News Karnataka Kannada
Monday, April 29 2024
ಆರೋಗ್ಯ

ಕರಿಬೇವು ದಿನ ಸೇವಿಸುವುದರಿಂದ ಎಷ್ಟೊಂದು ಅನುಕೂಲವಿದೆ ಗೊತ್ತಾ..?

curry leaves
Photo Credit : News Kannada

ಕರಿಬೇವಿನ ಎಲೆಯಲ್ಲಿರುವ ಟ್ಯಾನಿನ್‌ಗಳು, ಕಾರ್ಬಜೋಲ್ ಆಲ್ಕಲಾಯ್ಡ್‌ಗಳು ಯಕೃತ್ತನ್ನು ಹೆಪಟೈಟಿಸ್ ಮತ್ತು ಸಿರೋಸಿಸ್‌ನಂತ ಕಾಯಿಲೆಗಳಿಂದ ರಕ್ಷಿಸುತ್ತದೆ. ಚರ್ಮದ ಆರೈಕೆಯಲ್ಲಿ ಕರಿಬೇವಿನ ಎಲೆಗಳು ತುಂಬಾ ಉಪಕಾರಿಯಾಗಿವೆ ಎನ್ನಬಹುದು. ಸುಟ್ಟಗಾಯಗಳು, ಕಡಿತ ಮತ್ತು ತುರಿಕೆ ಚರ್ಮವನ್ನು ಕಡಿಮೆ ಮಾಡಲು ಕರಿಬೇವಿನ ಎಲೆಗಳ ರಸ ಸಹಾಯ ಮಾಡುತ್ತದೆ.

ಸಕ್ಕರೆ ಕಾಯಿಲೆ ಇರುವ ವ್ಯಕ್ತಿಗಳು ದಿನ ಹಸಿರಾಗಿರುವ ಕರಿಬೇವಿನ ಎಲೆಗಳನ್ನು ತಿಂದರೆ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಬಹುದು.

ಅಧಿಕ ದೇಹದ ತೂಕ ಹೊಂದಿರುವವರು ನಿತ್ಯ 4 ಕರಿಬೇವಿನ ಎಲೆಗಳ ಸೇವನೆಯಿಂದ ಸ್ವಲ್ಪ ಮಟ್ಟಿಗೆ ತೂಕ ಕಡಿಮೆ ಮಾಡಿಕೊಳ್ಳಬಹುದು. ಈ ಎಲೆಗಳಲ್ಲಿರುವ ಲುಟೀನ್ ಎಂಬ ಆ್ಯಂಟಿಆ್ಯಕ್ಸಿಡೆಂಟ್​ ಆರೋಗ್ಯಕ್ಕೆ ಹೆಚ್ಚು ಹೆಚ್ಚು ಉಪಕಾರಿಯಾಗಿದೆ.

ಕರಿಬೇವನ್ನು ನಮ್ಮ ಆಹಾರದಲ್ಲಿ ಪ್ರತಿದಿನ ಬಳಸುವುದರಿಂದ ಇಳಿ ವಯಸ್ಸಿನಲ್ಲಿ ಬರುವ ಕಣ್ಣಿನ ಪೊರೆಗಳಂತ ಸಮಸ್ಯೆಗಳನ್ನು ತಪ್ಪಿಸಬಹುದು. ಇದನ್ನು ಈಗಿನಿಂದಲೇ ರೂಡಿಸಿಕೊಂಡರೆ ಮುಂದೆ ನಮಗೆ ಅನುಕೂಲ ಆಗುತ್ತದೆ.

ಇತ್ತೀಚಿನ ದಿನಗಳಲ್ಲಿ ಕಿರಿಯರಿಂದ ಹಿರಿಯರವರೆಗೆ ಅಜೀರ್ಣ ಸಮಸ್ಯೆ ಕಾಡುತ್ತಿರುತ್ತದೆ. ಹೀಗಾಗಿ ಕರಿಬೇವಿನ ಎಲೆಯಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ದೇಹದಲ್ಲಿ ಅಜೀರ್ಣ ಸಮಸ್ಯೆ ಕಾಡುತ್ತಿದ್ದಾಗ ಒಂದು ಲೋಟ ಮಜ್ಜಿಗೆಗೆ ಚಿಟಿಕೆ ಇಂಗು, ಕರಿಬೇವು ಹಾಗೂ ಸೋಂಪು ಸೇರಿಸಿ ಕುಡಿದರೆ ಅಜೀರ್ಣ ಸಮಸ್ಯೆಯು ಜೀರ್ಣವಾಗುವುದು ಖಚಿತ.

ಕರಿಬೇವಿನಲ್ಲಿನ ಔಷಧ ಗುಣಗಳು ನರಮಂಡಲ, ಹೃದಯ, ಮೆದುಳು ಮತ್ತು ಮೂತ್ರಕೋಶಗಳ ಆರೋಗ್ಯ ಕಾಪಾಡುತ್ತವೆ. ಕರಿ ಬೇವಿನ ಎಲೆಗಳನ್ನು ಚನ್ನಾಗಿ ಬಿಸಿಲಿನಲ್ಲಿ ಒಣಗಿಸಿ, ನಂತರ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ, ಆ ಎಣ್ಣೆಯನ್ನು ಕೂದಲಿಗೆ ನಿಯಮಿತವಾಗಿ ಹಚ್ಚುವುದರಿಂದ ಕೂದಲು ಉದುರುವುದು, ತಲೆ ಹೊಟ್ಟು ಹಾಗೂ ಒಣ ಕೂದಲಿನ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು