News Karnataka Kannada
Wednesday, May 01 2024
ಅಂಕಣ

ಕನಸಿನ ಮನೆಯಲ್ಲಿ ಸುಖ ನೆಮ್ಮದಿ ಶಾಶ್ವತ

Sushma Namma Mane
Photo Credit : News Kannada

ಸುಂದರ ಮನೆ ಪ್ರತಿಯೊಬ್ಬರ ಕನಸು. ತಾವು ಬೆವರು ಸುರಿಸಿ ಒಂದೊಂದು ರೂಪಾಯಿಯು ಕೂಡಿಟ್ಟು ಕಟ್ಟುವಂತಹ ಮನೆ ವಿಭಿನ್ನ ರೀತಿಯಲ್ಲಿ ಕಟ್ಟುವ ಆಸೆ ಪ್ರತಿಯೋಬ್ಬರದಾಗಿರುತ್ತದೆ.

ಮನೆ ಕಟ್ಟುವಂತಹ ಸ್ಥಳ ಸುಂದರ ನಿಶಬ್ದ ವಾತಾವರಣವಾಗಿದ್ದರೆ ಮನಸ್ಸಿಗೆ ಮುದ ನೀಡುತ್ತದೆ. ಸುತ್ತಲೂ ಮರಗಳಿದ್ದರೆ ಆ ಮರಗಳ ನೆರಳು ನಮ್ಮ ಮನೆ ಮೇಲೆ ಬೀಳುವಂತಿದ್ದರೆ, ಮನೆಯ ಒಳೆಗೆ ಹಾಗೂ ಹೊರಗೆ ತಂಪಾದ ವಾತಾವರಣ ಇರುತ್ತದೆ.

ಮನೆಯ ಮುಂದೆ ಸುಂದರ ಬಣ್ಣ ಬಣ್ಣ ಹೂಗಳ ಕೈತೋಟವೊಂದಿದ್ದರೆ, ಮನಸ್ಸಿಗೆ ಮುದನೀಡುತ್ತದೆ.  ಮನೆಯ ಹಿತ್ತಲಿನಲ್ಲಿ ಕಿಚನ್ ಗಾರ್ಡನ್ ಇದ್ದಲ್ಲಿ ಮಹಿಳೆಯರು ಸಣ್ಣ ಪ್ರಮಾಣದ ಸೇವಿಂಗ್ಸ್ ಮಾಡಬಹುದು.

ಇವೆಲ್ಲದಕ್ಕೂ ಮುಖ್ಯವಾಗಿ ಮನೆಯ ವಿನ್ಯಾಸ ತುಂಬನೆ ಅಗತ್ಯ. ನಮ್ಮ ಅವಶ್ಯಕತೆಗೆ ತಕ್ಕಂತೆ ಮನೆಯ ಸಂಪೂರ್ಣ ಚಿತ್ರಣದಂತೆ ಮನೆಯ ನಿರ್ಮಾಣ ಅವಶ್ಯಕ. ಮನೆಯ ಕೋಣೆಗಳು, ಮನೆಯ ಲಿವಿಂಗ್ ಏರಿಯ, ಮಾಡ್ಯುಲರ್ ಅಡುಗೆ ಕೋಣೆ, ದೇವರ ಕೋಣೆ, ಡಿನ್ನರ್ ಏರಿಯ ಹಾಗೂ ಬಾತ್ ರೂಂಗಳು ಹೀಗೆ ಪ್ರತಿಯೊಂದಕ್ಕು ನಮ್ಮ ಅಭಿರುಚಿಗೆ ತಕ್ಕಂತೆ ಪ್ರಾಮುಖ್ಯತೆಯನ್ನು ನೀಡಬೇಕು.

ಮನೆಗೆ ತಕ್ಕದಾದ ಇಂಟೀರಿಯರ್ ಡಿಸಯನ್ಸ್ ಕೂಡ ಮನೆಯ ಅಂದ ಚಂದವನ್ನು ಹೆಚ್ಚಿಸಲು ಇನ್ನೂ ಸಹಾಕಾರಿ. ಗೋಡೆಗಳ ಮೇಲಿನ ಬಣ್ಣಗಳು ಅದರಲ್ಲೂ ಇಂದಿನ ಸಮಯದಲ್ಲಿ ವಿವಿಧವಾದ ಚಿತ್ರಗಳನ್ನು ಬರೆಯುವ ಎಕ್ಸ್ಪರ್ಟ್ಸ್ ಗಳು ಇದ್ದಾರೆ.

ಮನೆಯ ನೆಲಕ್ಕೆ ಹಾಸುವ ಟೈಲ್ಸ್ ಗಳು ಆಕರ್ಷವಾಗಿದ್ದಷ್ಟು ಉತ್ತಮ. ಈಗೀನ ಟ್ರೇಂಡ್ ಪ್ರಕಾರ ತ್ರಿಡಿ ಟೈಲ್ಸ್ ಎಲ್ಲರ ಮನಸ್ಸೂರೆಗೊಳ್ಳುವಂತಿರುತ್ತದೆ.

ಮನೆಯ ಬಾಗಿಲು ಮನೆಯ ತೋರಣ ಎನ್ನಬಹುದು ಸುಂದರ ಮರದ ಕೆತ್ತನೆಯ ಬಾಗಿಲು ಎಂತಹ ಮಾರ್ಡನ್ ಮನೆಗೂ ಶೋಭೆತರುತ್ತದೆ.

ಮನೆಯ ಬಾಲ್ಕನಿ ಸನ್ ಲೈಟ್‍ಗೆ ಮುಖಮಾಡುವಂತಿರಲಿ. ಅದರಲ್ಲೂ ಸಂಜೆಯ ಕಾಫಿ ಸವಿಯುತ್ತಾ, ಮನೆಯವರೊಂದಿಗೆ ಸಮಯ ಕಳೆಯಲು ಸಾಕಷ್ಟು ಸೂಕ್ತವಾದ ಜಾಗ. ಮನೆಯ ಅಂದಚಂದವನ್ನು ಹೆಚ್ಚಿಸಲೂ ಮಹತ್ತರವಾದ ಪಾತ್ರವಹಿಸುತ್ತದೆ.

ಸಾಧಾರಣ ಬೆಳಕು ನೀಡುವ ಲೈಟ್‍ನಿಂದ ಹಿಡಿದು ಯುವಿ ಲೈಟಿಂಗ್ ಅದರಲ್ಲೂ ಅತ್ಯಾಕರ್ಷಕ ವಿನ್ಯಾಸವುಳ್ಳ ಲೈಟಿಂಗ್ ಮನೆಯ ಅಂದಚಂದ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಮನಸ್ಸು ಮಾಡಿದರೆ ಮನೆಯೊಳಗೆ ಒಂದು ಸುಂದರ ಕಲ್ಪನಾ, ಭಾವನಾತ್ಮಕ ಲೋಕವನ್ನೇ ಸೃಷ್ಟಿಸಬಹುದು.

ಒಟ್ಟಿನಲ್ಲಿ ನಮ್ಮ ಮನೆ ನಮ್ಮ ಅಭಿರುಚಿಗೆ ತಕ್ಕಂತೆ ಇದ್ದಲ್ಲಿ, ಎಷ್ಟೇ ಚಿಂತೆ ಇದ್ದರು ಮನೆ ಸೇರಿದೊಡನೆ ಎಲ್ಲವೂ ಗಾಳಿಯಲ್ಲಿ ತೂರಿಹೋಗಬಹುದು. ಇದರಿಂದ ಮನೆಯೊಳಗೆ ಸದಾ ನೆಮ್ಮದಿ ಸುಖ ಶಾಂತಿ ನೆಲೆಸಿರುತ್ತದೆ.

 

Listen to the Article narrated by the author:

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು