Categories: ಅಂಕಣ

ಕೇಶ ಸೌಂದರ್ಯಕ್ಕಾಗಿ ಹೇರ್ ಕಲರಿಂಗ್

ಕೂದಲಿಗೆ ಬಣ್ಣ ಹಾಕುವುದು ಇಂದು ಟ್ರೆಂಡ್ ಆಗಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಹೇರ್ ಕಲರ್ ಇಷ್ಟ ಪಡುತ್ತಾರೆ. ಕೆಲವರು ಬಿಳಿ ಕೂದಲು ಮರೆ ಮಾಚಲು ಬಳಸಿದರೆ, ಇನ್ನೂ ಕೆಲವರು ಸ್ಟೈಲ್ ಆಗಿ ಕಾಣಲು ಬಳಸುತ್ತಾರೆ. ಹೀಗೆ ಅವರವರ ಇಚ್ಛೆಗೆ ಅನುಗುಣವಾಗಿ ಹೇರ್ ಕಲರಿಂಗ್ ಮಾಡಿಸಿಕೊಳ್ಳುತ್ತಾರೆ.

ಇನ್ನು ಸೌಂದರ್ಯದ ವಿಚಾರಕ್ಕೆ ಬಂದಾಗ ಪುರುಷರಾಗಲೀ ಮಹಿಳೆಯರಾಗಲೀ ಸಮಾನ ಆಸಕ್ತಿಯನ್ನು ಹೂಂದಿರುತ್ತಾರೆ. ಏಕೆಂದರೆ ಇಂದು ಮಹಿಳೆ ಮಾತ್ರ ಹೇರ್ ಕಲರಿಂಗ್ ಮಾಡಲು ಉತ್ಸಾಹ ತೋರುತ್ತಿಲ್ಲ ಜೊತೆಗೆ ಯುವಕರು ಇತ್ತ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.  ಬಿಳಿ ಕೂದಲನ್ನು ಅಡಗಿಸಲೋ ಅಥವಾ ಫ್ಯಾಶನ್ ಪ್ರಿಯತೆಗೋ ಇಂದು ಕೂದಲಿಗೆ ಬಣ್ಣ ಹಚ್ಚುವುದು ಮಾತ್ರ  ಸಾಮಾನ್ಯವಾಗಿಬಿಟ್ಟಿದೆ. ಮೊದಲೆಲ್ಲಾ ಬಿಳಿ ಕೂದಲನ್ನು ಮರೆಮಾಚಲು ಬಳಸುತ್ತಿದ್ದ ಬಣ್ಣ ಇದೀಗ ಕಪ್ಪು ಕೂದಲನ್ನು ಬೇರೆ ಬೇರೆ ಬಣ್ಣಗಳಲ್ಲಿ ಅಲಂಕರಿಸಲು ಸಹಕಾರಿಯಾಗಿದೆ.

ಮಹಿಳೆಯರಿಗೆ ಕೇಶರಾಶಿಯು ಅತ್ಯಂತ ಸೊಬಗನ್ನು ನೀಡುತ್ತದೆ. ತನ್ನ ಕೇಶವು ಇತರರಿಗಿಂತ ದಟ್ಟವಾಗಿ, ನೀಳವಾಗಿ, ಅಂದವಾಗಿ ಕಾಣಬೇಕು ಎಂದು ಬಯಸುವುದು ಹೆಣ್ಣಿನ ಸಾಮಾನ್ಯ ಗುಣ. ಆ ಕಾರಣದಿಂದಲೇ ತಮ್ಮ ಕೂದಲನ್ನು ಕಲರಿಂಗ್, ಭಿನ್ನ ರೀತಿಯ ಹೇರ್ ಕಟಿಂಗ್, ಹೇರ್ ಪ್ಯಾಕ್ ಮಾಡಿಕೊಳ್ಳುತ್ತಾರೆ. ಹೇರ್ ಕಲರಿಂಗ್ ನಿಂದ ಶೈಲಿ ಹಾಗು ನೋಟವೇ ಬದಲಾಗಬಹುದು.

ಇನ್ನು ಹೇರ್ ಕಲರಿಂಗ್ ನಿಂದ ಆಗುವಂತಹ ಅಡ್ಡ ಪರಿಣಾಮಗಳನ್ನು ತಿಳಿದುಕೊಳ್ಳುವುದು ಅವಶ್ಯ, ಹೇರ್ ಕಲರಿಂಗ್ ಮಾಡುವುದರಿಂದ ಕೂದಲಿನ ಹೊರಪೊರೆಯನ್ನು ಒಡೆಯಲು ಪ್ರಾರಂಭಿಸುತ್ತದೆ. ಕೂದಲಿನ ನೈಸರ್ಗಿಕ ರಚನೆಯನ್ನು ಹಾಳು ಮಾಡುವುದಲ್ಲದೇ, ಮತ್ತಷ್ಟು ಒಣಗುವುದು, ಕೂದಲು ಉದುರುವುದು ಇಂತಹ ಸಮಸ್ಯೆ ಜೊತೆಗೆ, ಆರೋಗ್ಯಕ್ಕೂ ಕೂಡ ಅನೇಕ ರೀತಿಯ ಸಮಡಸ್ಯೆಗಳು ಉಂಟಾಗುತ್ತದೆ. ಹಲವಾರು ರಾಸಾಯನಿಕಗಳನ್ನು ಹೊಂದಿರುವ ಕಲರಿಂಗ್ ಕೂದಲಿಗೆ ಲೇಪಿಸುವುದರಿಂದ ಅಲರ್ಜಿ, ಚರ್ಮದ ಸುಡುವಿಕೆ ಮತ್ತು ಉಸಿರಾಟದ ತೊಂದರೆಗಳು ಉಂಟು ಮಾಡುವ ಸಾಧ್ಯತೆಯೂ ಇದೆ.

Gayathri SG

Recent Posts

ಡಾಲಿ ನಟನೆಯ‘ಕೋಟಿ’ ಸಿನಿಮಾ ಮೊದಲ ಹಾಡು ಬಿಡುಗಡೆ

ಡಾಲಿ ಧನಂಜಯ್‌ ನಟಿಸಿರುವ ‘ಕೋಟಿ’ ಸಿನಿಮಾದ ಟೀಸರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಸದ್ದು ಮಾಡಿತ್ತು. ಇದೀಗ ಸಿನಿಮಾದ…

6 mins ago

ನಾಮಪತ್ರ ಸಲ್ಲಿಸಲು ‘ಚಟ್ಟ’ದಲ್ಲಿ ಆಗಮಿಸಿದ ಪಕ್ಷೇತರ ಅಭ್ಯರ್ಥಿ

ಉತ್ತರ ಪ್ರದೇಶದ ಗೋರಖ್ ಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿ ರಾಜನ್ ಯಾದವ್ ಮಂಗಳವಾರ 'ಚಟ್ಟ'ದಲ್ಲಿ ಜಿಲ್ಲಾಧಿಕಾರಿ…

35 mins ago

ಶಿಕ್ಷಕರಿಗೆ 15 ದಿನಗಳ ರಜೆ ಕಡಿತ : ಎಸ್‌ಎಸ್‌ಎಲ್‌ಸಿ ವಿಶೇಷ ತರಗತಿ ನಡೆಸಲು ಸೂಚನೆ

ರಾಜ್ಯದ ಪ್ರೌಢಶಾಲಾ ಶಿಕ್ಷಕರ 15 ದಿನಗಳ ರಜೆ ಕಡಿತ ಮಾಡಿದ್ದು, ಇಂದಿನಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಶೇಷ…

43 mins ago

ಈ ಜಿಲ್ಲೆಗಳಲ್ಲಿ ಧಾರಕಾರ ಮಳೆ : ಸಿಡಿಲು ಬಡಿದು ಯುವಕ ಸಾವು

ನೆನ್ನೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಧಾರಕಾರವಾಗಿ ಮಳೆ ಸುರಿದು ಭೂಮಿಯನ್ನುವರುಣ ತಂಪಾಗಿಸಿದ್ದಾನೆ  ಆದರೆ ಕೆಲವಡೆ ಅವಾಂತರಗಳಾಗಿವೆ.ಕೃಷ್ಣನ ನಾಡು ಉಡುಪಿಯಲ್ಲೂ ಮಂಗಳವಾರ…

54 mins ago

ಇದು ಮಾವು ಸೀಜನ್‌: ತಾಜಾ ಮಾವಿನ ರಸ ಕುಡಿಯುವುದರಿಂದ ಏನೆಲ್ಲ ಪ್ರಯೋಜನ?

ಈಗ ಮಾವು ಸೀಜನ್‌. ಯಾವ ಹಣ್ಣಿನ ಅಂಗಡಿ ನೋಡಿದರಲ್ಲಿ ಮಾವಿನ ರಾಶಿ ಕಂಡುಬರುತ್ತದೆ. ಆದರೆ ಈಗ ಕೆಲವೊಂದು ಮಾವು ಅಪಾಯಕಾರಿ…

1 hour ago

ರಾಶಿ ಭವಿಷ್ಯ : ಯಾರಿಗೆ ಲಾಭ? ಯಾರಿಗೆ ನಷ್ಟ?

ರಾಶಿ ಭವಿಷ್ಯ ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮೇ 15…

2 hours ago