ್ಸಿ ಮಾಡಿ ಮಿಶ್ರಣವನ್ನು ತಲೆಯ ಬುಡಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿದ್ರೆ ತಲೆಹೊಟ್ಟು ಕಡಿಮೆಯಾಗಲಿದೆ. ವಾರಕ್ಕೆ 2-3 ಬಾರಿ ಈ ಕೆಲಸ ಮಾಡಬೇಕಾಗುತ್ತದೆ.

ಒಳ್ಳೆಯ ಮೊಸರಿನಲ್ಲಿ ತಲೆ ಹೊಟ್ಟು ನಿವಾರಿಸುವ ಶಕ್ತಿ ಇದೆ. ಮೊಸರನ್ನು ತಲೆಗೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿ.

ಅಡಿಗೆ ಸೋಡಾ ತಲೆಹೊಟ್ಟಿಗೆ ಒಂದು ಸ್ಕ್ರಬ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವ ಮೂಲಕ ನಿಧಾನವಾಗಿ ತಲೆಹೊಟ್ಟನ್ನು ಹೊರಹಾಕುತ್ತದೆ. ಒದ್ದೆಯಾದ ಕೂದಲಿಗೆ ನೇರವಾಗಿ ಅಡಿಗೆ ಸೋಡಾವನ್ನು ಹಾಕಿ ಅದನ್ನು ನಿಮ್ಮ ನೆತ್ತಿಗೆ ಮಸಾಜ್ ಮಾಡಿ. ಒಂದು ನಿಮಿಷ ಅಥವಾ ಎರಡು ನಿಮಿಷಗಳ ಕಾಲ ಹಾಗೆ ಬಿಡಿ, ನಂತರ ನಿಮ್ಮ ಕೂದಲನ್ನು ನೀರಿನಿಂದ ತೊಳೆಯಿರಿ.

ಅಲೋವೇರಾ ಜೆಲ್ ತಲೆಗೆ ಹಚ್ಚಿಕೊಂಡು ಕೆಲ ಸಮಯ ನಂತ್ರ ತಲೆ ಸ್ನಾನ ಮಾಡಿ. ತಲೆ ಹೊಟ್ಟು ಕಡಿಮೆಯಾಗುವ ಜೊತೆಗೆ ಹೊಳಪು ಬರುತ್ತದೆ.

ಒಂದು ಚಮಚ ಕಡಲೇ ಹಿಟ್ಟಿಗೆ ಮೊಸರು ಸೇರಿಸಿ ಮಿಕ್ಸ್ ಮಾಡಿ. ಅದನ್ನು ತಲೆಗೆ ಹಚ್ಚಿಕೊಂಡು 10 ನಿಮಿಷ ಬಿಡಿ. ನಂತ್ರ ತಲೆ ಸ್ನಾನ ಮಾಡಿ.

Gayathri SG

Recent Posts

ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಬಿಜೆಪಿ ಮುಖಂಡನ ಬಂಧನ : ಠಾಣೆಗೆ ಹರೀಶ್ ಪೂಂಜ ಮುತ್ತಿಗೆ

ಮೇಲಂತಬೆಟ್ಟು ಅಕ್ರಮ ಕೋರೆಗೆ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಶಾಸಕ ಹರೀಶ್ ಪೂಂಜ ಆಪ್ತ ಬಿಜೆಪಿ ಯುವ ಮೋರ್ಚಾ ಮುಖಂಡ…

10 mins ago

ರಾತ್ರಿ 1:30 ಆದರೂ ನಿಲ್ಲದ ರೆಡ್​ ಆರ್ಮಿ ಹರ್ಷ; ವಿಡಿಯೋ ಮಾಡಿ ಶೇರ್​ ಮಾಡಿದ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2024ರಲ್ಲಿ ಅದ್ಭುತವನ್ನೇ ಮಾಡಿದೆ. ಸತತ ಪಂದ್ಯಗಳಲ್ಲಿ ಸೋತು ಒಂದು ಹಂತದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ…

14 mins ago

ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರೆಂಟ್

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಶನಿವಾರ ಅರೆಸ್ಟ್ ವಾರಂಟ್…

27 mins ago

ಸರಣಿ ಅಪಘಾತ: ಎರ್ಟಿಗಾ ಕಾರು ಸಂಪೂರ್ಣ ‌ನಜ್ಜುಗುಜ್ಜು

ಭೀಕರ ಸರಣಿ ಅಪಘಾತವು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಬಳಿ ನಡೆದಿದೆ.

30 mins ago

ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ : ಅದೃಷ್ಟ ತಂದ ಅಶ್ವಿನಿ ಪುನೀತ್ ರಾಜ್​ಕುಮಾರ್ ಎಂಬ ಪೋಸ್ಟ್ ವೈರಲ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲು ಕಂಡಾಗ ಸ್ಯಾಂಡಲ್​ವುಡ್​ ನಟ ದಿವಂಗತ ಪುನೀತ್ ರಾಜ್​ಕುಮಾರ್​ ಅವರ ಪತ್ನಿ ಅಶ್ವಿನಿಯವರನ್ನು…

1 hour ago

ಮೋದಿ ಪಾತ್ರದಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಸತ್ಯರಾಜ್

ಸಿನಿ, ರಾಜಕೀಯ, ಕ್ರೀಡಾ ಕ್ಷೇತ್ರದ ದಿಗ್ಗಜರ ಬದುಕಿನ ಮೇಲೆ ಸಿನಿಮಾ ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗೆ…

1 hour ago