News Karnataka Kannada
Thursday, May 09 2024
ಉದ್ಯೋಗ

2250 ಕಾನ್ಸ್ ಟೇಬಲ್, ಎಸ್‌ಐ ಹುದ್ದೆಗಳಿಗೆ ನೇಮಕಾತಿ

New Project 2024 01 03t143226.395
Photo Credit : News Kannada

ನವದೆಹಲಿ : ರೈಲ್ವೆ ನೇಮಕಾತಿ ಮಂಡಳಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಅಡಿಯಲ್ಲಿ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ (ಎಸ್‌ಐ) ಹುದ್ದೆಗಳಿಗೆ ಆಹ್ವಾನಿಸಲಾಗಿದೆ.  ಆಸಕ್ತ ಅಭ್ಯರ್ಥಿಗಳು ಆರ್ಪಿಎಫ್ ಎಸ್‌ಐ, ಕಾನ್ಸ್ಟೇಬಲ್ ನೇಮಕಾತಿ 2024 ಗೆ ಆನ್ ಲೈನ್ ನಲ್ಲಿ rpf.indianrailways.gov.in ಅಧಿಕೃತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.

ಆರ್ಪಿಎಫ್ ನೇಮಕಾತಿ 2024 ಒಟ್ಟು 2250 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ 2000 ಕಾನ್ಸ್ಟೇಬಲ್ ಮತ್ತು 250 ಎಸ್‌ಐ ಹುದೆಗಳಿವೆ.

ಅರ್ಜಿಯ ದಿನಾಂಕಗಳೊಂದಿಗೆ ವಿವರವಾದ ಅಧಿಸೂಚನೆಯನ್ನು ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡಲಾಗುವುದು. ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಗಳ ನಂತರ ದಾಖಲೆ ಪರಿಶೀಲನೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಶೇ.10 ಮತ್ತು ಶೇ.15ರಷ್ಟು ಹುದ್ದೆಗಳನ್ನು ಕ್ರಮವಾಗಿ ಮಾಜಿ ಸೈನಿಕರು ಮತ್ತು ಮಹಿಳೆಯರಿಗೆ ಮೀಸಲಿಡಲಾಗಿದೆ.

RPF ಕಾನ್ಸ್ಟೇಬಲ್ : ಹುದ್ದೆಗಳು 2000

RPF ಎಸ್‌ಐ : ಹುದ್ದೆಗಳು 250

ನೋಂದಣಿ ದಿನಾಂಕ : ಶೀಘ್ರದಲ್ಲೇ ಪ್ರಕಟ

ಅಪ್ಲಿಕೇಶನ್ ಮೋಡ್ : ಆನ್ ಲೈನ್

ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್ : rpf.indianrailways.gov.in.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು