News Karnataka Kannada
Wednesday, May 08 2024
ಆರೋಗ್ಯ

ಚಳಿಗಾಲದಲ್ಲಿ ಕೂದಲಿನ ಆರೈಕೆ ಮಾಡುವುದು ಹೇಗೆ

How to take care of hair in winter
Photo Credit : Pixabay

ಚಳಿಗಾಲ ಬಂದಾಗ ನಮ್ಮ ಮೈಕೈ ಚರ್ಮ ಶುಷ್ಕವಾಗುವುದರ ಜೊತೆಗೆ ತಲೆಯ ಚರ್ಮವು ಸಹ ಶುಷ್ಕವಾಗುತ್ತದೆ. ಇದರಿಂದಾಗಿ ತಲೆಯಲ್ಲಿ ತುರಿಕೆ, ಕೂದಲು ಉದುರುವುದು, ಹಾಗೂ ತಲೆಹೊಟ್ಟು ಉಂಟಾಗುತ್ತದೆ.

ಚಳಿಗಾಲವು ನಮ್ಮ ನೆತ್ತಿಯ ಚರ್ಮವನ್ನು ಒಣಗಿಸಬಹುದು ಹಾಗೂ ಕೂದಲನ್ನು ಒರಟಾಗಿಸಬಹುದು. ಹೀಗಾಗಿ ನಮ್ಮ ದೇಹವನ್ನುನಾವು ಚಳಿಯಿಂದ ಎಷ್ಟು ರಕ್ಷಣೆ ನೀಡುತ್ತೆವೆಯೋ ಅಷ್ಟೆ ರಕ್ಷಣೆ ನಮ್ಮ ಕೂದಲಿಗೂ ಅಗತ್ಯವಾಗಿರುತ್ತದೆ ಎಂದು ಆಯುರ್ವೇದಿಕ್ ವೆಲ್‌ನೆಸ್ ಕ್ಲಿನಿಕ್‌ನ ವೈದ್ಯೆ ಡಾ. ಅನುರಾಧಾ ಹೇಳುತ್ತಾರೆ.

ಸಲಹೆಗಳು

ಎಣ್ಣೆಯಿಂದ ನಿಮ್ಮ ನೆತ್ತಿಯನ್ನು ತೇವಗೊಳಿಸಿ: ತೇವಾಂಶದ ಕೊರತೆಯಿಂದ ನೆತ್ತಿ ಒಣಗಿ ತುರಿಕೆ ಉಂಟಾಗುತ್ತದೆ. ಇದು ತಲೆ ಹೊಟ್ಟು, ಕೆತ್ತಿಯ ಕಿರಿಕಿರಿ ಅಥವಾ ಫ್ಲಾಕಿನೆಸ್ ಉಂಟಾಗಿ ಕೂದಲು ಉದುರುವುಕೆಗೆ ಕಾರಣವಾಗಬಹುದು. ಅಥವಾ ಉಗುರು ಬೆಚ್ಚಗಿನ ಎಣ್ಣೆಯ ಮಸಾಜ್ ಕೂಡ ಉತ್ತಮ.

ಪದೇ ಪದೇ ತಲೆ ಸ್ನಾನ ತಪ್ಪಿಸಿ: ನಿಮ್ಮ ಕೂದಲನ್ನು ಆಗಾಗ್ಗೆ ತೊಳೆಯುವುದರಿಂದ ಕೂದಲಿನ ಹಾಗೂ ಚರ್ಮದ ನೈಸರ್ಗಿಕ ತೈಲವನ್ನು ತೆಗೆದು ಹಾಕುತ್ತದೆ. ಇದು ಮತ್ತಷ್ಟು ಶುಷ್ಕತೆ ಮತ್ತು ಕಿರಿಕಿರಿ ಉಂಟುಮಾಡುತ್ತದೆ. ವಾರಕ್ಕೆ 2 ಬಾರಿ ಶಾಂಪೂ ಮಾಡುವುದು ಉತ್ತಮ. ಹಾಗೂ ಸಲ್ಫೆಟ್ ಫ್ರೀ ಶ್ಯಾಂಪೂ ಬಳಸುವುದು ಉತ್ತಮ.

ಸರಿಯಾದ ರೀತಿಯಲ್ಲಿ ಕಂಡಿಷ್‌ನಿಂಗ್ ಮಾಡುವುದು ಉತ್ತಮ: ಚಳಿಗಾಲದಲ್ಲಿ ಕಂಡೀಷ್‌ನಿಂಗ್ ಮಾಡುವುದನ್ನು ಬಿಟ್ಟು ಬಿಡಬೇಡಿ. ಕೂದಲಿನ ಪೂಷಣೆಗಾಗಿ ತೆಂಗಿನ ಎಣ್ಣೆ, ಜೊಜೊಬಾ ಎಣ್ಣೆ, ಅಥವಾ ಶಿಯಾ ಬೆಣ್ಣೆಯಂತಹ ನೈಸರ್ಗಿಕ ತೈಲ ಹೊಂದಿರುವ ಕಂಡೀಷನರ್ ಬಳಸುವುದು ಉತ್ತಮ.

ಹೀಟ್ ಸ್ಟೈಲಿಂಗ್ ಪರಿಕರಗಳನ್ನು ತಪ್ಪಿಸಿ: ಚಳಿಗಾಲದಲ್ಲಿ ನಿಮ್ಮ ಕೂದಲು ಸೂಕ್ಷ್ಮ ವಾಗಿರುವುದರಿಂದ ಹೀಟ್ ಸ್ಟೈಲಿಂಗ್ ಪರಿಕರಗಗಳನ್ನು ಬಳಸದಿರುವುದು ಉತ್ತಮ.

ಕೂದಲಿನ ಆರೈಕೆಗೆ ಆಹಾರಗಳು

ಚಳಿಗಾಲದಲ್ಲಿ ನಾವು ಸೇವಿಸುವ ಆಹಾರದ ಬಗ್ಗೆ ತುಂಬಾ ಮುಂಜಾಗೃತೆ ವಹಿಸಬೇಕಾಗುತ್ತದೆ. ಕೂದಲು ಉದುರುವಿಕೆಯನ್ನು ತಡೆಗಟ್ಟಲು ಹಾಗೂ ಕೂದಲ ಬೆಳವಣಿಗೆಯನ್ನು ಉತ್ತೇಜಿಸುವ ಕಬ್ಬಿಣಾಂಶ, ಬೀಟಾ ಕ್ಯಾರೋಟಿನ್, ಮೆಗ್ನೇಶಿಯಂ, ಪ್ರೋಟಿನ್, ಸಿಲಿಕಾ, ವಿಟಮಿನ್ ಸಿ ಹೊಂದಿರುವ ಆಹಾರಗಳು ಉತ್ತಮ.

ಬೆರಿ ಹಣ್ಣುಗಳು: ಇವುಗಳಲ್ಲಿವಿಟಮಿನ್ ಸಿ ಮತ್ತು ಸತು ಒಳಗೊಂಡಿದೆ, ಅಗತ್ಯವಿರುವ ಪೋಶಕಾಂಶಗಳನ್ನು ಇವುಗಳು ಒದಗಿಸುತ್ತವೆ.

ಕಿತ್ತಳೆ: ಫೈಬರ್, ವಿಟಮಿನ್ ಸಿ, ಸಿಲಿಕಾದಿಂದ ತುಂಬಿರುವ ಕಿತ್ತಳೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಬಾಳೆಹಣ್ಣು: ಇದು ಪೆಕ್ಟಿನ್ ಮತ್ತು ಮೆಗ್ನೇಸಿಯಂ ನಂತಹ ಖನಿಜ ಕೂದಲನ್ನು ಬಲಪಡಿಸುತ್ತದೆ.

• ಸಿಹಿ ಗೆಣಸು, ಪಾಲಕ್, ಬ್ರೋಕಲಿ, ಅವಕಾಡೋ, ದ್ವಿದಳ ಧಾನ್ಯ, ಚಿಯಾ ಬೀಜಗಳು, ಮಾಂಸಾಹಾರದಲ್ಲಿ ಮೀನು, ಉತ್ತಮ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು