News Karnataka Kannada
Thursday, May 02 2024
ಆರೋಗ್ಯ

ನ್ಯೂಟ್ರೀಶಿಯಲ್ ಅನೀಮಿಯ ತಡೆಗಟ್ಟಲು ಕೆಲವು ಉತ್ತಮ ಆಹಾರ ಕ್ರಮಗಳು

Some of the best diets to prevent nutritional anemia
Photo Credit : Pixabay

ನಮ್ಮ ದೇಹದಲ್ಲಿ ಆರೋಗ್ಯಯುತ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆ ಇರುವುದನ್ನು ಅನೀಮಿಯ ಎನ್ನುತ್ತಾರೆ. ಮನುಷ್ಯನ ಆರೋಗ್ಯಯುತ ಜೀವನಕ್ಕೆ ಈ ಕೆಂಪು ರಕ್ತಕಣಗಳು ಬಹಳ ಮುಖ್ಯ. ಇವುಗಳು ಕಡಿಮೆಯಾದರೆ ನಾವು ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ನಮ್ಮ ದೇಹಕ್ಕೆ ಹಲವಾರು ಕಾರಣಗಳಿಂದ ಅನೀಮಿಯದ ಕೊರತೆ ಉಂಟಾಗುತ್ತದೆ. ನಾವು ಬಹಳ ಜಾಗರೂಕರಾಗಿ ಆಹಾರಗಳನ್ನು ಸೇವಿಸಬೇಕಾಗುತ್ತದೆ ಎಂದು ಕಾಕುಂಜೆ ಆರ್ಯುವೇದಿಕ್ ವೆಲ್ಲ್ ನೆಸ್ ಕ್ಲಿನಿಕ್‍ನ ವೈದ್ಯೆ ಡಾ. ಅನುರಾಧ ಹೇಳುತ್ತಾರೆ.

ನಮ್ಮ ದೇಹಕ್ಕೆ ಆಹಾರದ ಕೊರತೆಯಿಂದಾಗಿ ಬರುವ ಅನೀಮಿಯದ ಬಗ್ಗೆ ತಿಳಿದುಕೊಳ್ಳೂಣ.

ಆಹಾರದಲ್ಲಿ ಕಬ್ಬಿಣದ ಸತ್ವ, ಬಿ12, ಫೋಲಿಡ್ ಅಂಶಗಳ ಕಡಿಮೆ ಇರುವುದರಿಂದ ನ್ಯೂಟ್ರೀಶಿಯಲ್ ಅನೀಮಿಯ ಕಾಯಿಲೆ ಉಂಟಾಗುತ್ತದೆ.ನಮ್ಮ ದೇಹದಲ್ಲಿ ಅನೀಮಿಯ ಕೊರತೆ ಉಂಟಾದಾಗ ನಮ್ಮ ದೇಹಕ್ಕೆ ಆಯಾಸ, ತಲೆ ತಿರುಗುವಿಕೆ, ತಲೆನೋವು, ಕೈಕಾಲು ತಣ್ಣಗಾಗುವುದು ಮುಂತಾದ ಲಕ್ಷಣಗಳು ಕಂಡುಬಂದರೆ ಪರೀಕ್ಷೆ ಮಾಡಿಸಿಕೊಂಡು ಇದು ಆಹಾರ ಕೊರತೆಯಿಂದಾಗಿ ಉಂಟಾಗಿದೆಯೋ ಅಥವಾ ಬೇರೆ ಕಾರಣಗಳಿಂದ ಉಂಟಾಗಿದೆಯೋ ಎಂದುತಿಳಿದುಕೊಂಡು ಅದಕ್ಕೆ ಬೇಕಾದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ.

ನ್ಯೂಟ್ರೀಶಿಯಲ್ ಅನೀಮಿಯ ಉಂಟಾಗಿದ್ದರೆ ನಮ್ಮ ಆಹಾರದಲ್ಲಿ ಕಬ್ಬಿಣದ ಅಂಶ, ವೈಟಮಿನ್ ಬಿ12, ಇರುವಂತಹ ಆಹಾರಗಳಾದ ಬಿಟ್ರೋಟ್, ಬೀನ್ಸ್, ಬಟಾಣಿ, ಪಾಲಕ್ ಸೊಪ್ಪು, ಎಳ್ಳು, ಅಣಬೆ, ಬಟಾಟೆ ಹಾಗೂ ಒಣ ದ್ರಾಕ್ಷಿ, ಖರ್ಜೂರ ಇತ್ಯಾದಿಗಳನ್ನು ತೆಗೆದುಕೊಳ್ಳಬಹುದು. ಇವುಗಳ ಜೊತೆಗೆ ಸಕ್ಕರೆಯ ಬದಲು ಜೋನಿಬೆಲ್ಲ ಉಪಯೋಗಿಸಿಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು