Categories: ಅಂಕಣ

ಆಹಾರಪದ್ಧತಿಯನ್ನು ಬದಲಾಯಿಸಿ ಕಿಡ್ನಿಸ್ಟೋನ್ ನಿಂದ ದೂರವಿರಿ

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹಾಗೂ ವಯಸ್ಕರಲ್ಲಿ ಎದುರಾಗುತ್ತಿರುವ ಸಮಸ್ಯೆಯೆಂದರೆ ಕಿಡ್ನಿ ಸ್ಟೋನ್. ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ. ಬದಲಾದ ಆಹಾರ ಪದ್ಧತಿ, ಅನುವಂಶಿಕವಾಗಿ ಈ ಸಮಸ್ಯೆಯು ಎದುರಾಗುತ್ತದೆ. ಕಿಬ್ಬೊಟ್ಟೆಯಲ್ಲಿ ಇಲ್ಲವೇ ಕಿಡ್ನಿ ಸುತ್ತಮುತ್ತ ವಿಪರೀತ ನೋವು ಕಾಣಿಸಿಕೊಳ್ಳುವುದು, ವಾಂತಿ ಬರುವಂತಾಗುವುದು, ಹಾಗೆ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅದೇ ರೀತಿ ಪದೇಪದೇ ಮೂತ್ರ ವಿಸರ್ಜನೆ ಮಾಡುವ ಸಮಸ್ಯೆ ಎದುರಾಗುತ್ತದೆ. ಇವುಗಳು ಕಿಡ್ನಿ ಸ್ಟೋನ್ ಗುಣಲಕ್ಷಣಗಳಾಗಿವೆ.ಬದಲಾದ ಆಹಾರ ಪದ್ಧತಿ ನಮ್ಮ ಆಹಾರದಲ್ಲಿರುವ ಸೋಡಿಯಂ ಲವಣಾಂಶ ಗಳೆಲ್ಲವೂ ಮೂತ್ರಪಿಂಡದಲ್ಲಿ ಕಲ್ಲನ್ನು ಸೃಷ್ಟಿಮಾಡುತ್ತದೆ ಕಾಕುಂಜೆ ಆಯುರ್ವೇದ ವೆಲ್ ನೆಸ್ ಕ್ಲಿನಿಕ್ ನ ವೈದ್ಯ ಡಾ. ಅನುರಾಧ ಅವರು ಹೇಳಿದ್ದಾರೆ.

ಮೂತ್ರದಲ್ಲಿ ನೀರಿನ ಅಂಶಕ್ಕಿಂತ ಅಧಿಕ ಸೋಡಿಯಂನ ಕ್ಯಾಲ್ಸಿಯಂನ ಅಂಶ ಅಧಿಕವಾದಾಗ ಅವುಗಳೆಲ್ಲ ಕಿಡ್ನಿಯಲ್ಲಿ ಅಂಟಿಕೊಂಡು ಕಲ್ಲಾಗಿ ಪರಿವರ್ತನೆಗೊಳ್ಳುತ್ತದೆ. ನೀರಿನಂಶ ಕಿಂತ ಅಧಿಕವಾಗಿ ಮಿನರಲ್ಸ್ ಗಳು ಮೂತ್ರದಲ್ಲಿ ತುಂಬಿದಾಗ ಕಿಡ್ನಿ ಸ್ಟೋನ್ ಬರುತ್ತವೆ.

ಸಾಮಾನ್ಯವಾಗಿ ಅನುವಂಶಿಕವಾಗಿ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ತಮ್ಮ ಕುಟುಂಬದಲ್ಲಿ ಯಾರಿಗಾದರೂ ಕಿಡ್ನಿ ಸ್ಟೋನ್ ಇದ್ದರೆ ಅಲ್ಲಿ ಅನುವಂಶಿಕವಾಗಿ ಕಿಡ್ನಿ ಸ್ಟೋನ್ ಕಾಣಿಸಿಕೊಳ್ಳುವ ಸಾಧ್ಯತೆ ಇವೆ. ಇಂತಹ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಆದಷ್ಟು ತಮ್ಮ ಆಹಾರ ಪದಾರ್ಥಗಳಲ್ಲಿ ಪತ್ಯೆ ಮಾಡುವ ಅವಶ್ಯಕತೆ ಇರುತ್ತದೆ.

ಕಿಡ್ನಿ ಸ್ಟೋನ್ ಗಳಲ್ಲಿ ಬೇರೆ ಬೇರೆ ರೀತಿಯ ಸ್ಟೋನ್ ಗಳಿವೆ. ಚಿಕಿತ್ಸೆ ಪಡೆಯುವ ಮೊದಲು ಅದು ಯಾವ ರೀತಿಯ ಸ್ಟೋನ್ ಎಂದು ತಿಳಿದುಕೊಳ್ಳುವುದು ಅತ್ಯಗತ್ಯ. ಉದಾಹರಣೆಗೆ ಕ್ಯಾಲ್ಸಿಯಂ ಸ್ಟೋ‌ನ್ ,ಯೂರಿಕ್ ಆಸಿಡ್ ಸ್ಟೋನ್ ಗಳಂತಹ ಇತರ ಕಿಡ್ನಿ ಸ್ಟೋನ್ ಗಳಿವೆ.

ಯಾವ ರೀತಿಯ ಕಿಡ್ನಿಸ್ಟೋನ್ ಎಂಬುದನ್ನು ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ನಮ್ಮ ಆಹಾರ ಪದ್ಧತಿಗಳನ್ನು ಬದಲಾಯಿಸಿಕೊಳ್ಳಬೇಕು.
ಜನರಲ್ಲಿ ಒಂದು ನಂಬಿಕೆಯಿದೆ ಕಿಡ್ನಿ ಸ್ಟೋನ್ ಇರುವವರು ನೀರನ್ನು ಧಾರಾಳವಾಗಿ ಕುಡಿಯಬೇಕು ಎಂಬುವುದು. ವಾಸ್ತವದಲ್ಲಿ ಇದು ತಪ್ಪು ಕಲ್ಪನೆ. ನಮ್ಮ ದೇಹಕ್ಕೆ ಅನುಗುಣವಾಗಿ ಅದೇ ರೀತಿ ವಿಪರೀತ ನೀರು ಕುಡಿದರೆ ಇನ್ನೊಂದು ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇವೆ ಎನ್ನುತ್ತಾರೆ ಡಾ. ಅನುರಾಧ.

ದೇಹದಲ್ಲಿ ಕ್ಯಾಲ್ಸಿಯಂನ ಮಟ್ಟ ಹೆಚ್ಚಾಗಲು ಕ್ಯಾಲ್ಸಿಯಂ ಡ್ರಿಂಕ್ಸ್ ಗಳನ್ನು ಸಾಮಾನ್ಯವಾಗಿ ನಾವು ಬಳಸುವುದನ್ನು ಕಾಣುತ್ತೇವೆ ಉದಾಹರಣೆಗೆ ಕ್ಯಾಲ್ಸಿಯಂ ಡಿ, ವಿಟಮಿನ್ ಸಿ, ಹೆಚ್ಚಾಗಲು ವೈದ್ಯರ ಸಲಹೆ ಇಲ್ಲದೆ ವರ್ಷಾನುಗಟ್ಟಲೆ ಔಷಧಿಗಳನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಆಕ್ಸಲೇಟ್ ಎನ್ನುವ ಕಿಡ್ನಿ ಸ್ಟೋನ್ ಬರುವ ಸಾಧ್ಯತೆ ಇರುತ್ತದೆ.

ಹೈ ಪ್ರೋಟೀನ್ ಆಹಾರಗಳಾದ ಮಾಂಸಾಹಾರ ಮೊಟ್ಟೆ, ಪನ್ನೀರ್ ಹಾಗೂ ಇತರ ಆಹಾರಗಳನ್ನು ವಿಪರೀತ ಸೇವಿಸುವುದರಿಂದ ಕಿಡ್ನಿ ಸ್ಟೋನ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ದೇಹದಲ್ಲಿ ನೀರಿನ ಮಟ್ಟ ಏನೂ ಇಲ್ಲದಿದ್ದರೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು ಆದ್ದರಿಂದ ನಮ್ಮ ದೇಹಕ್ಕೆ ಎಷ್ಟು ನೀರು ಬೇಕು ಎನ್ನುವುದನ್ನು ತಿಳಿದುಕೊಂಡು ನೀರನ್ನು ಕುಡಿಯಬೇಕು

PHOTO CREDIT : pixbay

Swathi MG

Recent Posts

ನಿರ್ಮಾಪಕ ನನಗೆ ಬೆದರಿಕೆ ಹಾಕುತ್ತಿದ್ದಾರೆ : ʻಹೆಡ್‌ಬುಷ್‌́ ನಟಿ ಗಂಭೀರ ಆರೋಪ

ಪಂಜಾಬಿ ಬ್ಯೂಟಿ ಪಾಯಲ್‌ ರಜಪೂತ್‌ ಅವರು ನಿರ್ಮಾಪಕರ ವಿರುದ್ಧ ಹೆಡ್‌ಬುಷ್‌ ನಟಿ ಬೆದರಿಕೆ ಹಾಕುತ್ತಿದ್ದಾರೆಂದು ಹೆಡ್‌ಬುಷ್‌ ನಟಿ ಆರೋಪಿಸುತ್ತಿದ್ದಾರೆ. RX…

2 hours ago

ಟಿಪ್ಪರ್- ಬೈಕ್ ನಡುವೆ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ…

2 hours ago

ಮುದ್ದಾದ ಮಗುವಿನ ತಾಯಿಯಾದ ಯಾಮಿ ಗೌತಮ್; ಕಂದನಿಗೆ ಇಟ್ಟ ಹೆಸರೇನು ಗೊತ್ತಾ?

ಸ್ಯಾಂಡಲ್​ವುಡ್​ ನಟ ಗಣೇಶ್​​ ಅಭಿನಯದ ಉಲ್ಲಾಸ ಉತ್ಸಾಹ ನಟಿ ಯಾಮಿ ಗೌತಮ್​​ ಅವರು ಮೇ 10 ರಂದು ಗಂಡು ಮಗುವಿಗೆ…

2 hours ago

ಇರಾನ್​​ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮ್ಮದ್ ಮೊಖ್ಬರ್

ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿದ್ದಾರೆ. ಹೀಗಾಗಿ ಇದೀಗ ಇಬ್ರಾಹಿಂ ರೈಸಿ ಸಾವಿನ ನಂತರ…

3 hours ago

ವಾಯುಭಾರ ಕುಸಿತ: ದ.ಕನ್ನಡಕ್ಕೆ ಎರಡು ದಿನ ಆರೆಂಜ್ ಅಲರ್ಟ್ ಘೋಷಣೆ

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಮುದ್ರ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಮುದ್ರಕ್ಕಿಳಿಯದಂತೆ ಮಂಗಳೂರಿನ ಮೀನುಗಾರರಿಗೆ…

3 hours ago

ಸುರಿಯುವ ಮಳೆಯಲ್ಲೇ ದೈವ ನರ್ತನ; ಗಮನ ಸೆಳೆದ ರವಿ ಪಡ್ಡಮ್ ಅವರ ಗಗ್ಗರಸೇವೆ

ಸುರಿಯುವ ಮಳೆಯನ್ನು ಲೆಕ್ಕಿಸದೆ ದೈವಾರಾಧನೆಯ ಶ್ರದ್ಧೆ ವ್ಯಕ್ತಪಡಿಸಿರುವ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ ಬಬ್ಬು…

3 hours ago