News Karnataka Kannada
Sunday, April 28 2024
ಆರೋಗ್ಯ

ಸಿದ್ಧವೈದ್ಯದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ: ಟಿ.ಎಸ್.ಶ್ರೀವತ್ಸ

ದೇಶದ ಅನ್ಯಭಾಷಿಕರು ಮತ್ತು ಹೊರ ದೇಶದ ಆಸಕ್ತರು, ಸಿದ್ಧವೈದ್ಯದ ಬಗ್ಗೆ ತಿಳಿದುಕೊಳ್ಳುವ ಅವಕಾಶದಿಂದ  ವಂಚಿತರಾಗಿದ್ದು, ಸಿದ್ಧವೈದ್ಯದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
Photo Credit : By Author

ಮೈಸೂರು: ದೇಶದ ಅನ್ಯಭಾಷಿಕರು ಮತ್ತು ಹೊರ ದೇಶದ ಆಸಕ್ತರು, ಸಿದ್ಧವೈದ್ಯದ ಬಗ್ಗೆ ತಿಳಿದುಕೊಳ್ಳುವ ಅವಕಾಶದಿಂದ  ವಂಚಿತರಾಗಿದ್ದು, ಸಿದ್ಧವೈದ್ಯದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.

ನಗರದ ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಯ ಸಭಾಂಗಣದಲ್ಲಿ ಅಗಸ್ತ್ಯ ಸಿದ್ದ ಸಾಹಿತ್ಯ ಸಂಶೋಧನಾ ಕೇಂದ್ರ  ಮೈಸೂರು, ಜಿಸಿಎಸ್‌ಎಂಆರ್ ಚೆನ್ನೈ ಯುಎಸ್‌ಐ ಪ್ರಕಾಶನ ಇವುಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಸಿದ್ಧ ವೈದ್ಯ ಪಿ.ಎಸ್.ನರಸಿಂಹಸ್ವಾಮಿ ಅವರ ಆರೋಗ್ಯಕರ ಜೀವನಕ್ಕೆ ಅಗಸ್ತ್ಯ ಸಿದ್ಧ ಸಾಹಿತ್ಯ ವೈದ್ಯ ಪದ್ಧತಿ ಗ್ರಂಥದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಿದ್ಧ ವೈದ್ಯಸಾಹಿತ್ಯ ಸಂಪೂರ್ಣವಾಗಿ ಪ್ರಾಚೀನ ತಮಿಳು ಲಿಪಿಗಳಲ್ಲಿರುವುದರಿಂದಲೂ ಮತ್ತು ಪದ್ಯರೂಪದಲ್ಲಿ  ಬಿಡಿಸಲಾಗದ ಒಗಟಿನಂತಿರುವುದರಿಂದಲೂ, ಇದರ ಬಗ್ಗೆ ತಿಳಿದುಕೊಳ್ಳುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಕಲಿಯಲು ವಯಸ್ಸಿನ ಅಂತರವಿಲ್ಲ ಎಂಬುದು ನರಸಿಂಹ ಸ್ವಾಮಿ ಅವರ ಒಂದು ಕಲೆ ಇವತ್ತಿಗೆ ಸಾಕ್ಷಿಯಾಗಿದೆ. ಇತ್ತೀಚಿನ ದಿನದಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚುತ್ತಿದೆ. ಮುಂದಿನ ದಿನದಲ್ಲಿ ಇವರ ಗ್ರಂಥ ಸಾರ್ವಜನಿಕ ಗ್ರಂಥಾಲಯಲ್ಲಿ ಎಲ್ಲರಿಗೂ ಸಿಗುವಂತಹ ವ್ಯವಸ್ಥೆ ಆಗಬೇಕೆಂಬ ಹಂಬಲದಿಂದ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮೈಸೂರಿನಲ್ಲಿ ಆಯುರ್ವೇದ ಔಷಧದ ವಿಷಯದ ಬಗ್ಗೆ ಎಲ್ಲರಿಗೂ ತಿಳಿಸುವಂತಹ ಕೆಲಸ ಮಾಡಲಾಗುತ್ತಿದ್ದು, ಇದರ ಜತೆಗೆ  ಪ್ರತಿದಿನ ನಮ್ಮ ದೇಹವನ್ನು ಆರೋಗ್ಯವಾಗಿ ಇಡುವುದಕ್ಕೆ ಯೋಗ ಮಾಡಬೇಕಿದೆ. ನಾಡಿ ಪರೀಕ್ಷೆ, ಅಷ್ಟ ಸ್ಥಾನ ಪರೀಕ್ಷೆ, ತ್ರಿದೋಷಗಳ ಗ್ರಹಿಕೆ, ರೋಗಿಯ ಮನಃಸ್ಥಿತಿ, ಅನುವಂಶೀಯ ಕಾಯಿಲೆಗಳ ತುಲನೆ ಇವೆಲ್ಲವೂ ಎರಡೂ ಪದ್ಧತಿಗಳಲ್ಲೂ ರೋಗನಿಧಾನ ಕ್ರಮಗಳು. ಕೆಲವೊಂದು ವಿಶಿಷ್ಠತೆಗಳು ಸಿದ್ಧ ವೈದ್ಯದಲ್ಲಿ ಮಾತ್ರ ಲಭ್ಯ. ಉದಾಹರಣೆಗೆ ಸಿದ್ಧವೈದ್ಯದಲ್ಲಿ ಉಲ್ಲೇಖಿಸಿರುವ ಲೋಹ, ಖನಿಜಗಳಿಂದ ವಿಶೇಷ ರೀತಿಯಲ್ಲಿ ತಯಾರಿಸಿದ ಭಸ್ಮ, ಸಿಂಧೂರ, ಸುಣ್ಣಗಳು 500 ವರ್ಷಗಳವರೆಗೂ ತಮ್ಮ ಔಷಧೀಯ ಗುಣಗಳನ್ನು ಕಾಪಾಡಿಕೊಂಡು ಕೆಡದೇ ಇರುವುದು. ಸಿದ್ಧವೈದ್ಯದ ಈ ರೀತಿಯ ವಿಶೇಷತೆಗಳು ಹತ್ತು ಹಲವು ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಆಯುರ್ವೇದ ತಜ್ಞರಾದ ಡಾ.ಎನ್.ಎಸ್.ರಾಮಚಂದ್ರ, ಡಾ.ಎ.ಎಸ್.ಚಂದ್ರಶೇಖರ್,  ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಕೆ.ಎಸ್.ರಾಧಾಕೃಷ್ಣ ರಾವ್, ಹಿರಿಯ ವಕೀಲರಾದ ಓ.ಶ್ಯಾಂ ಭಟ್, ಡಾ.ಸೆಲ್ವ ಷಣ್ಮುಗಂ, ಡಾ.ಅರುಳ್ ಅಮುದನ್ ಮತ್ತಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು