News Karnataka Kannada
Sunday, May 05 2024
ಸಮುದಾಯ

ಕುಂದಾಪುರ: ತತ್ವಜ್ಞಾನಿಗಳಲ್ಲಿ ಶ್ರೇಷ್ಠರು ಶಂಕರಾಚಾರ್ಯರು – ವೇ.ಮೂ ವಿದ್ವಾನ್ ಮಹೇಶ್ ಹೆಗಡೆ

Shankaracharya was one of the greatest philosophers- V.M. Vidwan Mahesh Hegde
Photo Credit : News Kannada

ಕುಂದಾಪುರ: ಶ್ರೀ ಕುಂದೇಶ್ವರ ದೇವಸ್ಥಾನ ಕುಂದಾಪುರ ಮತ್ತು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಕುಂದಾಪುರ ವಲಯದ ಸಹಭಾಗಿತ್ವದಲ್ಲಿ, ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶಂಕರಾಚಾರ್ಯ  ಭಾರತೀ ತೀರ್ಥ ಮಹಾಸ್ವಾಮಿಗಳು ಮತ್ತು ತತ್ಕರಕಮಲ ಸಂಜಾತರಾದ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ ಪೂರ್ಣಾನುಗ್ರಹದೊಂದಿಗೆ ಶಂಕರ ಜಯಂತಿ ಕಾರ್ಯಕ್ರಮ ಕುಂದೇಶ್ವರ ದೇವಸ್ಥಾನದಲ್ಲಿ ನಡೆಯಿತು.

ವಿದ್ವಾನ್ ಮಹೇಶ ಹೆಗಡೆ ದಾಂಡೇಲಿ ಗುಂದ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಂಕರಭಗವತ್ಪಾದರು ತಮ್ಮ ಜೀವನಲ್ಲಿ ವೇದಶಾಸ್ತ್ರ ಗಳು, ಹಿಂದೂ ಧರ್ಮದ ಪ್ರಾಮುಖ್ಯತೆ ,ಮೋಕ್ಷದ ಅದ್ವೈತದ ಮಹತ್ವ ,ಹಾಗೂ ನಮ್ಮ ದಿನನಿತ್ಯದ ಎಲ್ಲಾ ಧರ್ಮಕರ್ಮಗಳನ್ನು ಹೇಗೆ ಪಾಲಿಸಲಾಗುವುದು ಎನ್ನುವುದರ ಬಗ್ಗೆ ಸಮಾಜಕ್ಕೆ ಸೂಕ್ತವಾದ ರೀತಿಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ, ಶಂಕರಾಚಾರ್ಯರು ತತ್ವಜ್ಞಾನಿಗಳಲ್ಲಿ ಶ್ರೇಷ್ಠರಾಗಿ ಆದರ್ಶಪ್ರಾಯರಾಗಿದ್ದಾರೆ ಎಂದರು.

ಶ್ರೀ ವೇ.ಮೂ. ಲೋಕೇಶ ಅಡಿಗ ನಾಗಪಾತ್ರಿಗಳು ಮತ್ತು ಪ್ರಾಂತೀಯ ಧರ್ಮಾಧಿಕಾರಿಗಳು ಶಾರದಾಪೀಠಂ ಶೃಂಗೇರಿ  ಮಾತನಾಡಿ ಶಂಕರರ ಕೃತಿಯನ್ನು ಪಾರಾಯಣ ಮಾಡುದರ ಮುಖಾಂತರ ಜ್ಞಾನ ಮತ್ತು ಗುರು ಭಕ್ತಿ ಯನ್ನು ಸಾಬೀತುಪಡಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕೃಷ್ಣಾನಂದ ಛಾತ್ರ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಶ್ರೀ ಕುಂದೇಶ್ವರ ದೇವಸ್ಥಾನ ಕುಂದಾಪುರ.ಜಯಾನಂದ ಖಾರ್ವಿ, ಅಧ್ಯಕ್ಷರು ಶ್ರೀ ಮಹಾಕಾಳಿ ದೇವಸ್ಥಾನ ಖಾರ್ವಿಕೇರಿ ಕುಂದಾಪುರ, ಡಿ.ಕೆ ಪ್ರಭಾಕರ್ ಅಧ್ಯಕ್ಷರು  ಸೀತಾರಾಮಚಂದ್ರ ದೇವಸ್ಥಾನ ಕುಂದಾಪುರ, ಜಿ.ಎಸ್‌ ಭಟ್ಟರು ಅಧ್ಯಕ್ಷರು ದ್ರಾವಿಡ ಬ್ರಾಹ್ಮಣ ಪರಿಷತ್‌ ಕುಂದಾಪುರ, ಮತ್ತಿತರರು ಉಪಸ್ಥಿತರಿದ್ದರು. ಅವನೀಶ್ ಹೊಳ್ಳ ಸ್ವಾಗತಿಸಿ, ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು