News Karnataka Kannada
Wednesday, May 08 2024
ಅಂಕಣ

ಕಡಲೆ ಹಿಟ್ಟು ಹಲವು ವಿಧದಲ್ಲಿ ತ್ವಚೆಗೆ ಉಪಯೋಗಕಾರಿ

Kadle Hittu
Photo Credit :

ಸೌಂದರ್ಯದ ವಿಚಾರ ಬಂದಾಗ ಹಲವಾರು ಬಗೆಗಿನ ಸೌಂದರ್ಯ ವರ್ಧಕಗಳನ್ನು ನಾವು ಬಳಕೆ ಮಾಡುತ್ತೇವೆ. ಅಂಗಡಿಗಳಲ್ಲಿ ಸಿಗುವಂತಹ ರಾಸಾಯನಿಕ ಆಧಾರಿತ ವಸ್ತುಗಳನ್ನು ಬಳಕೆ ಮಾಡುತ್ತೇವೆ. ಇಂತಹ ಸಾಹಸಗಳಿಗೆ ಕೈ ಹಾಕಿ ನಮ್ಮ ತ್ವಚೆ ಹಾಳು ಮಾಡಿಕೊಳ್ಳುವ ಬದಲು ಕಡಲೆ ಹಿಟ್ಟು ಬಳಕೆ ಮಾಡುವುದು ಸೂಕ್ತ. ಕಡಲೆ ಹಿಟ್ಟು ಹಲವು ವಿಧದಲ್ಲಿ ತ್ವಚೆಗೆ ಉಪಯೋಗಕಾರಿಯಾಗಿದೆ.

ರಾಸಾಯನಿಕಗಳ ಪ್ರಭಾವದಿಂದ ಮುಖ ಸ್ವಚ್ಛವಾದಂತೆ ಅನ್ನಿಸಿದರೂ ಇದು ಪರಿಪೂರ್ಣ ಸುರಕ್ಷಿತ ಎನ್ನುವಂತಿಲ್ಲ. ಏಕೆಂದರೆ ಚರ್ಮಕ್ಕೆ ಅತಿ ಚಿಕ್ಕ ಪ್ರಮಾಣದಲ್ಲಿಯಾದರೂ ಒಂದಾದರೂ ಅಡ್ಡ ಪರಿಣಾಮ ಇದ್ದೇ ಇರುತ್ತದೆ. ಇದರ ಬದಲಿಗೆ ಸಂಪೂರ್ಣವಾಗಿ ಸುರಕ್ಷಿತವಾದ, ಸುಲಭವಾಗಿ ಲಭ್ಯವಿರುವ ಕಡಲೆ ಹಿಟ್ಟನ್ನು ಮುಖದ ಚರ್ಮದ ಆರೈಕೆಗೆ ಬಳಸಿದರೆ ರಾಸಾಯನಿಕಗಳಿಗಿಂತ ಉತ್ತಮ ಪರಿಣಾಮವನ್ನೂ ಪಡೆಯಬಹುದು ಹಾಗೂ ರಾಸಾಯನಿಕಗಳಿಂದ ಉಂಟಾಗಬಹುದಾಗಿದ್ದ ಅಲರ್ಜಿ, ತುರಿಕೆ, ಉರಿಗಳಿಂದ ತಪ್ಪಿಸಿಕೊಳ್ಳಲೂಬಹುದು.

ಹದಿಹರೆಯಕ್ಕೆ ಕಾಲಿಟ್ಟಾಗ ಮೊಡವೆ ಸಮಸ್ಯೆಗಳು ಕಾಡುವುದು ಸಾಮಾನ್ಯ. ಆದರೆ ಇದಕ್ಕೆಲ್ಲಾ ದುಬಾರಿ ಹಣ ಖರ್ಚು ಮಾಡಿ ಕ್ರೀಮ್ ತೆಗೆದುಕೊಳ್ಳುವ ಬದಲು, 2 ಟೀಸ್ಪೂನ್ ಕಡಲೆ ಹಿಟ್ಟು, 2 ಟೀಸ್ಪೂನ್ ಶ್ರೀಗಂಧದ ಪುಡಿ ಹಾಗೂ ಒಂದೆರಡು ಟೇಬಲ್ ಚಮಚದಷ ಹಾಲು, ಜೊತಗೆ ಚಿಟಿಕೆಯಷ್ಟು ಅರಿಶಿನ ಪುಡಿ, ಇವೆಲ್ಲಾವನ ಚೆನ್ನಾಗಿ ಮಿಶ್ರಣ ಮಾಡಿ, ನಯವಾದ ಪೇಸ್ಟ್ ರೀತಿ ಮಾಡಿ ಮುಖದ ಮೇಲಿನ ಮೊಡವೆಗಳ ಮೇಲೆ ನಯವಾಗಿ ಹಚ್ಚಿ, ನಂತರ ಸುಮಾರು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ, ಇದು ಸರಿಯಾಗಿ ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ನಾಲ್ಕರಿಂದ ಐದು ಬಾದಾಮಿ ಬೀಜಗಳನ್ನು ಪುಡಿಮಾಡಿಕೊಳ್ಳಿ. ಜೊತೆಗೆ ಒಂದು ಟೀ ಚಮಚ ಹಾಲು, ಸ್ವಲ್ಪ ನಿಂಬೆ ಹಣ್ಣಿನ ರಸ ಮತ್ತು ಕಡಲೆಹಿಟ್ಟನ್ನು ಹಾಕಿ ಮಿಶ್ರಣ ಮಾಡಿ., ನಯವಾದ ಪೇಸ್ಟ್ ರೀತಿ ಮಾಡಿಕೊಂಡು ಮುಖಕ್ಕೆ, ಹಾಗೂ ಕುತ್ತಿಗೆಯ ಭಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. ಸುಮಾರು 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅದರಲ್ಲೂ ಈ ಫೇಸ್ ಪ್ಯಾಕ್‌ನ್ನು ತ್ವಚೆಯ ಮೇಲೆ ಹಾಗೆ ಬಿಡುವುದರಿಂದ ಅತ್ಯಂತ ಪರಿಣಾಮಕಾರಿಯಾದ ಫಲಿತಾಂಶಗಳು ಸಿಗುತ್ತದೆ.

ನಮ್ಮ ಚರ್ಮದ ಮೇಲೆ ಕಂಡುಬರುವ ಸತ್ತ ಜೀವಕೋಶಗಳನ್ನು  ಕಡಲೆಹಿಟ್ಟು  ನಿವಾರಣೆ ಮಾಡಿ ಚರ್ಮದ ತಾಜಾತನವನ್ನು ಕಾಪಾಡುತ್ತದೆ. ನಿಯಮಿತವಾಗಿ ಕಡಲೆಹಿಟ್ಟನ್ನು ತ್ವಚೆಯ ಮೇಲೆ ಬಳಕೆ ಮಾಡುವುದರಿಂದ ತ್ವಚೆಯ ಭಾಗ ಮೃದುವಾಗಿ, ಸದೃಢವಾಗಿ ಕಾಣುತ್ತದೆ. ನೋಡಲು ಕಪ್ಪು ಕಾಣುವವರು ತಮ್ಮ ಚರ್ಮವನ್ನು ಬೆಳ್ಳಗಾಗಿಸಿಕೊಳ್ಳಲು ಮತ್ತು ಬೇಡದ ಭಾಗಗಳಲ್ಲಿ ಕೂದಲನ್ನು ನಿವಾರಣೆ ಮಾಡಿಕೊಳ್ಳಲು ಕಡಲೆಹಿಟ್ಟನ್ನು ಬಳಕೆ ಮಾಡಬಹುದು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು