Categories: ಆರೋಗ್ಯ

ಮಕ್ಕಳಿಗೆ ಕೆಲವು ಉತ್ತಮ ಆಹಾರ ಕ್ರಮಗಳು

ಈಗಿನ ಮಕ್ಕಳಿಗೆ ರಿಯಲ್ ಫುಡ್ ಎಂದರೆ ಚಿಪ್ಸ್,ನೂಡಲ್ಸ್, ಪಾಸ್ತಾ, ಬರ್ಗರ್,ಹಾಗೂ ಪ್ರೊಸೆಸ್ಡ್ ಫುಡ್ ಎಂಬ ಪರಿಕಲ್ಪನೆ ಬಂದಿದೆ.ಆದರೆ ಇವುಗಳನ್ನು ಹೊರತು ಪಡಿಸಿ ಆದಷ್ಟು ರಿಯಲ್ ಫುಡ್‍ಗಳಾದ ನಟ್ಸ್, ಡ್ರೈಫ್ರೂಟ್ಸ್, ಹಣ್ಣು, ತರಕಾರಿಗಳನ್ನು ಮಕ್ಕಳ ಡಯೆಟ್‍ನಲ್ಲಿ ಉಪಯೋಗಿಸಿಕೊಳ್ಳುವುದು ಉತ್ತಮ.

ಮಕ್ಕಳ ಬೆಳವಣಿಗೆಯ ಮೇಲೆ ನ್ಯೂಟ್ರಿಶಿಯ್ಸ್ ಆಹಾರಗಳು ಬಹಳ ಪರಿಣಾಮ ಬೀರುತ್ತವೆ. ಹೀಗಾಗಿ ಜಂಕ್ ಆಹಾರಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವುದು ಬಹಳ ಉತ್ತಮ ಎಂದು ಕಾಕುಂಜೆ ಆಯುರ್ವೇದಿಕ್ ವೆಲ್‍ನೆಸ್ ಕ್ಲಿನಿಕ್‍ನ ವೈದ್ಯೆ ಡಾ.ಅನುರಾಧ ಹೇಳುತ್ತಾರೆ.

ಈ ಜಂಕ್ ಫುಡ್ ಮತ್ತು ಪ್ರೊಸೆಸ್ಡ್ ಆಹಾರಗಳು ಕೇವಲ ಸಕ್ಕರೆ ಹಾಗೂ ಉಪ್ಪಿನ ಅಂಶ ಹೆಚ್ಚಾಗಿ ಇರುವುದರಿಂದ ಚಿಕ್ಕ ಮಕ್ಕಳಲ್ಲಿ ಒಬೆಸಿಟಿ ಪ್ರಾರಂಭವಾಗುತ್ತದೆ. ಜೊತೆಗೆ ಸಣ್ಣ ವಯಸ್ಸಿನಲ್ಲಿ ಡಯಾಬಿಟಿಸ್‍ಗೆ ಮಕ್ಕಳು ಬಲಿಯಾಗಬೇಕಾಗುತ್ತದೆ. ಇದರ ಜೊತೆಗೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಧ್ಯವಾದಷ್ಟು ಇಂತಹ ಆಹಾರಗಳನ್ನು ಕಡಿಮೆ ಗೊಳಿಸಿ ರಿಯಲ್ ಫುಡ್ ಡಯೆಟ್‍ಅನ್ನು ಹೆಚ್ಚುಗೊಳಿಸಬೇಕಾಗುತ್ತದೆ.

ಮಕ್ಕಳಿಗೆ ಹೆಚ್ಚಾಗಿ ತರಕಾರಿಗಳನ್ನು ಮಕ್ಕಳ ಆಹಾರದಲ್ಲಿ ಬಳಸುವುದು ಉತ್ತಮ. ಬೆಳಗ್ಗಿನ ತಿಂಡಿಯ ಜೊತೆಗೆ 3ರಿಂದ 4 ಬಾದಾಮಿಗಳನ್ನು ಕೊಡುವುದು ಅಥವಾ ಸ್ವಲ್ಪ ಪ್ರಮಾಣದಲ್ಲಿ ನೆಲಕಡಲೆ ಬೀಜವನ್ನು ನಿಡುವುಡು ಮಕ್ಕಳ ನ್ಯೂಟ್ರಿಶಿಯನ್‍ಗೆ ಉತ್ತಮವಾಗಿರುತ್ತದೆ.

ಟಿವಿ ಮುಂದೆ ಕುಳಿತು ಮಕ್ಕಳು ಪದೇ ಪದೇ ತಿನ್ನುವ ಅಭ್ಯಾಸವನ್ನು ನಿಲ್ಲಿಸುವುದು ಉತ್ತಮ. ದಿನದಲ್ಲಿ ಕೇವಲ 4 ಹೊತ್ತಿನ ಆಹಾರವನ್ನು ಅಂದರೆ ಬೆಗ್ಗಿನ ತಿಂಡಿ, ಮಧ್ಯಹ್ನದ ಊಟ, ಸಂಜೆ ಸ್ನಾಕ್ಸ್, ಮತ್ತು ರಾತ್ರಿಯ ಊಟ ಇವಿಷ್ಟನ್ನು ಮಕ್ಕಳಿಗೆ ಅಭ್ಯಾಸ ಮಾಡಿಸುವುದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು.

Ashika S

Recent Posts

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

5 hours ago

ಅತನೂರ ಗ್ರಾಮದಲ್ಲಿ ಸರ್ವಧರ್ಮಗಳ ಆರಾಧ್ಯದೈವ ನಂದಿ ಬಸವನ ಜಾತ್ರೆಯ ಸಡಗರ

ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.

5 hours ago

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

5 hours ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

6 hours ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

6 hours ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

6 hours ago