News Karnataka Kannada
Sunday, May 05 2024
ವಿಶೇಷ

ಅಕ್ಟೋಬರ್ 10: ಇಂದು ವಿಶ್ವ ಮಾನಸಿಕ ಆರೋಗ್ಯ ದಿನ

Mental Healthday
Photo Credit : Twitter

ಇಂದು, ವಿಶ್ವ ಮಾನಸಿಕ ಆರೋಗ್ಯ ದಿನ. ಅಕ್ಟೋಬರ್ 10ರಂದು ಪ್ರತಿ ವರ್ಷ ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಮನುಷ್ಯನಿಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಸ್ವಾಸ್ಥ್ಯವೂ ಬಹಳ ಮುಖ್ಯ. ಆದರೆ ಆಶ್ಚರ್ಯ ಎಂದರೆ ಜನ ದೇಹದ ಆರೋಗ್ಯದ ಬಗ್ಗೆ ಕಾಳಜಿ ಮಾಡಿದಷ್ಟು ಮಾನಸಿಕ ಆರೋಗ್ಯದ ಬಗ್ಗೆ ಲಕ್ಷ್ಯ ಕೊಡುವುದಿಲ್ಲ. ಈ ಮನೋಭಾವನೆಯನ್ನು ಹೋಗಲಾಡಿಸಲು, ಮೆಂಟಲ್‌ ಹೆಲ್ತ್‌ ಬಗ್ಗೆ ಅರಿವು ಮೂಡಿಸಲೆಂದೆ ವರ್ಲ್ಡ್ ಮೆಂಟಲ್ ಹೆಲ್ತ್ ಡೇ ಅನ್ನು ಆಚರಿಸಲಾಗುತ್ತದೆ. ಬದಲಾಗುತ್ತಿರುವ ಇತ್ತೀಚಿನ ವಿದ್ಯಮಾನಗಳಲ್ಲಿ ಮಾನಸಿಕ ಅಸ್ವಸ್ಥ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನಲಾಗುತ್ತಿದೆ.

ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಮೊದಲ ಬಾರಿಗೆ ಅಕ್ಟೋಬರ್ 10, 1992 ರಂದು ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್‌ನ ವಾರ್ಷಿಕ ಚಟುವಟಿಕೆಯಾಗಿ ಆಚರಿಸಲಾಯಿತು. ಈ ದಿನವು ಆರಂಭದಲ್ಲಿ ಯಾವುದೇ ರೀತಿಯ ನಿರ್ದಿಷ್ಟ ಥೀಮ್ ಹೊಂದಿರಲಿಲ್ಲ ಮತ್ತು ಅದರ ಗುರಿ ಮಾನಸಿಕ ಆರೋಗ್ಯ ಸಮರ್ಥನೆ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದಾಗಿತ್ತು. ಈ ದಿನದ ಅಭಿಯಾನದ ಜನಪ್ರಿಯತೆಯನ್ನು ನೋಡಿ, 1994ರಲ್ಲಿ ಮೊದಲ ಬಾರಿಗೆ ದಿನದ ಥೀಮ್ “ವಿಶ್ವದಾದ್ಯಂತ ಮಾನಸಿಕ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಸುಧಾರಿಸುವುದು.”ಎಂಬುವುದಾಗಿತ್ತು.

WHO ವರದಿಯ ಪ್ರಕಾರ, 1990 ಮತ್ತು 2017ರ ನಡುವೆ, ಭಾರತದ ಏಳು ಜನರಲ್ಲಿ ಒಬ್ಬರು ಖಿನ್ನತೆ, ಆತಂಕ ಮತ್ತು ಇತರ ತೀವ್ರ ಪರಿಸ್ಥಿತಿಗಳಂತಹ ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸಿದ್ದಾರೆ. ಸಾಂಕ್ರಾಮಿಕ ನಂತರದ ದೇಶದಲ್ಲಿ ಮಾನಸಿಕ ಅಸ್ವಸ್ಥತೆಯ ಉಲ್ಬಣವು ಕಂಡುಬಂದಿದೆ ಎಂದು ವೈದ್ಯರು ಹೇಳುತ್ತಾರೆ. ಮಕ್ಕಳಲ್ಲಿಯೂ ಮಾನಸಿಕ ಸಮಸ್ಯೆಗಳೂ ಕಂಡು ಬರುತ್ತಿವೆ. ಶಾಲೆ, ಟ್ಯೂಷನ್, ಹೋಮ್ ವರ್ಕ್ ಅಂತಾ ಮಕ್ಕಳು ಸಹ ಮಾನಸಿಕವಾಗಿ ಕಿರಿಕಿರಿ ಅನುಭವಿಸುತ್ತಿದ್ದಾರೆ ಎನ್ನುತ್ತಿವೆ ವರದಿಗಳು.

2023ರ ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್ ‘ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು’ ಎಂಬುದಾಗಿದೆ. ಈ ಪರಿಕಲ್ಪನೆಯನ್ನು ನಮ್ಮ ಜೀವನ ಮತ್ತು ಸಮಾಜಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಇರುವ ಪೂರ್ವಗ್ರಹವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರೂಪಿಸಲಾಗಿದೆ.

ನಿಮ್ಮ ಮಾನಸಿಕ ಆರೋಗ್ಯವನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಕುರಿತು  ಹೇಳುವುದಾದರೇ, 
ಇತರರೊಂದಿಗೆ ಬೆರೆಯಿರಿ, ವ್ಯಾಯಾಮ, ಧ್ಯಾನ ಮತ್ತು ಪ್ರಾರ್ಥನೆ, ಆಹಾರದ ಬಗ್ಗೆ ಕಾಳಜಿ ವಹಿಸಿ, ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳ ಬಗ್ಗೆ ನಿಗಾ ಇರಿಸಿ, ಧ್ಯಾನ ಮಾಡಿ,  ಪ್ರತಿದಿನವೂ ಒಂದೇ ಸಮಯಕ್ಕೆ ಮಲಗುವ ಹಾಗೂ ಏಳುವ ಅಭ್ಯಾಸ ಮಾಡಿಕೊಳ್ಳಿ, ನೀವು ಇಷ್ಟಪಡುವ ನಿಮ್ಮ ಹವ್ಯಾಸಕ್ಕಾಗಿ ಸಮಯವನ್ನು ತೆಗೆದುಕೊಳ್ಳಿ, ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ನೀವು ನಿಮ್ಮ ಸುತ್ತಲೂ ಇರುವ ಜನರಿಗೆ ಸಹಾಯ ಮಾಡುತ್ತಿರಿ, ಮನಸ್ಸಿಗೆ ಶಾಂತಿ ನೀಡುವ ಸಂಗೀತವನ್ನು ಆಲಿಸಿ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು