News Karnataka Kannada
Monday, April 29 2024
ಫೋಟೊ ನ್ಯೂಸ್

ಬೆಂಗಳೂರು: ಬಾಂಧವ ಸೇವಾ ಸಂಸ್ಥೆ ವತಿಯಿಂದ 5000 ಪರಿಸರಸ್ನೇಹಿ ಮಣ್ಣಿನ ಗೌರಿ-ಗಣೇಶ ಮೂರ್ತಿಗಳ ವಿತರಣೆ

Bandhava Seva Sanstha distributes 5,000 eco-friendly clay Gauri-Ganesha idols
Photo Credit : G Mohan
ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಬಾಂಧವ ಸೇವಾ ಸಂಸ್ಥೆ ವತಿಯಿಂದ ದುರ್ಗ ಪರಮೇಶ್ವರಿ ಆಟದ ಮೈದಾನ,ಜೆ.ಪಿ.ನಗರದಲ್ಲಿ  ಸಾರ್ವಜನಿಕರಿಗೆ ಉಚಿತವಾಗಿ ಕೆರೆ ಜೇಡಿ ಮಣ್ಣಿನ  ಗೌರಿ-ಗಣೇಶ ಮೂರ್ತಿಗಳ ವಿತರಣೆಯನ್ನು ಶಾಸಕರಾದ ಶ್ರೀಮತಿ ಸೌಮ್ಯ ರೆಡ್ಡಿ,ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ನಾಗರಾಜುರವರು  ವಿತರಿಸಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಶ್ರೀಮತಿ ಸೌಮ್ಯ ರೆಡ್ಡಿರವರು ಮಾತನಾಡಿ ಪ್ರಕೃತಿ ಮನುಷ್ಯ ಬೇಕಾದ ಆಹಾರ,ನೀರು ಮತ್ತು ಉಸಿರಾಡಲು ಉತ್ತಮ ಗಾಳಿ ನಮಗೆ ನೀಡಿದೆ. ಅದರೆ ಮನುಷ್ಯ ದುರಾಸೆ ಮತ್ತು ಅಭಿವೃದ್ದಿ ಹೆಸರಿನಲ್ಲಿ ಗಿಡಮರಗಳನ್ನು ಕಡಿದು ಮತ್ತು ಪ್ರಕೃತಿ ವೈಪರೀತ್ಯದಿಂದ ಮಳೆ ಸಹ ಅಕಾಲಕ್ಕೆ ಆಗುತ್ತಿದೆ. ಬೇಳೆಗಳಿಗೆ ರಾಸಯನಿಕ ಸಿಂಪಡನೆ ನಾನ ಕಾರಣದಿಂದ ನೀರು ಮತ್ತು ವಾತವರಣ ಕಲುಷಿತವಾಗಿದೆ.
ಪ್ರತಿಯೊಬ್ಬ ನಾಗರಿಕರು ಪರಿಸರ ಉಳಿಸಲು,ರಕ್ಷಣೆ ಮಾಡಲು ಪಣ ತೊಡಬೇಕು ಈ ನಿಟ್ಟಿನಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗೌರಿ,ಗಣೇಶ ಮೂರ್ತಿಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಮಣ್ಣಿನ ಮೂರ್ತಿಗಳು ನೀರಿನಲ್ಲಿ ಸುಲಭವಾಗಿ ಕರಗುತ್ತದೆ,ಪರಿಸರವು ಉಳಿಯುತ್ತದೆ ಎಂದು ಹೇಳಿದರು.
ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ನಾಗರಾಜುರವರು ಮಾತನಾಡಿ ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿರವರ ನೇತೃತ್ವದಲ್ಲಿ ಮತ್ತು ಶಾಸಕರಾದ ಶ್ರೀಮತಿ ಸೌಮ್ಯರೆಡ್ಡಿರವರ ಮಾರ್ಗದರ್ಶನದಲ್ಲಿ ಬಾಂಧವ ಸಂಸ್ಥೆಯ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಪರಿಸರ ಸ್ನೇಹಿ ಮಣ್ಣಿನ 5000ಗೌರಿ ಗಣೇಶಮೂರ್ತಿಗಳನ್ನು ವಿತರಿಸಲಾಗುತ್ತಿದೆ.
ಬಾಂಧವ ಸಂಸ್ಥೆ ಕಳೆದ 10ವರ್ಷಗಳಿಂದ ಪರಿಸರ ,ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕರು ಪರಿಸರ ರಕ್ಷಣೆಗೆ ಸಹಕಾರ ನೀಡಬೇಕು ಎಂದು ಹೇಳಿದರು.
photo credit: G Mohan
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
31125

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು