News Karnataka Kannada
Friday, May 03 2024
ಆರೋಗ್ಯ

ಚಳಿಗಾಲದಲ್ಲಿ ಆರೋಗ್ಯವಾಗಿರಲು ತುಪ್ಪವನ್ನು ಈ ರೀತಿ ಬಳಸಿ

 Ghee
Photo Credit : Wikimedia

ಆರೋಗ್ಯ:  ದೇಶದ ಹಲವಾರು ಭಾಗಗಳಲ್ಲಿ ಚಳಿಗಾಲ ಆರಂಭವಾಗಿದೆ. ಹವಾಮಾನ ಬದಲಾಗುವುದರಿಂದ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುವಲ್ಲಿ ತುಪ್ಪವು ಉತ್ತಮವಾಗಿದೆ. ಅದು ನಿಮ್ಮನ್ನು ಒಳಗಿನಿಂದ ಬೆಚ್ಚಗಾಗಿಸುವುದು.

ತುಪ್ಪವನ್ನು ನಿಮ್ಮ ಆಹಾರದ ಭಾಗವಾಗಿ ಮಾಡಲು ನೀವು ಬಯಸಿದರೆ, ರೊಟ್ಟಿ, ಚಪಾತಿಗೆ ಹಚ್ಚಿ ತಿನ್ನುವುದು ಉತ್ತಮವಾಗಿದೆ. ತುಪ್ಪವನ್ನು ಪರೋಟದ ಜೊತೆಗೂ ಸೇವಿಸಬಹುದು.
ಸೂಪ್, ದಾಲ್ ಮತ್ತು ಇತರ ಧಾನ್ಯಗಳಿಗೆ ಒಂದು ಚಮಚ ತುಪ್ಪವನ್ನು ಸೇರಿಸಿ ಸೇವಿಸುವುದು ಚಳಿಗಾಲದಲ್ಲಿ ಅದರ ರುಚಿಯನ್ನು ಹೆಚ್ಚಿಸುವುದಲ್ಲದೆ ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ.

ಹಸಿ ಅರಿಶಿನ ಮತ್ತು ಒಂದು ಚಮಚ ತುಪ್ಪವನ್ನು ಒಟ್ಟಿಗೆ ರುಬ್ಬಿ. ಈ ಪೇಸ್ಟ್ ಅನ್ನು ಒಂದು ಕಪ್ ಹಾಲಿನಲ್ಲಿ ಸೇರಿಸಿ ಅಥವಾ ನಿಮ್ಮ ಬೆಳಗಿನ ಕಾಫಿ ಅಥವಾ ಟೀಗೆ ಸೇರಿಸಿ. ಈ ರೀತಿ ತುಪ್ಪವನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ಸಂಸ್ಕರಿಸಿದ ಎಣ್ಣೆಯ ಬದಲು ತುಪ್ಪದಲ್ಲಿ ತರಕಾರಿಗಳನ್ನು ಬೇಯಿಸುವುದು ರುಚಿಯನ್ನು ಹೆಚ್ಚಿಸುವುದಲ್ಲದೆ, ನಿಮ್ಮ ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತದೆ. ತರಕಾರಿಗಳಲ್ಲಿ ಕಂಡುಬರುವ ಕೊಬ್ಬಿನಲ್ಲಿ ಕರಗುವ ಪೋಷಕಾಂಶಗಳನ್ನು ಹೀರಿಕೊಳ್ಳಲು ತುಪ್ಪ ಸಹಾಯ ಮಾಡುತ್ತದೆ.

ಮನೆಯಲ್ಲಿ ತಯಾರಿಸಿದ ಪಾಪ್ ಕಾರ್ನ್ ಅಥವಾ ಸ್ವೀಟ್ ಕಾರ್ನ್ ನೊಂದಿಗೆ ತುಪ್ಪವನ್ನು ಬೆರೆಸಿ ತಿನ್ನಬಹುದು. ಇದರಿಂದ ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಮತ್ತಷ್ಟು ವೃದ್ಧಿಯಾಗುತ್ತದೆ.

ಮುಖದಲ್ಲಿನ ಮೊಡವೆ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ತುಪ್ಪ ಪ್ರಮುಖ ಪಾತ್ರ ವಹಿಸುತ್ತದೆ. ತುಪ್ಪವನ್ನು ಹೆಚ್ಚು ತಿಂದರೆ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ತುಪ್ಪವನ್ನು ಅತಿಯಾಗಿ ಸೇವಿಸಬಾರದು. ತುಪ್ಪ ತಿನ್ನುವ ಬದಲು ಮುಖಕ್ಕೆ ಸ್ವಲ್ಪ ಹಚ್ಚಿಕೊಂಡರೆ ಈ ಸಮಸ್ಯೆಯಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ತುಪ್ಪದ ಗುಣಪಡಿಸುವ ಗುಣಗಳು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು