News Karnataka Kannada
Sunday, May 19 2024
ಇತರೆ

ಬಂಡೆ ಮೇಲೆ ಜೊತೆಯಾಗಿ ಫೋಸ್ ಕೊಟ್ಟ ಬ್ಲ್ಯಾಕ್ ಪ್ಯಾಂಥರ್ ಹಾಗು ಚಿರತೆ

Photo Credit : Twitter

ಇಲ್ಲೊಂದು ಕಡೆ ಸಾಮಾನ್ಯ ಚಿರತೆ ಹಾಗೂ ಬ್ಲ್ಯಾಕ್ ಪ್ಯಾಂಥರ್ ಬಂಡೆಯೊಂದರ ಮೇಲೆ ಜೊತೆಯಾಗಿ ಕುಳಿತಿರುವ ದೃಶ್ಯವೊಂದು ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿದೆ. ಈ ಫೋಟೋ ಈಗ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮೂಲತಃ ನೇಚರ್ ಇನ್ ಫೋಕಸ್ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ಫೋಟೋ ಪೋಸ್ಟ್ ಆಗಿದೆ. ಈ ಭಾರತೀಯ ಚಿರತೆ ಹಾಗೂ ಬ್ಲ್ಯಾಕ್ ಪ್ಯಾಂಥರ್ ಎರಡೂ ಬೇರೆ ಬೇರೆ ತಳಿಯ ಪ್ರಾಣಿಗಳು ಎಂಬ ಕೆಲವರ ವಾದದ ಮಧ್ಯೆ ಒಂದೇ ತಾಯಿಯ ಮೂರು ಮಕ್ಕಳು ಇವರು ಎಂದು ಬರೆದು ಈ ಫೋಟೋವನ್ನು ಪೋಸ್ಟ್ ಮಾಡಲಾಗಿದೆ.

ಈ ಫೋಟೋವನ್ನು ಖ್ಯಾತ ಫೋಟೋಗ್ರಾಫರ್ ಕೃಷ್ಣಮೂರ್ತಿ ಎಸ್‌ ಎಂಬುವವರು ತೆಗೆದಿದ್ದು, ಈ ಫೋಟೋ ನೇಚರ್ ಇನ್‌ಫೋಕಸ್ ಫೋಟೋಗ್ರಫಿ ಪ್ರಶಸ್ತಿ 2023 ರಲ್ಲಿ ವನ್ಯಜೀವಿಗಳ ಪ್ರದೇಶ ಹಾಗೂ ಅವಾಸಸ್ಥಾನದಲ್ಲಿ ಪ್ರಾಣಿಗಳು ವಿಭಾಗದಲ್ಲಿ ಫೈನಲ್‌ಗೆ ಬಂದಿತ್ತು.

ಈ ಚಿತ್ರವು ಚಿರತೆಗಳು ಮತ್ತು ಕಪ್ಪು ಪ್ಯಾಂಥರ್‌ಗಳು ಎರಡು ಪ್ರತ್ಯೇಕ ಜಾತಿಗಳು ಎಂಬ ಸಾಮಾನ್ಯ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದೆ. ಇದು ಕಪ್ಪು ಪ್ಯಾಂಥರ್ ಎಂಬುದು ಕಪ್ಪು ಬಣ್ಣದೊಂದಿಗೆ ಜನಿಸಿದ ಜಾಗ್ವಾರ್‌ಗಳು ಅಥವಾ ಚಿರತೆಗಳಿಗೆ ನೀಡಲಾದ ಹೆಸರಷ್ಟೇ ಹೊರತು ಇವು ಪ್ರತ್ಯೇಕ ಪ್ರಬೇಧಗಳಲ್ಲ ಎಂಬುದು ಇದರಿಂದ ಸಾಬೀತಾಗಿದೆ.

ಈ ವಿಚಾರವನ್ನು ಐಎಫ್‌ಎಸ್ ಅಧಿಕಾರಿ ಪರ್ವಿನ್ ಕಸ್ವಾನ್ ಅವರು ಕೂಡ ಖಚಿತಪಡಿಸಿದ್ದು, ಅವುಗಳು ಬೇರೆ ಬೇರೆ ಜಾತಿಯವಲ್ಲ, ಅವೆರಡು ಒಂದೇ ಎಂಬುದನ್ನು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 3 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು