News Karnataka Kannada
Monday, April 29 2024
ಆರೋಗ್ಯ

ಹರ್ನಿಯಾ: ಶಸ್ತ್ರಚಿಕಿತ್ಸೆ ಕುರಿತು ನಿರ್ಲಕ್ಷ್ಯ ಬೇಡ (ಕುಶಲವೇ ಕ್ಷೇಮವೇ)

Hernia: Don't neglect surgery (skill is fine)
Photo Credit : By Author

ಹರ್ನಿಯಾ ವಯಸ್ಕರನ್ನು ಕಾಡುವ ಸಾಮಾನ್ಯ ಶಸ್ತ್ರಕ್ರಿಯೆಯ (surgical) ಆರೋಗ್ಯ ಸಮಸ್ಯೆಯಾಗಿದ್ದರೂ ಇದು ನವಜಾತ ಶಿಶುವಿನಿಂದ ಹಿಡಿದು ಯಾರನ್ನಾದರೂ ಕಾಡಬಹುದಾಗಿದೆ. ಇದನ್ನು ಅಂಡವಾಯು ಎಂದೂ ಸಹ ಕರೆಯಲಾಗುತ್ತದೆ.

ಹರ್ನಿಯಾ ಎಂದರೇನು?
ದೇಹದ ಭಾಗಗಳು ತಮ್ಮ ಸುತ್ತಲಿನ ದುರ್ಬಲ ಭಾಗವೊಂದರ ಮೂಲಕ ಹೊರಜಾರಿ ಬರುವುದನ್ನು ನಾವು ಹರ್ನಿಯಾ ಎಂದು ಗುರುತಿಸುತ್ತೇವೆ. ಹರ್ನಿಯಾಗಳಿಗೆ ಕಾರಣ ಹಲವು. ಹರ್ನಿಯಾ ಕಾಣಿಸಿಕೊಳ್ಳಬಹುದಾದ ರೀತಿ ಕೂಡ ವೈವಿಧ್ಯ. ಕೇವಲ ಉಬ್ಬಿದಂತೆ ಇದು ನಮ್ಮ ಅನುಭವಕ್ಕೆ ಬರಬಹುದು. ದಿನನಿತ್ಯ ಬದುಕಿನಲ್ಲಿ ಈ ಉಬ್ಬು ಗಮನಕ್ಕೆ ಬಂದರೂ ನಾವು ಅದನು ನಿರ್ಲಕ್ಷಿಸುವ ಸಾಧ್ಯತೆ ಇರುತ್ತದೆ. ದುರದೃಷ್ಟವಶಾತ್ ಕೆಲವೊಮ್ಮೆ ಈ ಹರ್ನಿಯಾ ಜೀವ ತೆಗೆದುಕೊಳ್ಳಬಹುದಾದ ಅಪಾಯಕಾರಿ ಹಂತವನ್ನು ಸಹ ತಲುಪಬಲ್ಲದ್ದಾಗಿದೆ. ಈ ಸಮಸ್ಯೆಗೆ ಶಸ್ತ್ರಕ್ರಿಯೆಯೇ ಪರಿಹಾರ. ಹಾಗಾಗಿ ಈ ತೊಂದರೆಯನ್ನು ಗುಣಪಡಿಸಿಕೊಳ್ಳಲು ಅಪರೇಷನ್ ಭಯದಿಂದಾಗಿ ಹಿಂಜರಿಯುವವರು ಅನೇಕ ಮಂದಿ. ಹರ್ನಿಯಾ ಸಮಸ್ಯೆಯುಳ್ಳವರು ದಿನದೂಡಿದಷ್ಟು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಹರ್ನಿಯಾಗಳನ್ನು ಅವು ಉದ್ಭವಿಸುವ ದೇಹದ ಭಾಗಕ್ಕೆ ಅನುಗುಣವಾಗಿ ಹೆಸರಿಸಲಾಗುತ್ತದೆ. ಹರ್ನಿಯಾದ ಸಮಸ್ಯೆ ಸಾಮಾನ್ಯವಾದವು. ಇದು ನಿರ್ಲಕ್ಷ್ಯಕ್ಕೊಳಪಡುವುದು ಸಹ ಅತಿ ಸಾಮಾನ್ಯ.

ಅಂಡವಾಯು ಅಥವಾ ಹರ್ನಿಯಗಳು ಸಾಮಾನ್ಯವಾಗಿ ಹೊಟ್ಟೆಯಲ್ಲಿ ಬೆಳೆಯುತ್ತವೆ ಆದರೆ ಅವು ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರಬಹುದು. ಅಂಡವಾಯುಗಳನ್ನು ಅವುಗಳ ಸ್ಥಳ, ತೀವ್ರತೆ ಅಥವಾ ಮೂಲಕ್ಕೆ ಅನುಗುಣವಾಗಿ ಹಲವಾರು ವಿಧಗಳಲ್ಲಿ ವರ್ಗೀಕರಿಸಬಹುದು.

ಹರ್ನಿಯಾ ಉಂಟಾಗಲು ಕಾರಣವೇನು?
ಹರ್ನಿಯಾ ಉಂಟಾಗಲು ಸ್ನಾಯುಗಳ ದೌರ್ಬಲ್ಯ ಕಾರಣ. ಸ್ನಾಯುಗಳು ದುರ್ಬಲಗೊಳ್ಳಲು ಹಾಗೂ ಅವುಗಳ ಮೇಲೆ ಒತ್ತಡ ಹೆಚ್ಚಲು ಕಾರಣಗಳು ಹಲವು. ಹರ್ನಿಯಾವನ್ನು ಶಸ್ತ್ರಕ್ರಿಯೆ ಮೂಲಕ ದುರಸ್ತಿಗೊಳಿಸಿದ ನಂತರವೂ ಈ ಕಾರಣಗಳನ್ನು ಗುರುತಿಸದಿದ್ದಲ್ಲಿ ಇವು ಮರುಕಳಿಸುವ ಸಾಧ್ಯತೆ ಇರುತ್ತದೆ.

ಬೊಜ್ಜು, ದೀರ್ಘಾವಧಿ ಕೆಮ್ಮು, ಮಲಬದ್ಧತೆ ಹರ್ನಿಯಾಕ್ಕೆ ಕಾರಣವಾಗಬಲ್ಲವು. ವಯಸ್ಕರಲ್ಲಿ ಸ್ನಾಯುಗಳ ಬಲ ಕುಂದುವುದರಿಂದ ಹಾಗೂ ಗರ್ಭಿಣಿಯರಲ್ಲಿ ಸ್ನಾಯುಗಳ ಮೇಲೆ ಒತ್ತಡ ಹೆಚ್ಚುವುದರಿಂದ ಹರ್ನಿಯಾ ಉಂಟಾಗಬಲ್ಲದು. ದೇಹದ ಅಂಗಾಂಗ ರಚನೆಯಲ್ಲಿ ಕೆಲ ಸ್ವಾಭಾವಿಕವಾದ ದುರ್ಬಲ ಭಾಗಗಳಿವೆ. ಕೆಲ ಆನುವಂಶೀಯ ಕಾರಣಗಳಿಂದಾಗಿ ಕೊಲಾಜೆನ್ (Collagen)ಗಳ ದುರ್ಬಲತೆಯುಂಟಾಗುತ್ತದೆ. ಸ್ನಾಯುಗಳಿಗೆ ಉಂಟಾಗುವ ಅಘಾತವೂ ಅವುಗಳನ್ನು ದುರ್ಬಲಗೊಳಿಸುತ್ತದೆ. ನರ ಹಾಗೂ ಸ್ನಾಯು ಸಂಬಂಧಿ ಕಾಯಿಲೆಗಳು ಅವುಗಳನ್ನು ನಿಶ್ಯಕ್ತಿಗೊಳಿಸುತ್ತದೆ. ಹೊಟ್ಟೆಯ ಅಂತರಿಕ ಒತ್ತಡ (Intra-abdominal pressure) ಹೆಚ್ಚಳ ಹರ್ನಿಯಾಗಳಿಗೆ ಪೂರಕವಾಗುತ್ತದೆ.

ಹರ್ನಿಯಾ ಯಾರಿಗೆ ಬರಬಹುದು?
ಹರ್ನಿಯಾ ಯಾರಲ್ಲಾದರೂ ಕಾಣಿಸಿಕೊಳ್ಳಬಹುದು. ಧೂಮಪಾನಿಗಳಲ್ಲಿ ಇದರ ಅಪಾಯ ಅಧಿಕವಾಗಿರುತ್ತದೆ. ದೀರ್ಘಕಾಲ ಧೂಮಪಾನ ಮಾಡುವವರಲ್ಲಿ ವಯಸ್ಸಾದಂತೆ ಅಲರ್ಜಿ, ಅಸ್ತಮಾ, ಕೆಮ್ಮಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಕೆಮ್ಮಿನಿಂದಾಗಿ ಹೊಟ್ಟೆಯ ಅಂತರಿಕ ಒತ್ತಡ ಹೆಚ್ಚುತ್ತದೆ. ಮಲಬದ್ಧತೆ (abd omen) ಹಾಗೂ ಪ್ರೋಸ್ಟೇಟ್ (Prostate) ಸಮಸ್ಯೆಯುಳ್ಳವರು ಮೂತ್ರ ಹಾಗೂ ಮಲ ವಿಸರ್ಜನೆಗಾಗಿ ತಿಣುಕಾಡಬೇಕಾಗುತ್ತದೆ. ಇದು ಕೂಡ ಹೊಟ್ಟೆ ಭಾಗದ ಸ್ನಾಯುಗಳ ಮೇಲೆ ಒತ್ತಡ ಹೇರುತ್ತದೆ. ಭಾರವಾದ ವಸ್ತುಗಳನ್ನು ಎತ್ತುವ ಕೆಲಸದಲ್ಲಿ ನಿರತವಾದ ಕೂಲಿಗಳಲ್ಲಿ ಮತ್ತು ಸೈನಿಕರಲ್ಲಿ ಈ ಸಮಸ್ಯೆ ಹೆಚ್ಚಾಗಿ ತಲೆದೋರುತ್ತದೆ.

ಹರ್ನಿಯಾ ವೈವಿಧ್ಯ :
ಅಂಡವಾಯು/ ಹರ್ನಿಯಾಗಳು ಸಾಮಾನ್ಯವಾಗಿ ಹೊಟ್ಟೆಯಲ್ಲಿ ಬೆಳೆಯುತ್ತವೆ ಆದರೆ ಅವು ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರಬಹುದು. ಅಂಡವಾಯುಗಳನ್ನು ಅವುಗಳ ಸ್ಥಳ, ತೀವ್ರತೆ ಅಥವಾ ಮೂಲಕ್ಕೆ ಅನುಗುಣವಾಗಿ ಹಲವಾರು ವಿಧಗಳಲ್ಲಿ ವರ್ಗೀಕರಿಸಬಹುದು
ಇಂಜಿನಲ್ ಅಂಡವಾಯು
ಕರುಳಿನ ಅಂಗಾಂಶ ಅಥವಾ ಕೊಬ್ಬಿನ ಅಂಗಾಂಶವು ತೊಡೆಯ ಮೇಲ್ಭಾಗದಲ್ಲಿರುವ ತೊಡೆಸಂದು ಪ್ರದೇಶಕ್ಕೆ ಚಾಚಿಕೊಂಡಾಗ ಇಂಜಿನಲ್ ಅಂಡವಾಯು ಸಂಭವಿಸುತ್ತದೆ. ಈ ಅಂಡವಾಯುಗಳು ಎಲ್ಲಾ ಕಿಬ್ಬೊಟ್ಟೆಯ ಅಂಡವಾಯುಗಳಲ್ಲಿ 75% ರಷ್ಟಿದೆ ಮತ್ತು ಮುಖ್ಯವಾಗಿ ಪುರುಷರ ಮೇಲೆ ಪರಿಣಾಮ ಬೀರುತ್ತದೆ.
ತೊಡೆಯೆಲುಬಿನ ಅಂಡವಾಯು
ಕಿಬ್ಬೊಟ್ಟೆಯ ವಿಷಯಗಳು ತೊಡೆಸಂದು ಪ್ರದೇಶಕ್ಕೆ ಚಾಚಿಕೊಂಡಾಗ ಸಹ ಇವು ಸಂಭವಿಸುತ್ತವೆ. ಆದಾಗ್ಯೂ, ಈ ಅಂಡವಾಯುಗಳು ಇಂಜಿನಲ್ ಅಂಡವಾಯುಗಳಿಗಿಂತ ಹೆಚ್ಚು ದುಂಡಾದವು ಮತ್ತು ಮುಖ್ಯವಾಗಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತವೆ.
ಹೊಕ್ಕುಳಿನ ಅಂಡವಾಯು
ಇಲ್ಲಿ, ನಾಭಿ ಪ್ರದೇಶದ ಬಳಿ ಹೊಟ್ಟೆಯ ಮೂಲಕ ಒಳ-ಕಿಬ್ಬೊಟ್ಟೆಯ ಅಂಗಾಂಶವು ಚುಚ್ಚುತ್ತದೆ. ಗರ್ಭಿಣಿಯರು ಮತ್ತು ಬೊಜ್ಜು ಇರುವವರಲ್ಲಿ ಈ ಅಂಡವಾಯುಗಳು ಹೆಚ್ಚಾಗಿ ಕಂಡುಬರುತ್ತವೆ.
ವಿರಾಮದ ಅಂಡವಾಯು
ಹೊಟ್ಟೆ ಅಥವಾ ಕರುಳಿನ ಭಾಗವು ಡಯಾಫ್ರಾಮ್ನ ರಂಧ್ರದ ಮೂಲಕ ಎದೆಯ ಪ್ರದೇಶಕ್ಕೆ ಚಾಚಿಕೊಂಡಾಗ ವಿರಾಮದ ಅಂಡವಾಯು ಸಂಭವಿಸುತ್ತದೆ.

ಕಡಿಮೆ ಸಾಮಾನ್ಯ ಅಂಡವಾಯುಗಳು :
ಕಡಿಮೆ ಸಾಮಾನ್ಯವಾದ ಅಂಡವಾಯುಗಳು ದೇಹದಲ್ಲಿ ಅವುಗಳ ಸ್ಥಳದ ಪ್ರಕಾರ ವರ್ಗೀಕರಿಸಲ್ಪಟ್ಟಿವೆ:
ಎಪಿಗ್ಯಾಸ್ಟ್ರಿಕ್ ಅಂಡವಾಯು :
ಹೊಟ್ಟೆಯ ಗುಂಡಿ ಮತ್ತು ಎದೆಯ ಮೂಳೆಯ ನಡುವಿನ ಪ್ರದೇಶದಲ್ಲಿ ಕೊಬ್ಬಿನ ಅಂಗಾಂಶವು ಹೊಟ್ಟೆಯ ಮೂಲಕ ಚಾಚಿಕೊಂಡಿರುತ್ತದೆ.
ಸ್ಪಿಜೆಲಿಯನ್ ಅಂಡವಾಯು :
ಕರುಳಿನ ಭಾಗವು ಹೊಟ್ಟೆಯ ಮೂಲಕ, ಹೊಟ್ಟೆಯ ಗುಂಡಿಯ ಕೆಳಗೆ ಮತ್ತು ಕಿಬ್ಬೊಟ್ಟೆಯ ಸ್ನಾಯುವಿನ ಬದಿಯಲ್ಲಿ ಚಾಚಿಕೊಂಡಿರುತ್ತದೆ.
ಸ್ನಾಯುವಿನ ಅಂಡವಾಯು :
ಸ್ನಾಯುವಿನ ತುಂಡು ಹೊಟ್ಟೆಯ ಮೂಲಕ ಚುಚ್ಚುತ್ತದೆ.
ಛೇದನದ ಅಂಡವಾಯು :
ಇದು ಸರಿಯಾಗಿ ವಾಸಿಯಾಗದ ಶಸ್ತ್ರಚಿಕಿತ್ಸಾ ಗಾಯದ ಮೂಲಕ ಅಂಗಾಂಶದ ತುಂಡು ಚಾಚಿಕೊಂಡಾಗ ಸಂಭವಿಸುತ್ತದೆ.

ಕಾರಣ ಮತ್ತು ತೀವ್ರತೆಯ ಪ್ರಕಾರ ವರ್ಗೀಕರಣ
ಅಂಡವಾಯುಗಳನ್ನು ಅವುಗಳ ಮೂಲ ಅಥವಾ ಕಾರಣಕ್ಕೆ ಅನುಗುಣವಾಗಿ ವರ್ಗೀಕರಿಸಬಹುದು. ಉದಾಹರಣೆಗೆ, ಜನ್ಮಜಾತ ಅಂಡವಾಯುಗಳು ನವಜಾತ ಶಿಶುವಿನ ಕಿಬ್ಬೊಟ್ಟೆಯ ಗೋಡೆಯ ಮೇಲೆ ಪರಿಣಾಮ ಬೀರುವ ಜನ್ಮ ದೋಷಗಳಾಗಿ ಸಂಭವಿಸುತ್ತವೆ. ಮತ್ತೊಂದೆಡೆ ಸ್ವಾಧೀನಪಡಿಸಿಕೊಂಡ ಅಂಡವಾಯುಗಳು, ವಿವಿಧ ಕಾರಣಗಳಿಗಾಗಿ ನಂತರದ ಜೀವನದಲ್ಲಿ ಬೆಳೆಯುತ್ತವೆ.

ಅಂಡವಾಯುಗಳನ್ನು ಅವುಗಳ ತೀವ್ರತೆಗೆ ಅನುಗುಣವಾಗಿ ವರ್ಗೀಕರಿಸಬಹುದು ಮತ್ತು ಉದಾಹರಣೆಗೆ ಸಂಪೂರ್ಣ ಅಥವಾ ಅಪೂರ್ಣ ಎಂದು ವಿವರಿಸಬಹುದು. ಸಂಪೂರ್ಣ ಅಂಡವಾಯು ಅಂಗಾಂಶದ ದುರ್ಬಲ ಪ್ರದೇಶದ ಮೂಲಕ ಇಡೀ ಅಂಗವು ಚಾಚಿಕೊಂಡಾಗ ಸೂಚಿಸುತ್ತದೆ, ಆದರೆ ಅಪೂರ್ಣ ಅಂಡವಾಯು ಅಂಗದ ಒಂದು ಭಾಗ ಮಾತ್ರ ಚಾಚಿಕೊಂಡಾಗ ಸೂಚಿಸುತ್ತದೆ.

ಇತರೆ ವರ್ಗೀಕರಣಗಳು
ಇಂಟ್ರಾಪ್ಯಾರಿಯಲ್ ಅಂಡವಾಯುಗಳು ಅಂಡವಾಯುಗಳು ಸಬ್ಕ್ಯುಟಿಸ್ ಅನ್ನು ತಲುಪುವುದಿಲ್ಲ ಮತ್ತು ಮಸ್ಕ್ಯುಲೋಪೋನ್ಯೂರೋಟಿಕ್ ಪದರದವರೆಗೆ ಮಾತ್ರ ಚಾಚಿಕೊಂಡಿರುತ್ತವೆ. ಈ ಅಂಡವಾಯುಗಳು ಕಡಿಮೆ ಉಬ್ಬುವಿಕೆಯನ್ನು ಉಂಟುಮಾಡಬಹುದು ಮತ್ತು ಆದ್ದರಿಂದ ಪತ್ತೆಹಚ್ಚಲು ಹೆಚ್ಚು ಕಷ್ಟವಾಗಬಹುದು.
ಆಂತರಿಕ ಅಂಡವಾಯುಗಳು ದೇಹದೊಳಗೆ ಚಾಚಿಕೊಂಡಿರುತ್ತವೆ, ಆದರೆ ಬಾಹ್ಯ ಅಂಡವಾಯುಗಳು ದೇಹದ ಹೊರಭಾಗಕ್ಕೆ ಚಾಚಿಕೊಂಡಿರುತ್ತವೆ.

ಕಡಿಮೆಗೊಳಿಸಬಹುದಾದ ಅಂಡವಾಯು ಸರಳವಾದ ಕುಶಲತೆಯನ್ನು ಬಳಸಿಕೊಂಡು ಚಾಚಿಕೊಂಡಿರುವ ಅಂಗಾಂಶವನ್ನು ಅದರ ಮೂಲ ಸ್ಥಳಕ್ಕೆ ಹಿಂತಿರುಗಿಸಬಹುದು, ಆದರೆ ಬದಲಾಯಿಸಲಾಗದ ಅಂಡವಾಯು ಹಿಂದಕ್ಕೆ ಸರಿಸಲು ಸಾಧ್ಯವಿಲ್ಲ ಎಂದು ಸೂಚಿಸುತ್ತದೆ.
ತಗ್ಗಿಸಲಾಗದ ಅಂಡವಾಯು
ಕತ್ತು ಹಿಸುಕುವುದು: ಅಂಡವಾಯುವಿನ ವಿಷಯಗಳು ಒತ್ತಡಕ್ಕೆ ಒಳಗಾಗುತ್ತವೆ ಮತ್ತು ರಕ್ತ ಪೂರೈಕೆಯು ಕೋಶಗಳ ಸಾವು ಮತ್ತು ಗ್ಯಾಂಗ್ರೀನ್‌ಗೆ ಕಾರಣವಾಗುತ್ತದೆ.
ಅಡಚಣೆ: ಕರುಳಿನ ವಿಷಯಗಳು ಇನ್ನು ಮುಂದೆ ಹರ್ನಿಯೇಟೆಡ್ ಕರುಳಿನ ಪ್ರದೇಶದ ಮೂಲಕ ಹಾದುಹೋಗಲು ಸಾಧ್ಯವಾಗುವುದಿಲ್ಲ, ಇದು ಸೆಳೆತ ಮತ್ತು ವಾಂತಿಗೆ ಕಾರಣವಾಗುತ್ತದೆ.

ಕಿಬ್ಬೊಟ್ಟೆ ಭಾಗದಲ್ಲಿ ಹೆಚ್ಚು ಕಾಣುವ ಹರ್ನಿಯಾ
ಕಿಬ್ಬೊಟ್ಟೆಯ ಭಾಗದಲ್ಲಿ ಕಾಣಿಸಿಕೊಳ್ಳುವ ಹರ್ನಿಯಾಗಳಲ್ಲಿ ಹೊಟ್ಟೆಯ ಕೊಬ್ಬಿನಂಶ, ಕರುಳು ಸಿಲುಕಬಲ್ಲದು. ಕೊಬ್ಬಿನಂಶವೂ ಸಿಲುಕಿದಾಗ ನೋವು ಉಂಟಾಗುತ್ತದೆ. ಆದರೆ ಕರುಳುಗಳು ಹೊರಜಾರಿದಾಗ ಅವುಗಳ ರಕ್ತ ಸರಬರಾಜು ಜಖಂಗೊಳ್ಳುವ ಸ್ಥಿತಿಯುಂಟಾಗುತ್ತದೆ. ರಕ್ತ ಸಂಚಲನ ಕಡಿತಗೊಂಡಾಗ ಆ ಭಾಗ ಕೊಳೆಯಲು (gangrene) ಆರಂಭವಾಗುತ್ತದೆ. ರೋಗಿಯಲ್ಲಿ ವಾಂತಿ, ಮಲಬದ್ಧತೆ, ತೀವ್ರನೋವು ಕಾಣಿಸಿಕೊಳ್ಳಬಲ್ಲದು. ಈ ಸಂದರ್ಭಗಳಲ್ಲಿ ತುರ್ತು ಶಸ್ತ್ರಕ್ರಿಯೆ ಅಗತ್ಯವಾಗುತ್ತದೆ. ಸ್ಥೂಲಕಾಯ ಹಾಗೂ ಬೊಜ್ಜು ದೇಹಿಗಳಲ್ಲಿ ಇದರ ಅಪಾಯ ಹೆಚ್ಚು. ಹರ್ನಿಯಾಗಳು ಅತಿ ಹೆಚ್ಚಾಗಿ ತೊಡೆ-ಸಂದಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಮೂಲಕ ಜಾರಿಕೊಳ್ಳುವ ಹರ್ನಿಯಾ ವೃಷಣಚೀಲ (ಪುರುಷರಲ್ಲಿ) ಮತ್ತು ಸ್ತ್ರೀಯರಲ್ಲಿ ಯೋನಿಯ ಹೊರ ಮಡಿಕೆಗಳ ತನಕವೂ ಚಾಚಬಲ್ಲದು, ತೊಡೆಸಂದಿಯ ಹರ್ನಿಯಾ ಭಾರ ಎತ್ತುವವರಲ್ಲಿ ಹಾಗೂ ವಯಸ್ಸಾದಂತೆ ಹೆಚ್ಚಾಗಿ ಕಾಣಿಸಿಕೊಳ್ಳುವ ಸಂಭವವಿರುತ್ತದೆ. ಪರುಷರಲ್ಲಿ ಹರ್ನಿಯಾಗಳು ಮಹಿಳೆಯರಿಗಿಂತಲೂ ಎರಡರಿಂದ ಮೂರು ಪಾಲು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಹೊಟ್ಟೆಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವ ಹರ್ನಿಯಾ ಹೆಚ್ಚಾಗಿ ಮಧ್ಯ ವಯಸ್ಕರಲ್ಲಿ ಸ್ನಾಯುಗಳ ದೌರ್ಬಲ್ಯದಿಂದ ತಲೆದೋರುತ್ತದೆ. ತೊಡೆಯ ಭಾಗದ ಹರ್ನಿಯಾಗಳು ಸ್ತ್ರೀಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನವಜಾತ ಹಾಗೂ ಚಿಕ್ಕ ಮಕ್ಕಳಲ್ಲೂ ಹರ್ನಿಯಾಗಳು ಕಾಣಿಸಿಕೊಳ್ಳಬಲ್ಲದು. ಹೊಕ್ಕಳಿನ ಹರ್ನಿಯಾ ಕೆಲವೊಮ್ಮೆ ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಳ್ಳುವುದು. ಮಾತ್ರವಲ್ಲದೇ ತನ್ನಿಂದ ತಾನೇ ಸ್ನಾಯುಗಳು ಬೆಳವಣಿಗೆಯಾದಂತೆ ಶಮನಗೊಳ್ಳುತ್ತವೆ. ಹಿಂದೆ ಶಸ್ತ್ರಕ್ರಿಯೆ ಆಗಿದ್ದಲ್ಲಿ ಆ ಭಾಗದ ಸ್ನಾಯುಗಳ ದುರ್ಬಲತೆಯಿಂದಾಗಿ ಹಲವಾರು ವರ್ಷಗಳ ನಂತರ ಹರ್ನಿಯಾ ಉಂಟಾಗುವ ಸಾಧ್ಯತೆ ಇರುತ್ತದೆ. ಹರ್ನಿಯಾವನ್ನು ಪತ್ತೆ ಹಚ್ಚಲು ಯಾವುದೇ ಆಧುನಿಕ ಉಪಕರಣಗಳ ಅಗತ್ಯತೆ ಇಲ್ಲ. ಆದರೆ ಹರ್ನಿಯಾಕ್ಕಿರುವ ಚಿಕಿತ್ಸೆ ಶಸ್ತ್ರಕ್ರಿಯೆಯಾದ್ದರಿಂದ ಅದಕ್ಕೆ ಪೂರ್ವತಯಾರಿಯಾಗಿ ವೈದ್ಯರು ರೋಗಿಗೆ ಕೆಲ ರಕ್ತ ತಪಾಸಣೆ. ಎಕ್ಸ್-ರೇ, ಇ.ಸಿ.ಜಿ.ಗೆ ಒಳಗಾಗುವಂತೆ ಹೇಳಬಹುದು. ಹಿಂದೆ ಬಳಸಲಾಗುತ್ತಿದ್ದ TRUSS ಎಂಬ ಪಟ್ಟಿ ಅಥವಾ ಇಲಾಸ್ಟಿಕ್ ಬ್ಯಾಂಡ್ ಹರ್ನಿಯಾಕ್ಕೆ ಪರಿಣಾಮಕಾರಿ ಚಿಕಿತ್ಸೆಯಲ್ಲ. ಅದು ಹರ್ನಿಯ ಹೊರಜಾರದಂತೆ ತಡೆಯುವ ಮಾರ್ಗ ಮಾತ್ರ.

ಹರ್ನೀಯಾ ಕಾಯಿಲೆಗೆ ಕಾರಣಗಳು:
1. ಮೆನೊಪಾಸ್ ಅಂಗಾಂಶ ದುರ್ಬಲವಾಗುವುದು
2. ಅಧಿಕ ಭಾರ ಎತ್ತುವುದು
3. ಮಲಬದ್ಧತೆ
4. ಬೊಜ್ಜು
5. ಗಾಯ
6. ನಿರಂತರ ಕೆಮ್ಮು
7. ಗರ್ಭಾವಸ್ಥೆ

ಲಕ್ಷಣಗಳು:
1. ಗಟ್ಟಿಯಾದ ಗೆಡ್ಡೆ
2. ಗಡ್ಡೆ ಅಧಿಕ ನೋವನ್ನು ನೀಡುತ್ತದೆ
3. ತಲೆ ಸುತ್ತುವುದು ಮತ್ತು ವಾಂತಿ
4. ಜ್ವರ

ಹರ್ನೀಯಾವನ್ನು 2 ರೀತಿಯಲ್ಲಿ ನಿವಾರಣೆ :
1. ಹರ್ನೀಯಾ ಯಾವ ಸ್ಥಿತಿಯನ್ನು ತಲುಪಿದೆ ಅದನ್ನು ಆಧಾರಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದರಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಅಗಾಂಶವನ್ನು ಬದಲಿ ಜೋಡಣೆ ಮಾಡಲಾಗುವುದು.
2. ಎರಡನೆ ವಿಧಾನವನ್ನು ಇತ್ತೀಚಿಗೆ ಬಳಸಲಾಗುತ್ತಿದೆ ಅದನ್ನು ಅದನ್ನು ಲಾಪ್ರೊಸ್ಕೋಪಿಕ್ ಹರ್ನೀಯಾ ರಿಪೇರಿ ಸರ್ಜರಿ ಎಂದು ಕರೆಯಲಾಗುತ್ತಿದೆ. ಕ್ಯಾಮೆರಾ ಅಳವಡಿಸಿರುವ ಸಣ್ಣಳತೆಯ ಸ್ಕೋಪ್ ಬಳಸಿ ಈ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುವುದು.

ಇದರಲ್ಲಿ ಎರಡನೆ ಮಾದರಿಯ ಶಸ್ತ್ರ ಚಿಕಿತ್ಸೆ ಮಾಡಿದರೆ ಆಪರೇಷನ್ ನಂತರ ನೋವು ಕೂಡ ಕಡಿಮೆ ಇರುತ್ತದೆ ಹಾಗೂ ಗಾಯ ಬೇಗ ಒಣಗುವುದು.

ಹರ್ನಿಯಾ ಶಸ್ತ್ರಚಿಕಿತ್ಸೆ
ಹರ್ನಿಯಾಕ್ಕೆ ಶಸ್ತ್ರಚಿಕಿತ್ಸೆಯೇ ಪರಿಹಾರ. ಆದರೆ ಯಾವ ಹರ್ನಿಯಾದ ಶಸ್ತ್ರಕ್ರಿಯೆಗೆ ಹೇಗೆ ಹಾಗೂ ಯಾವಾಗ ಮುಂದಾಗಬೇಕಾಗುತ್ತದೆ ಎಂಬುದನ್ನು ವೈದ್ಯರ ಸಲಹೆಯ ನಂತರವೇ ನಿರ್ಧರಿಸುವುದೊಳಿತು. ಈ ಬಗೆಯ ಶಸ್ತ್ರಕ್ರಿಯೆಯನ್ನು ರೋಗಿಯ ಆರೋಗ್ಯವನ್ನಾಧರಿಸಿ ಪೂರ್ಣ ಅಥವಾ ಸ್ಥಳೀಯ ಅರಿವಳಿಕೆ ನೀಡಿ ನಡೆಸಲಾಗುತ್ತದೆ. ಹರ್ನಿಯಾ ಶಸ್ತ್ರಕ್ರಿಯೆಯನ್ನು ಸಾಂಪ್ರದಾಯಕವಾದ (open) ರೀತಿಯಲ್ಲಿ ಅಥವಾ ಲ್ಯಾಪರೋಸ್ಕೋಪಿಕ್ ಮೂಲಕ ಮಾಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಹರ್ನಿಯಾ ಮರುಕಳಿಸದಂತೆ  ತಡೆಯಲು ಜಾಲರಿ (mesh) ಗಳನ್ನು ಅಳವಡಿಸಲಾಗುತ್ತದೆ. ಈ ಜಾಲರಿಗಳು ನಾನಾ ಗಾತ್ರದಲ್ಲಿ ಲಭ್ಯವಿದೆ. ಲ್ಯಾಪರೋಸ್ಕೋಪಿಕ್ ಮೂಲಕ ಮಾಡುವ ಶಸ್ತ್ರಕ್ರಿಯೆಯಲ್ಲಿರೋಗಿ ಬೇಗನೆ ಚೇತರಿಸಿಕೊಳ್ಳುತ್ತಾನೆ. ಶಸ್ತ್ರಕ್ರಿಯೆಯ ನಂತರ ರೋಗಿ 6 ರಿಂದ 8 ವಾರದವರೆಗೆ ಭಾರ ಎತ್ತಕೂಡದು. ಶಸ್ತ್ರಕ್ರಿಯೆಯೊಡನೆ ರೋಗಿಯ ಕೆಮ್ಮು. ಮಲಬದ್ಧತೆ, ಮೂತ್ರ ಸಂಬಂಧಿ ಸಮಸ್ಯೆಗಳ ಶಮನಕ್ಕೂ ಸೂಕ್ತ ವೈದ್ಯಕೀಯ ಸಲಹೆ ಪಡಯಬೇಕು. ಈ ಬಗೆಯ ಶಸ್ತ್ರಕ್ರಿಯೆಯಲ್ಲೂ ಸೋಂಕು ರಕ್ತಸ್ರಾವದ ಅಪಾಯವಿದ್ದೇ ಇರುತ್ತದೆ. ಆದರೆ ಹರ್ನಿಯಾ ಶಸ್ತ್ರಕ್ರಿಯೆಯನ್ನು ಅಲಕ್ಷಿಸದೆ ಇದನ್ನು ನಿರ್ಲಕ್ಷಿಸುತ್ತಾ ಹೋದರೆ ಅಪಾಯಕ್ಕೆ ಸಿಲುಕುವ ಸಂಭವ ಇದ್ದೇ ಇರುತ್ತದೆ. ಆದರೆ ಎಲ್ಲಾ ಹರ್ನಿಯಾಗಳಿಗೆ ಶಸ್ತ್ರಕ್ರಿಯೆ ಮಾಡಬೇಕಾದ ಅಗತ್ಯವಿಲ್ಲ. ವಯಸ್ಸು, ಹರ್ನಿಯಾದ ಗುಣಲಕ್ಷಣಗಳನ್ನಾಧರಿಸಿ ವೈದ್ಯರು ಸರ್ಜರಿಯ ಅಗತ್ಯತೆಯನ್ನು ನಿರ್ಧರಿಸುತ್ತಾರೆ. ಹರ್ನಿಯಾ ನಾವು ಭಯಪಡಬೇಕಾದ ಕಾಯಿಲೆಯಲ್ಲ, ಇದು ನಮ್ಮ ದೇಹದ ಅಂಗಾಂಗ ರಚನೆಯಲ್ಲಿ ಉಂಟಾದ ದುರ್ಬಲತೆಯಿಂದ ಉಂಟಾಗುವಂತಹದ್ದು. ಹಾಗಾಗಿ ದುರ್ಬಲತೆಯನ್ನು ನಾವು ನಿರ್ಲಕ್ಷಿಸಬಾರದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು