News Karnataka Kannada
Tuesday, April 23 2024
Cricket
ಕಲಬುರಗಿ

ಸಮುದ್ರದಲ್ಲಿ ಶ್ರೀಕೃಷ್ಣನಿಗೆ ಮೋದಿ ನವಿಲು ಗರಿ ಅರ್ಪಣೆ: ಖರ್ಗೆ ವ್ಯಂಗ್ಯ

Kharge
Photo Credit : News Kannada

ಕಲಬುರಗಿ: ಪ್ರಧಾನಿ ಮೋದಿ ಅವರು ದ್ವಾರಕಾಕ್ಕೆ ತೆರಳಿ ನವಿಲು ಗರಿ ಸಮರ್ಪಿಸುವು ಮೂಲಕ ಶ್ರೀಕೃಷ್ಣನಿಗೆ ವಿಶೇಷ ಪಾರ್ಥನೆ ಸಲ್ಲಿದ್ದು, ಇದೀಗ ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಮಾತನಾಡಿರುವ ಖರ್ಗೆ, “ನವಿಲುಗರಿ ಅಲ್ಲಿ ಹಾಕಿದರೆ ಬೆಳೆಯುತ್ತೋ ಇಲ್ಲವೋ ಗೊತ್ತಿಲ್ಲ. ನಿಸರ್ಗದ ನಿಯಮದ ಪ್ರಕಾರ ನವಿಲುಗರಿ ಬೆಳೆಯುತ್ತಾ ಗೊತ್ತಿಲ್ಲ. ನಾನು ನಂಬಿರುವ ನಿಸರ್ಗದ ನಿಯಮದ ಪ್ರಕಾರ ನಡೆಯಬೇಕು. ನಿಸರ್ಗದ ವಿರುದ್ಧ ಹೋದವರಿಗೆ ಯಶಸ್ಸು ಸಿಗಲ್ಲ. ಇದು ಬುದ್ಧನ ತತ್ವ” ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಭೇಟಿಯ ಎರಡನೇ ದಿನದ ಈ ಸಮಯದಲ್ಲಿ, ಸ್ಕೂಬಾ ಡೈವಿಂಗ್ ಮುಖಾಂತರ ಆಳವಾದ ಸಮುದ್ರಕ್ಕಿಳಿದು ಮುಳುಗಡೆಯಾಗಿದ್ದ ಪ್ರಾಚೀನಾ ದ್ವಾರಕೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಳಿಕ ಈ ಕುರಿತು ಟ್ವೀಟ್ ಮಾಡಿರುವ ಮೋದಿ, ನೀರಿನಲ್ಲಿ ಮುಳುಗಿ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡುವುದು ನನಗೆ ಒಲಿದ ಅತ್ಯಂತ ದಿವ್ಯ ಹಾಗೂ ಸುಂದರ ಅನುಭವವಾಗಿತ್ತು ಎಂದಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು