ಆರೋಗ್ಯ

ಮೂತ್ರಪಿಂಡದ ಸಮಸ್ಯೆ ಹಾಗೂ ಅದಕ್ಕೆ ಪರಿಹಾರಗಳು

ಮನುಷ್ಯನ ಮುಖ್ಯ ಅಂಗಗಳಲ್ಲಿ ಮೂತ್ರಪಿಂಡವು ಒಂದು ದೇಹದಲ್ಲಿನ ಬೇಡವಾದ ಅಂಶವನ್ನು ನೀರಿನ ಮೂಲಕ ಹೊರ ಹಾಕುವ ಮುಖ್ಯ ಅಂಗವಾಗಿ ಇದು ಕೆಲಸ ಮಾಡುತ್ತದೆ. ನಮ್ಮ ದೇಹದ ಆರೋಗ್ಯದ ಜೊತೆಗೆ ಅಂಗಾಂಗಗಳ ಆರೋಗ್ಯವನ್ನು ಬಹಳ ಚನ್ನಾಗಿ ಕಾಪಾಡಿಕೊಳ್ಳವುದು ಅತ್ಯಗತ್ಯಯವಾಗಿದೆ.

ಮೂತ್ರ ಪಿಂಡದ ಸಮಸ್ಯೆ ಎಂದರೆ ಅದು ಮೂತ್ರಪಿಂಡಕ್ಕೆ ಹಾನಿಯಾಗುವುದು ಎನ್ನಬಹುದು ಅಥವಾ ನಮ್ಮ ರಕ್ತದಿಂದ ಬೇಡದ ಅಂಶವನ್ನು ಮೂತ್ರದ ಮೂಲಕ ದೇಹದಿಂದ ಹೊರ ಹಾಕುವ ಒಂದು ವ್ಯವಸ್ಥೆ ಕ್ರಮೇಣ ಕಡಿಮೆಯಾಗುವುದು. ಇದರಿಂದ ರಕ್ತದಲ್ಲಿ ಬೇಡದ ಅಂಶಗಳು ಹೆಚ್ಚಾಗುತ್ತದೆ. ಎನ್ನುತ್ತಾರೆ ಆಯುರ್ವೇದಿಕ್ ವೆಲ್ ನೆಸ್ ಕ್ಲಿನಿಕ್‌ನ ವ್ಯದ್ಯೆ ಡಾ. ಅನುರಾಧಾ.

ಈ ಮೂತ್ರ ಪಿಂಡದ ಸಮಸ್ಯೆಗಳು ಹೇಗೆ ಉಂಟಾಗುತ್ತದೆ

ತುಂಬಾ ದೀರ್ಘಕಾಲಿನ ಆರೋಗ್ಯ ಸಮಸ್ಯೆಗಳಾದ ಸಕ್ಕರೆ ಖಾಯಿಲೆ, ರಕ್ತದೊತ್ತಡ, ಹೃದಯ ಸಂಬಂಧಿ ಖಾಯಿಲೆಗಳು, ಸಿಗರೇಟು ಸೇದುವುದು, ಬೊಜ್ಜುತನ, ಹೈಪರ್ ಟೆಂಷನ್, ಹೆರಿಡಿಟ್ರಿ ಸಮಸ್ಯೆಗಳಿಂದ ಈ ಮೂತ್ರಪಿಂಡದ ಸಮಸ್ಯೆಗಳನ್ನು ಎದುರಿಸಬಹುದು.

ಮೂತ್ರಪಿಂಡದ ಸಮಸ್ಯೆಯಿಂದಾಗಿ ರಕ್ತದೊತ್ತಡ,ಅನೀಮಿಯ, ನರದ ಸಮಸ್ಯೆ, ಎಲುಬುಗಳ ಸಮಸ್ಯೆ, ವೀಕ್ನೆಸ್ಸ್ ಉಂಟಾಗುವು ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಈ ಸಮಸ್ಯೆಗಳನ್ನು ಬೇಗನೆ ಪತ್ತೆಹಚ್ಚಿ ಚಿಕಿತ್ಸೆ ಪಡೆಯುವುದರಿಂದ ಮೂತ್ರ ಪಿಂಡದ ಹೆಚ್ಚಿನ ಹಾನಿಯನ್ನು ತಡೆಗಟ್ಟಬಹುದು. ಇಲ್ಲವಾದಲ್ಲಿ ಮೂತ್ರಪಿಂಡ ತನ್ನ ಕಾರ್ಯವನ್ನು ಸ್ಥಗಿತಗೊಳಿಸಬಹುದು( ಕಿಡ್ನಿ ಫೇಲಿಯೂರ್) ಇದು ಮುಂದೆ ಮೂತ್ರಪಿಂಡದ ಟ್ರಾನ್ಸ್ ಪ್ಲಾಂಟ್ ಗೆ ದಾರಿ ಮಾಡಿಕೊಡಬಹುದು.

ಲಕ್ಷಣಗಳು

ಸುತ್ತಾಗುವುದು, ಹಸಿವು ಕಡಿಮೆಯಾವುದು, ನಿದ್ರಾಹೀನತೆ, ಕಾಲು ಊತ ಬರುವುದು, ಮಾಂಸ ಖಂಡಗಳು ಹಿಡಿದುಕೊಳ್ಳುವುದು, ಕಣ್ಣಿನ ಕೆಳಭಾಗ ಊದಿಕೊಳ್ಳುವುದು, ಚರ್ಮ ಒಣಗಿ ತುರಿಕೆ ಪ್ರಾರಂಭವಾಗುವುದು, ರಾತ್ರಿ ಹಲವಾರು ಬಾರಿ ಮೂತ್ರಮಾಡುವುದು ಇವೆಲ್ಲಾ ಮೂತ್ರಪಿಂಡದ ತೊಂದರೆಯ ಸಾಮಾನ್ಯ ಲಕ್ಷಣಗಳು.

ಆಹಾರ

ಮೂತ್ರಪಿಂಡದ ಸಮಸ್ಯೆಯಿಂದ ಸಕ್ಕರೆ ಖಾಯಿಲೆ ಉಂಟಾದರೆಯ ಅಂಶವಿರುವ ಆಹಾರವನ್ನು ಮಿತಗೊಳಿಸುವುದು. ಪ್ರೊಸೆಸ್ಡ ಆಹಾರ, ಬೇಕರಿ ಮುಂತಾದವುಗಳು ಮೂತ್ರಪಿಂಡದ ಸಮಸ್ಯೆಯನ್ನು ತೀವ್ರಗೊಳಿಸುತ್ತದೆ ಹೀಗಾಗಿ ಮನೆಯಲ್ಲಿ ತಯಾರಿಸಿದ ಆಹಾರಗಳಿಂದ ಈ ಸಮಸ್ಯೆಯನ್ನು ಪರಿಣಾಮಕಾರಿ ರೀತಿಯಲ್ಲಿ ನಿಯಂತ್ರಣದಲ್ಲಿಡಬಹುದು.

Ashika S

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

2 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

3 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

3 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

3 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

4 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

4 hours ago