News Karnataka Kannada
Thursday, May 09 2024
ಆರೋಗ್ಯ

ಪ್ಯಾಕೇಜ್ಡ್ ಆಹಾರಗಳಿಂದ ಮಕ್ಕಳ ಮೇಲಾಗುವ ಪರಿಣಾಮಗಳು

Effects of packaged foods on children
Photo Credit : Pexels

ಮಕ್ಕಳಿಗೆ ನೀಡುವ ಆಹಾರದ ಬಗ್ಗೆ ಹೆತ್ತವರು ಎಷ್ಟು ಜಾಗರೂಕರಾಗಿದ್ದರೂ ಸಾಲದು. ಮಕ್ಕಳು ತಿನ್ನುವ ಆಹಾರ ಅವರ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಪ್ಯಾಕೇಜ್ಡ್ ಆಹಾರಗಳು ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಪ್ಯಾಕೇಜ್ಡ್ ಆಹಾರಗಳಲ್ಲಿ ಅದರಲ್ಲೂ ಹಣ್ಣಿನ ಜೂಸ್‍ಗಳು ತುಂಬಾ ಆರೋಗ್ಯಕರ ಎಂದು ನಂಬಿ ಮಕ್ಕಳಿಗೆ ಕುಡಿಸುತ್ತಾರೆ. ಆದರೆ ಅದರಲ್ಲಿ ಸಕ್ಕರೆಯ ಅಂಶ, ಹಾಗೂ ಹೆಚ್ಚುದಿನ ಬಾಳಿಕೆ ಬರಲು ಪ್ರಿಸರ್ವೇಟಿವ್ಸ್‍ಗಳನ್ನು ಬಳಸುತ್ತಾರೆ ಇವುಗಳನ್ನು ಬಳಸುವುದು ದೇಹದ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಕಾಕುಂಜೆ ಆಯುರ್ವೇದಿಕ್ ವೆಲ್‍ನೆಸ್ ಕ್ಲಿನಿಕ್‍ನ ವೈದ್ಯೆ ಡಾ. ಅನುರಾಧ ಹೇಳುತ್ತಾರೆ.

ಪ್ಯಾಕೇಜ್ಡ್ ಹಣ್ಣಿನ ಜೂಸ್‍ಗಳನ್ನು ನೀಡುವ ಬದಲು ಇಡೀ ಹಣ್ಣನ್ನೇ ಮಕ್ಕಳಿಗೆ ನೀಡುವುದು ಉತ್ತಮ.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ರಿಫೈನ್ಡ್ ಆಹಾರಗಳಾದ ಕೇಕ್, ಪೇಸ್ಟ್ರಿ, ಡೋನಟ್ಸ್, ಬರ್ಗರ್, ಬೇಕರಿ ಆಹಾರಗಳು ಹೆಚ್ಚಾಗಿ ಮೈದಾ ಹಿಟ್ಟಿನಿಂದ ತಯಾರಿಸಲಾಗುವುದರಿಂದ ಮಕ್ಕಳಿಗೆ ಉತ್ತಮವಲ್ಲ. ಅದರ ಬದಲು ಮಕ್ಕಳಿಗೆ ಮನೆಯಲ್ಲೆ ಗೋಧಿ ಹಿಟ್ಟು ಅಥವಾ ಅಕ್ಕಿಹಿಟ್ಟಿನಿಂದ ತಯಾರಿಸಿದ ಆಹಾರಗಳನ್ನು ನೀಡಬಹುದು.

ಹೆಚ್ಚಿನ ಪೋಷಕರು ಮಕ್ಕಳಿಗೆ ಕೇಳಿದಾಗಲೆಲ್ಲ ಐಸ್‍ಕ್ರೀಮ್, ಚಾಕೋಲೇಟ್‍ಗಳನ್ನು ನೀಡುವುದನ್ನು ಕಡಿಮೆಗೊಳಿಸುವುದು ಉತ್ತಮ. ಹಾಗೂ ಈಗಿನ ಮಕ್ಕಳಲ್ಲಿ ಉಪ್ಪಿನ ಅಂಶ ಅಗತ್ಯಕ್ಕಿಂತ ಹೆಚ್ಚು ಅವರ ದೇಹ ಸೇರುತ್ತಿದ್ದರು ಇದರಿಂದ ಸಣ್ಣ ವಯಸ್ಸಿನಲ್ಲೆ ಕಿಡ್ನಿ ಸಮಸ್ಯೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುತ್ತವೆ.

ಚಿಪ್ಸ್, ಸೇರಿದಂತೆ ಪ್ಯಾಕೇಜ್ಡ್ ಆಹಾರಗಳಲ್ಲಿ ಆಹಾರಕ್ಕೆ ಬೇಕಾಗುವಷ್ಟು ಉಪ್ಪಿನ ಜೊತೆಗೆ ಹಲವಾರು ಭಿನ್ನ ವಿಧಾನಗಳಲ್ಲಿ ಉಪ್ಪು ದೇಹವನ್ನು ಸೇರುತ್ತಿದೆ.
5ರಿಂದ 6 ವರ್ಷಗಳ ನಂತರದ ಮಕ್ಕಳಿಗೆ ನಾಲ್ಕು ಹೊತ್ತಿನ ಆಹಾರದ ಅಭ್ಯಾಸ ಮಾಡುವುದು ಸಹ ಮಕ್ಕಳ ಜೀರ್ಣ ಕ್ರಿಯೆಗೆ ಬಹಳ ಉಪಕಾರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು