Categories: ಅಂಕಣ

ಡಿಗ್ರಿ-01: ಸಂಖ್ಯಾಶಾಸ್ತ್ರ ಮತ್ತು ವಿವಿಧ ಅವಕಾಶಗಳು

ಎಲ್ಲರ ಬದುಕಲ್ಲೂ ಓದು ಮತ್ತು ಉದ್ಯೋಗ ಈಗಿನ ಸಮಾಜದಲ್ಲಿ ಬಹು ಮಹತ್ತರ ಘಟ್ಟ. “ವಿದ್ಯಾಹೀನಂ ಪಶುಸಮಾನಂ” ಎಂಬ ಮಾತಿದೆ, ವಿದ್ಯೆಯೇ ಸರ್ವತ್ರ ಸಾಧನವಲ್ಲದಿದ್ದರೂ, ಸರಿಯಾದ ವಿದ್ಯಾರ್ಜನೆಯ ಹೊರತು ಬದುಕೇ ದುಸ್ತರ. ನನ್ ಡಿಗ್ರಿ…. ಎಷ್ಟರ ಮಟ್ಟಿಗೆ ನನ್ನನ್ನು ಎತ್ತರಕ್ಕೆ ಒಯ್ಯಬಹುದೆಂದು ಕೆಲವರು ಎಳವೆಯಿಂದಲೇ ಲೆಕ್ಕಾಚಾರ ಹಾಕಿಕೊಂಡರೆ, ಮತ್ತೆ ಕೆಲವರು ಯಾವುದಾದರೂ ಆಗುತ್ತೆ, ಕೊನೆಗೆ ಸಿಗೋದು ಅಷ್ಟೇನೆ ಎನ್ನುವ ಮನಸ್ಥಿತಿಯವರು. ಸರಿ ಈವಾಗ, ಹತ್ತನೇ ತರಗತಿ ಒಂದು ಹಂತವಾದರೆ ಅಲ್ಲೇ ನಮ್ಮ ಭವಿಷ್ಯ ಬರೆದಿರುತ್ತದೆ. ಮುಂದಕ್ಕೇನು? ಕಲಾ, ವಾಣಿಜ್ಯ ಅಥವಾ ವಿಜ್ಞಾನ, ಯಾವ ಆಯ್ಕೆ ನನಗೆ ಸೂಕ್ತ? ಇದನ್ನು ನಿರ್ಧಾರ ಮಾಡುವುದು ಯಾರು? ಹೇಗೆ? ಯಾಕೆ? ಎನ್ನುವುದೆಲ್ಲಾ ಸಾಮಾನ್ಯ. ಕೆಲವೊಮ್ಮೆ ಹೆತ್ತವರು, ಹಿರಿಯರು, ಓರಗೆಯವರು, ಸ್ನೇಹಿತರು, ಅಧ್ಯಾಪಕರು ಹೀಗೇ ಹತ್ತು ಹಲವರು. ಸ್ವತಃ ತಾನೇ ನಿರ್ಧಾರ ಮಾಡಿ, ಏನಾದರೂ ಸಾಧಿಸಬಲ್ಲೆನೆಂಬುವರು ಮಾತ್ರ ಖಂಡಿತಾ ಸೋಲರಿಯದ ಸರದಾರರಾಗುತ್ತಾರೆ.

ಇಂದು ಒಂದು ಡಿಗ್ರಿಯ ಕತೆ ತಿಳಿದುಕೊಳ್ಳೋಣ. ಗಣಿತದಲ್ಲಿ ಕಷ್ಟ ಪಟ್ಟು ಸುಮಾರಾಗಿ ಅಂಕ ಪಡೆದವರು ಮತ್ತೆ ಆ ಕಡೆ ತಿರುಗಿ ನೋಡುವುದಿಲ್ಲ. ಆದರೆ ಗಣಿತದೊಳಗೆ ಈಜಾಡಿ ಬಂದವರು ಆಮೇಲೆ ವಾಣಿಜ್ಯ ಪದವಿಯವರೆಗೂ ಸಲೀಸಾಗಿ ಮಿಂದೆದ್ದು ಬರುತ್ತಾರೆ. ಸಂಖ್ಯಾಶಾಸ್ತ್ರವೂ ಅದೇ ತರಹದ ಬಹುಬೇಡಿಕೆಯ ಪದವಿ. ಆದರೆ ಇದರ ಬಗ್ಗೆ ಹೆಚ್ಚಿನವರು ಗಮನ ಹರಿಸಿದಂತಿಲ್ಲ. ಪಿಯುಸಿಯಲ್ಲಿ ಸಂಖ್ಯಾಶಾಸ್ತ್ರ (ಸ್ಟಾಟಿಸ್ಟಿಕ್ಸ್) ತಗೊಂಡು ಮತ್ತೆ ಪದವಿಯಲ್ಲಿ ಬಿ.ಎಸ್ಸಿ. ಅಥವಾ ಬಿ.ಕಾಂ. ಡಿಗ್ರಿಯೊಂದಿಗೆ ಮುಂದುವರಿದು ಎಂ.ಎಸ್ಸಿ. ಇನ್ ಸ್ಟಾಟಿಸ್ಟಿಕ್ಸ್ ಮಾಡುವುದು ಬಹಳ ಉತ್ತಮವಾದ ಆಯ್ಕೆ.

ಉದ್ಯೋಗಾವಕಾಶಗಳು:

ಬಿ.ಎಸ್ಸಿ. ಅಥವಾ ಎಂ.ಎಸ್ಸಿ. ಮುಗಿಸಿದ ತಕ್ಷಣ ನಮ್ಮ ಮೊದಲ ನೋಟ ಹೋಗುವುದೇ ಉದ್ಯೋಗದ ಕಡೆಗೆ. ನಮ್ಮ ವಿದ್ಯಾಭ್ಯಾಸಕ್ಕೆ ಸರಿಯಾದ ಅವಕಾಶಗಳೇ ಇಲ್ಲ ಎನ್ನುವುದು ಈಗಿನ ಯುವಕರ ಮಾತು; ಆದ್ರೆ ಅದು ಸತ್ಯಕ್ಕೇ ದೂರವಾದದ್ದು. ಕಾರಣ ಇಷ್ಟೇ. ಕಾಲದೊಂದಿಗೆ ನಾವು ಬದಲಾಗದೇ ಇರುವುದೇ ನಮ್ಮ ಉದ್ಯೋಗಕ್ಕೆ ಕತ್ತರಿ! “ಈಗ ಏನಿದ್ದರೂ ಪ್ರತಿಭಾವಂತರದ್ದೇ ಕಾಲ” ಅಂತಾರೆ ಇನ್ನೊಂದು ವರ್ಗದ ಜನ. 100% ಈ ಮಾತು ನಿಜ. ಆದರೆ ಯಾವ ರೀತಿಯ ಪ್ರತಿಭೆ? ನಾವು ಸಾಧಿಸಬೇಕಾದ್ದಾರೂ ಏನು? ಇದಕ್ಕೆ ಉತ್ತರ ನಮ್ಮಲ್ಲೇ ಇದೆ. ತಮ್ಮ ಕ್ಷೇತ್ರದಲ್ಲಿನ ಎಲ್ಲಾ ರೀತಿಯ ಬೆಳವಣಿಗೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಪೂರಕವಾಗಿ ಪದವಿಯಲ್ಲಿನ ಸಾಧನೆಯೇ ಈ ಪ್ರತಿಭೆ, ಖಂಡಿತ ಒಂದಲ್ಲ ಒಂದು ದಿನ ವಿದ್ಯಾರ್ಥಿಯ ಉತ್ತಮ ಭವಿಷ್ಯಕ್ಕೆ ಇದು ನಾಂದಿಯಾಗುತ್ತದೆ. ಇನ್ನು ಸ್ಟಾಟಿಸ್ಟಿಕ್ಸ್ ನಲ್ಲಿ ಎಂ.ಎಸ್ಸಿ. ಮಾಡಿದವರಿಗೆ ಸಿಗುವ ಉದ್ಯೋಗಾವಕಾಶಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ:

ಸಾರ್ವಜನಿಕ ಮತ್ತು ಖಾಸಗಿ ಎರಡೂ ವಲಯಗಳಲ್ಲೂ ಅನೇಕ ಬೇಡಿಕೆಯಿರುವ ಪದವಿಯಿದು. ಸರಿಯಾದ ರೀತಿಯಲ್ಲಿ ಕೆಲಸ ಹುಡುಕಿಕೊಂಡು ಹೋದಲ್ಲಿ ತಿಂಗಳಿಗೆ ಲಕ್ಷಕ್ಕೂ ಅಧಿಕ ಸಂಬಳ ತರುವ ಡಿಗ್ರಿಯಿದು. ಅಮೇರಿಕಾದ ‘ಬ್ಯುರೋ ಆಫ್ ಲೇಬರ್ ಸ್ಟಾಟಿಸ್ಟಿಕ್ಸ್’ ಹೇಳುವ ಪ್ರಕಾರ (2014ರ ವರದಿಯಂತೆ) ಬರೇ ಸಂಖ್ಯಾಶಾಸ್ತ್ರಜ್ನರ ವ್ರತ್ತಿಗೆ 26,970 ಉದ್ಯೋಗಗಳು ವರ್ಗೀಕರಣಗೊಂಡಿದ್ದವು. ಇನ್ನು 2016 ರಿಂದ 2026 ರವರೆಗೆ ಶೇಕಡಾ 33 ರಷ್ಟು ಹೆಚ್ಚಿನ ಉದ್ಯೋಗಗಳು ದೊರೆಯಲಿವೆ ಅಂತಾನೂ ಅಂದಾಜಿಸಲಾಗಿದೆ. ಭಾರತದಲ್ಲೂ ಸಂಖ್ಯಾಶಾಸ್ತ್ರಕ್ಕೆ ಅಪಾರ ಬೇಡಿಕೆಯಿದೆ. ಹತ್ತು ಹಲವು ರೀತಿಯ ವರ್ಗದಲ್ಲಿ ಕೆಲಸಗಿಟ್ಟಿಸಿಕೊಳ್ಳುವ ಡಿಗ್ರಿಯಿದು. ಎಂ.ಎಸ್ಸಿ. (ಸ್ಟಾಟಿಸ್ಟಿಕ್ಸ್) ಮಾಡಿದವರು ನೇರವಾಗಿ ಈ ರೀತಿಯ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬಹುದು: ಉಪನ್ಯಾಸ ವ್ರತ್ತಿ, ಸಂಖ್ಯಾಶಾಸ್ತ್ರಜ್ಞ, ಡಾಟಾ ಅನಲಿಸ್ಟ್, ಡಾಟಾ ಸೈಂಟಿಸ್ಟ್, ಬಯೋ ಸ್ಟಟಿಸ್ಟೀಷಿಯನ್, ಅನಾಲಿಟಿಕ್ಸ್ ಕನ್ಸಲ್ಟೆಂಟ್, ಸ್ಟಟಿಸ್ಟಿಕಲ್ ಅನಲಿಸ್ಟ್, ಆನ್ಲೈನ್ ಟ್ಯೂಟರ್, ಸ್ಟಟಿಸ್ಟಿಕಲ್ ಇನ್ವೆಸ್ಟಿಗೇಟರ್, ಮತ್ತು ಸಂಶೋಧಕರಾಗಿಯೂ ಕೆಲಸ ಗಿಟ್ಟಿಸಿಕೊಳ್ಳಬಹುದು.

ಬಹು ಬೇಡಿಕೆಯಿರುವ ಕ್ಷೇತ್ರಗಳು: ಸಂಶೋಧನೆ ಮಾಡುವ ಎಲ್ಲಾ ಕ್ಷೇತ್ರಗಳಲ್ಲಿ ಸ್ಟಾಟಿಸ್ಟಿಕ್ಸ್ ನ ಅಗತ್ಯತೆಯಿದೆ. ಆರ್ಥಿಕ ವಲಯದಲ್ಲಿ, ವಾಣಿಜ್ಯ ಕ್ಷೇತ್ರದಲ್ಲಿ, ವೈಜ್ನಾನಿಕ ಸಂಶೋಧನಾ ರಂಗದಲ್ಲಿ, ಕ್ರೀಡಾವಲಯದಲ್ಲಿ, ಮನರಂಜನಾ ವಿಭಾಗದಲ್ಲಿ, ವೈದ್ಯಕೀಯ ವ್ಯವಸ್ಥೆಯಲ್ಲಿ, ಎಲ್ಲಾ ಕಡೆಯೂ ಈ ಪದವಿಧರರ ಬೇಡಿಕೆಯಿದೆ. ಬರೇ ಬಿ.ಕಾಂ. (ಸ್ಟಾಟಿಸ್ಟಿಕ್ಸ್) ಆಯ್ಕೆ ಮಾಡಿಕೊಂಡವರು ಷೇರುಮಾರುಕಟ್ಟೆಯಲ್ಲಿ ಅನೇಕ ಉದ್ಯೋಗಾವಕಾಶಗಳನ್ನು ಗಿಟ್ಟಿಸಿಕೊಂಡಿದ್ದರೆ, ವಾರ್ತೆಗಳಲ್ಲಿ ಬರುವ ಹಲವಾರು ವರದಿಗಳಲ್ಲೂ, ಸಂಶೋಧನೆಯಲ್ಲೂ ಕೆಲಸ ಮಾಡಬಹುದು. ಇನ್ಸುರೆನ್ಸ್ ಕಂಪೆನಿಗಳಲ್ಲಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಮಾರುಕಟ್ಟೆ ಸಂಶೋಧನಾ ಕಂಪೆನಿಗಳಲ್ಲಿ,  ಸಾರ್ವಜನಿಕ ವಲಯದ  ಸಂಶೋಧನಾ ಸಂಸ್ಥೆಗಳಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಮೆಡಿಸಿನ್ ವಿಭಾಗದಲ್ಲಿ, ಕಚ್ಛಾವಸ್ತು ತಯಾರಿಕಾ ಘಟಕಗಳಲ್ಲಿ, ಮತ್ತು ಯಾವುದೇ ರೀತಿಯ ರಿಸರ್ಚ್ ಸೆಂಟರ್ ಗಳಲ್ಲಿ ಬಿ.ಕಾಂ. ಅಥವಾ ಬಿ.ಎಸ್ಸಿ. ಪದವೀಧರರು ಉದ್ಯೋಗ ಪಡೆದುಕೊಳ್ಳಬಹುದು.

ಡಿಗ್ರಿ ಮತ್ತು ಉದ್ಯೋಗದ ಆಯ್ಕೆ ಹೇಗೆ?

ಡಿಗ್ರಿ ಕಾಲೇಜಿಗೆ ಅರ್ಜಿ ತುಂಬುವಾಗಲೇ ಉದ್ಯೋಗಕ್ಕೆ ಬೇಡಿಕೆಯಿರುವ ಡಿಗ್ರಿಯನ್ನೇ ಆಲೋಚನೆಯಲ್ಲಿಟ್ಟುಕೊಂಡು ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು. ಮೊತ್ತಮೊದಲು ಕೆಲವು ಸಾಮಾನ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳೋಣ:

1.  ತಾನು ಆಯ್ಕೆ ಮಾಡಿಕೊಂಡ ಕೋರ್ಸ್ ಸರಿಯಾದದ್ದೇ? ಮತ್ತು ವರ್ಷದ ಬಳಿಕ ಇದಕ್ಕೆ ಮಾರುಕಟ್ಟೆ ಇದೆಯೇ?

2. ಯಾವ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆನ್ನುವ ಆಸಕ್ತಿ? ಉದಾಹರಣೆಗೆ ಷೇರುಮಾರುಕಟ್ಟೆಯಲ್ಲಿ ಕೆಲಸ ಮಾಡುವ ಇಚ್ಛೆಯಿದ್ದಲ್ಲಿ ಬಿ.ಕಾಂ. (ಸ್ಟಾಟಿಸ್ಟಿಕ್ಸ್)  ಉತ್ತಮ. ಅದೇ ಮೆಡಿಸಿನ್ ವಿಭಾಗದಲ್ಲಿ ಉದ್ಯೋಗ ಬೇಕಿದ್ದಲ್ಲಿ ಬಿ.ಎಸ್ಸಿ. (ಸ್ಟಾಟಿಸ್ಟಿಕ್ಸ್)  ಒಳ್ಳೆಯದು.

3. ಉತ್ತಮ ರೆಸ್ಯೂಮೆ ಹೊಂದಿರಬೇಕು. ತಾನು ಕಾಲೇಜಿನಲ್ಲಿ ಮಾಡುವ ಪ್ರತಿಯೊಂದು ಸಾಧನೆಯೂ ರೆಸ್ಯೂಮೆಗೆ ಬಲಕೊಡುವಂತಿರಬೇಕು. ಉದಾಹರಣೆಗೆ: ಉಪನ್ಯಾಸಕರಾಗುವ ಕನಸು ಹೊಂದಿದ್ದಲ್ಲಿ ಸ್ಟಾಟಿಸ್ಟಿಕ್ಸ್ ಕುರಿತು ತುಂಬಾ ಓದುವ ಹವ್ಯಾಸ ಬೆಳೆಸಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ, ಸರ್ಕಾರಿ ನೌಕರಿಗಾದಲ್ಲಿ, ಸಂಶೋಧನಾ ಪ್ರಬಂಧ ಮಂಡನೆಗಳು ಬಹಳ ಸೂಕ್ತ.

4. ಯಾವುದೇ ಉದ್ಯೋಗಕ್ಕಾದರೂ ಸರಿ, ಸಂಖ್ಯಾಶಾಸ್ತ್ರದಲ್ಲಿ ವಿಮರ್ಶೆ ಮಾಡುವ, ಸಂಶೋಧನೆ, ಅಧ್ಯಯನ ಮಾಡುವ ಗುಣ ಹೊಂದಿರಬೇಕು.

5. ಕೊನೆಯದಾಗಿ ತಾನು ಯಾವ ನೌಕರಿ ಮಾಡುವುದೆಂದು ನಿರ್ಧರಿಸಿರುತ್ತೇವೋ ಅದರ ಬಗ್ಗೆ ಆರಂಭದಿಂದಲೇ ಸಿದ್ಧತೆ ನಡೆಸುವುದು. ಇದು ಬಹಳ ಮುಖ್ಯವಾದದ್ದು, ಏಕೆಂದರೆ, ಮೂರು ವರುಷದ ಶಿಕ್ಷಣದ ಬಳಿಕ ತನಗೆ ಜಾಬ್ ಇಲ್ಲ ಎಂದಾದರೆ ಅದು ಅವರ ಪ್ರಯತ್ನದ ಸೋಲೇ ಹೊರತು ಡಿಗ್ರಿಯದಲ್ಲ.

ಈ ಪಂಚಸೂತ್ರಗಳನ್ನು ತಮ್ಮ ಡಿಗ್ರಿಯನ್ನು ಆಯ್ಕೆ ಮಾಡುವಲ್ಲಿ ಜಾಗ್ರತೆ ವಹಿಸಿದ್ದಲ್ಲಿ ಮುಂದಕ್ಕೆ ನೌಕರಿ ಹುಡುಕುವ ಅಗತ್ಯವೇ ಇಲ್ಲ. ತನ್ನಿಂದ ತಾನಾಗಿಯೇ ಉತ್ತಮ ಸಂಬಳ ನೀಡುವ ಸ್ಟಾಟಿಸ್ಟಿಕ್ಸ್ ಡಿಗ್ರಿ ನಮ್ಮ ಸುತ್ತಮುತ್ತ ಇರಬೇಕಾದರೆ, ಇನ್ಯಾಕೆ ಭಯ..? ಸ್ವಲ್ಪ ಆಲೋಚನೆ ಮಾಡಿ ಸರಿಯಾದ ದಿಕ್ಕಿನಲ್ಲಿ… ಮತ್ತೊಮ್ಮೆ ಸಿಗೋಣ ಹೊಸ ಡಿಗ್ರಿಯೊಂದಿಗೆ.. ನವ ನೌಕ್ರಿಯೊಂದಿಗೆ….

Desk

Recent Posts

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲ್ಲುತ್ತಾರೆ : ಹೆಚ್‌ಡಿಕೆ

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗ ಗ್ರಾಮಾಂತರದಲ್ಲಿ ಒಂದು ಲಕ್ಷದ ಮತ ದಿಂದ ರಾಘವೇಂದ್ರ ಗೆಲ್ಲಲಿದ್ದಾರೆ ಎಂದು ಮಜಿಮುಖ್ಯಮಂತ್ರಿ ಕುಮಾರ ಸ್ವಾಮಿ…

2 hours ago

ಪ್ರಜ್ವಲ್ ರೇವಣ್ಣ ಉಚ್ಚಾಟನೆ : ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ

ಪ್ರಜ್ವಲ್ ರೇವಣ್ಣ ಉಚ್ಚಾಟನೆ ಬಗ್ಗೆ ಮಾಜಿ ಸಿಎಂ ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದು, ನಿನ್ನೆಯೇ ಈ ಬಗ್ಗೆ ನಮ್ಮ…

2 hours ago

ಬಿಜೆಪಿ ಅಭ್ಯರ್ಥಿ ಜೈಲಿಗೆ ಹೋಗುವ ದಿನಕ್ಕೆ ಕ್ಷಣಗಣನೆ : ಪ್ರಿಯಾಂಕಾ ಗಾಂಧಿ

ಒಲಿಂಪಿಕ್ಸ್ ಆಟಗಾರರ ಮೇಲೆ ಕಿರುಕುಳವಾಗಿತ್ತು, ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಆಗ ಪ್ರಧಾನಿ ಮೋದಿ‌ ಸುಮ್ಮನೆ ಇದ್ದರಲ್ಲದೆ ಇಂದು ಕರ್ನಾಟಕದಲ್ಲಿ ಸಾವಿರಾರು…

2 hours ago

ಕಾಂಗ್ರೆಸ್ ಗ್ಯಾರಂಟಿ ಕಾರ್ಡ ವಿತರಣೆ ಮಾಡಿದ ಕಾರ್ಯಕರ್ತರು

ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಗೆಲವು ನಿಶ್ಚಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿಶ್ವರಾಧ್ಯ ದಳವಾಯಿ ಸುಂಬಡ ಅವರು…

3 hours ago

ದೇಶ ಭಕ್ತಿಯನ್ನು ಮೋದಿಯವರಿಗೆ ಗುತ್ತಿಗೆ ಕೊಟ್ಟಿಲ್ಲ: ಲಕ್ಷ್ಮಣ ಸವದಿ

ದೇಶ ಭಕ್ತಿಯನ್ನು ಈ ಬಿಜೆಪಿಯವರಿಗೆ ಹಾಗೂ ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ. ನಾವು ಕೂಡ ದೇಶ ಭಕ್ತರೇ ಎಂದು ಮಾಜಿ ಮುಖ್ಯಮಂತ್ರಿ…

3 hours ago

ಶನಿವಾರಸಂತೆ ಹಲ್ಲೆ ಪ್ರಕರಣ : ನಿಷ್ಪಕ್ಷಪಾತ ತನಿಖೆಗೆ ಹನೀಫ್ ಒತ್ತಾಯ

ಕಳೆದ ಚುನಾವಣಾ ದಿನದಂದು ಕ್ಷುಲ್ಲಕ ವಿಚಾರವಾಗಿ ಎರಡು ರಾಜಕೀಯ ಪಕ್ಷಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷ್ಪಕ್ಷಪಾತವಾದ…

3 hours ago