ಆರೋಗ್ಯ

ಮಧುಮೇಹವನ್ನು ನಿಯಂತ್ರಣದಲ್ಲಿರಿಸುವುದು ಹೇಗೆ

ಮಧುಮೇಹ ಎನ್ನುವುದು ಮನುಷ್ಯನ ದೇಹದಲ್ಲಿ ಉಂಟಾಗುವ ಸಾಮಾನ್ಯ ಖಾಯಿಲೆಯಂತಾಗಿದೆ. ಮಕ್ಕಳಿಂದ ಹಿಡಿದು ಮುದುಕರ ವರೆಗೂ ಎಲ್ಲರನ್ನೂ ಕಾಡುವ ಈ ಖಾಯಿಲೆ ಒಮ್ಮೆ ಅಂಟಿಕೊಂಡರೆ ಅದರಿಂದ ಬಿಡಿಸಿಕೊಳ್ಳುವುದು ಬಹಳ ಕಷ್ಟ. ಈ ಮಧುಮೇಹ ಹೊಂದಿರುವ ಜನರು ತಮ್ಮ ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ನಿಯಂತ್ರಣ ಮಾಡಲು ಹರಸಾಹಸ ಪಡುತ್ತಾರೆ.

ಮಧುಮೇಹ ನಿಯಂತ್ರಣದಲ್ಲಿರಿಸಲು ವೈದ್ಯರ ಸಲಹೆಯ ಜೊತೆಗೆ ಆಹಾರದಲ್ಲಿಯೂ ಸಹ ಹೆಚ್ಚಿನ ನಿಯಂತ್ರಣ ಬೇಕಾಗುತ್ತದೆ ಎನ್ನುತ್ತಾರೆ ಕಾಕುಂಜೆ ವೆಲ್‌ನೆಸ್ ಕ್ಲಿನಿಕ್‌ನ ಆಯುರ್ವೇದ ವೈದ್ಯೆ ಡಾ. ಅನುರಾಧಾ.

ಮಧುಮೇಹಕ್ಕೆ ಕಾರಣಗಳ

ಮಧುಮೇಹಕ್ಕೆ ಹಲವಾರು ಕಾರಣಗಳಿರಬಹುದು ಮುಖ್ಯವಾಗಿ

• ಅಧಿಕ ತೂಕ ಅಥವಾ ಸ್ಥೂಲಕಾಯ
• ಜೀನ್‌ಗಳು
• ಇನ್ಸುಲಿನ್ ಪ್ರತಿರೋಧ
• ಜೆನಿಟಿಕ್ ರೂಪಾಂತರಗಳು
• ಹಾರ್ಮೋನು ರೋಗಗಳು
• ಜೌಷಧಗಳ ಅಡ್ಡ ಪರಿಣಾಮಗಳು

ಮಧುಮೇಹ ನಿಯಂತ್ರಿಸಲು ಕೆಲವು ಆಹಾರಗಳು

• ಸಂಸ್ಕರಿಸಿದ ಸಸ್ಯಜನ್ಯ ಎಣ್ಣೆಯ ಬದಲಿಗೆ ಹೆಚ್ಚುವರಿ ವರ್ಜಿನ್ ಆಯಿಲ್ ಬಳಸುವುದು ದೇಹಕ್ಕೆ ಹೆಚ್ಚು ಉತ್ತಮವಾಗಿರುತ್ತದೆ. ಇದರಿಂದ ನಮ್ಮ ದೇಹಕ್ಕೆ ಆರೋಗ್ಯಕರ ಕೊಬ್ಬನ್ನು ಪಡೆಯಲು ಸಹಾಯಕವಾಗುತ್ತದೆ.

• ಕೊಬ್ಬು ರಹಿತ ಹಾಲು ಮೊಸನ್ನು ದಿನ ನಿತ್ಯದ ಆಹಾರದಲ್ಲಿ ಬಳಸುವುದರ  ಜೊತೆಗೆ ಮಜ್ಜಿಗೆಯನ್ನು ಉಪಯೋಗಿಸಿಕೊಳ್ಳುವುದು ನಮ್ಮ ದೇಹಕ್ಕೆ ಒಳ್ಳೆಯದು

• ಟೊಮೇಟೊದ ಸೇವನೆಯು ಮಧುಮೇಹಿಗಳಿಗೆ ಆಹಾರದ ಪಟ್ಟಿಯಲ್ಲಿ ಮುಖ್ಯವಾದ ಪಾತ್ರವಹಿಸುತ್ತದೆ. ಇದರಿಂದ ಹೃದ್ರೋಗ, ಡಿಜನರೇಶನ್, ಕ್ಯಾನ್ಸರ್‌ನಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

• ಪಿಷ್ಟರಹಿತ ತರಕಾರಿಗಳಾದ ಎಲೆಕೋಸು, ಕ್ಯಾರೆಟ್ ಸೌತೆ, ಪೆಪ್ಪರ್, ಅಣಬೆ ಮುಂತಾದ ತರಕಾರಿಗಳು ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಮಧುಮೇಹಿಗಳು ಆಲೂಗೆಡ್ಡೆ ಸಿಹಿ ಗೆಣಸು ಹಾಗೂ ಬೀಟ್ರೋಟ್ ನಂತಹ ತರಕಾರಿಗಳ ಉಪಯೋಗವನ್ನು ಕಡಿಮೆ ಮಾಡುವುದು ಒಳ್ಳೆಯದು.

• ಬೇಳೆಕಾಳುಗಳಾದ ಬಾರ್ಲಿ, ಜೋಳ, ರಾಗಿ ಹಾಗೂ ಇತರ ಧಾನ್ಯಗಳು ಫೈಬರ್‌ಅನ್ನು ಹೊಂದಿರುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸ್ಥಿರಗೊಳಿಸುತ್ತದೆ.

• ಮೀನು ಮತ್ತು ಮೊಟ್ಟೆಯಲ್ಲಿ ಒಮೆಗಾ3 ಇರುವುದರಿಂದ ಇವುಗಳು ಪ್ರೋಟೀನ್ ಯುಕ್ತ ಆಹಾರವಾಗಿದೆ ಕೂದಲು, ಚರ್ಮ, ಹಾಗೂ ಮೂಳೆಗಳಿಗೆ ವಿಟಮಿನ್ ಡಿ ಸಹ ದೊರೆಯುತ್ತದೆ.

• ಹಣ್ಣುಗಳಲ್ಲಿ ಬೆರಿ ಹಣ್ಣುಗಳಾದ ಸ್ಟ್ರಾಬೆರಿ, ರಾಸ್‌ಬೆರಿ, ಪೇರಳೆ, ಕಿವಿ ಹಾಗೂ ದಾಳಿಂಬೆಯಂತಹ ಗಾಢಬಣ್ಣದ ಹಣ್ಣುಗಳನ್ನು ಸೇವಿಸಬಹುದು.

Ashika S

Recent Posts

ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ : ನಿತಿನ್‌ ಗಡ್ಕರಿ

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ…

2 mins ago

ತೀರ್ಥಯಾತ್ರೆಗೆ ಬಂದ ನಾಲ್ವರು ನದಿಯಲ್ಲಿ ಮುಳುಗಿ ದಾರುಣ ಸಾವು

ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ…

21 mins ago

ಪ್ರಾಚೀನರ ಕಲಾ ಕೊಡುಗೆಗಳ ಸಂರಕ್ಷಣೆ ಅಗತ್ಯ: ನೇಮಿರಾಜ ಶೆಟ್ಟಿ

ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು…

26 mins ago

ಮತ್ತೆ ವಿವಾದಕ್ಕೆ ಸಿಲುಕಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ಒಂದು ವರ್ಷದ ಸಾಧನೆಯ ರಿಪೋರ್ಟ್ ಕಾರ್ಡ್ ಹಿಡಿದು ಹಿರಿಯ ಬಿಜೆಪಿ ಮುಖಂಡರ ಬಳಿ ಶಾಸಕ ಅಶೋಕ್ ಕುಮಾರ್ ರೈ ತೆರಳಿದ್ದು, ಶಾಸಕ…

35 mins ago

ಚಾಮರಾಜನಗರ: ಹಾಸನೂರು ಘಾಟ್ ಬಳಿ ಕಾರು ಪಲ್ಟಿ

ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಘಾಟ್ ಬಳಿ ಕಾರೊಂದು ಪಲ್ಟಿಯಾದ ಘಟನೆ ನಡೆದಿದೆ.

56 mins ago

ಫ್ಲಾಟ್‌ಗಳನ್ನು ನಿರ್ಮಿಸಲು 8 ಮರಗಳನ್ನು ಕಡಿದ ಬಿಲ್ಡರ್ ವಿರುದ್ಧ ಎಫ್‌ಐಆರ್

ಫ್ಲಾಟ್‌ಗಳನ್ನು ನಿರ್ಮಿಸಲು ಎಂಟು ಮರಗಳನ್ನು ಕಡಿದ ಆರೋಪದ ಮೇಲೆ ಆಂಧ್ರಪ್ರದೇಶ ಮೂಲದ ಬಿಲ್ಡರ್ ವಿರುದ್ಧ ಬಿಬಿಎಂಪಿ ಅರಣ್ಯ ವಿಭಾಗವು ಎಫ್‌ಐಆರ್…

1 hour ago