News Karnataka Kannada
Wednesday, May 01 2024
ಆರೋಗ್ಯ

ಬೀದರ್: ಇನ್ಪೂಯೆಂಜಾ, ಫ್ಲೂ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ವಹಿಸಿ

The public should be aware of the influenza, flu pandemic
Photo Credit : News Kannada

ಬೀದರ್: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕೋವಿಡ್-19 (ಋತುಮಾನದ ಇನ್ಪೂಯೆಂಜಾ/ಫ್ಲೂ) ಪ್ರಕರಣಗಳು ಹೆಚ್ಚಳವನ್ನು ಗಮನಿಸಲಾಗಿದೆ. ಜಿಲ್ಲೆಯಲ್ಲಿ ಇನ್ಪೂಯೆಂಜಾ /ಫ್ಲೂ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಾರ್ವಜನಿಕರು ಕೆಲವು ಸಲಹೆಗಳನ್ನು ಅನುಸರಿಸುವುದು ಸೂಕ್ತ.

ಋತುಮಾನ ಫ್ಲೂ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಜ್ವರ ಹೊಂದಿರುವ ವ್ಯಕ್ತಿಯು ಕೆಮ್ಮು ಅಥವಾ ಸೀನಿದಾಗ ತುಂತುರ ಹನಿಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.

ಸ್ವಯಂ ನಿಯಂತ್ರಣಕ್ಕೆ ಬರುವ ಈ ಸಾಂಕ್ರಾಮಿಕ ರೋಗ 5ರಿಂದ 7 ದಿನಗಳ ವರೆಗೆ ಇದ್ದು, ಅತ್ಯಂತ ಕಡಿಮೆ ರೋಗ ಸ್ಥಿತಿ ಹಾಗೂ ಮರಣಗಳನ್ನು ಉಂಟುಮಾಡುವಂತಹದಾಗಿದೆ. ಶಿಶುಗಳು, ವಯಸ್ಸಾದವರು, ಹಿರಿಯರು , ಗರ್ಭೀಣಿಯರು ಮತ್ತು ರೋಗ ನಿರೋಧಕ ಶಕ್ತಿ ಕುಂಟಿತಗೊಂಡಿರುವವರು ಮತ್ತು ದೀರ್ಘಕಾಲದವರೆಗೆ ಔಷಧಗಳನ್ನು ಅದರಲ್ಲೂ ನಿರ್ದಿಷ್ಟವಾಗಿ ಸ್ಟಿರಾಯಿಡ್‌ಗಳನ್ನು ತೆಗೆದುಕೊಳ್ಳುತ್ತಿರುವವರು ಗಂಡಾಂತರದಲ್ಲಿರುವ ಜನ ಸಮೂಹದವರಾಗಿರುತ್ತಾರೆ. ಕೆಲವರಿಗೆ ಆಸ್ಪತ್ರೆಗಳಿಗೆ ದಾಖಲಾಗಬೇಕಾದ ಅವಶ್ಯಕತೆ ಇರುತ್ತದೆ.ಜ್ವರ, ಚಳಿ, ಹಸಿವಾಗದಿರುವಿಕೆ, ಮೈ-ಕೈ ನೋವು, ವಾಕರಿಕೆ, ಸೀನುವಿಕೆ ಮತ್ತು ಬಹುದಿನಗಳ ಒಣ ಕೆಮ್ಮು ಹಾಗೂ ಹಟತ್ ಅಸ್ವಸ್ತತೆಗೆ ಒಳಗಾಗುವವರು. ಈ ರೋಗದ ಸಾಮಾ.ನ್ಯ ಲಕ್ಷಣಗಳಾಗಿದ್ದು, ಹೆಚ್ಚಿನ ಗಂಡಾಂತರದಲ್ಲಿರುವ ಜನ ಸಮೂಹದವರಿಗೆ ಈ ಲಕ್ಷಣಗಳು 3 ವಾರದವರೆಗೂ ಕಾಣಿಸಿಕೊಳ್ಳಬಹುದು.

ಈ ನಿಟ್ಟಿನಲ್ಲಿ ಇನ್‌ಫ್ಲೂಯೆಂಜಾ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಾರ್ವಜನಿಕರಿಗೆ ಅನುಸರಿಸಬೇಕಾದ ಕ್ರಮಗಳ ವಿವರ: ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಅಥವಾ ಟಿಶ್ಯೂ ಕಾಗದದಿಂದ ಮುಚ್ಚಿಕೊಳ್ಳುವುದು.

ವ್ಯಕ್ತಿಯಿಂದ ಕನಿಷ್ಟ ಒಂದು ಮೀಟರ್ ದೂರ ಇರುವುದು. ಕೈಗಳನ್ನು ಸಾಬೂನುನಿಂದ ಅಥವಾ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳುವುದು. ಅಗತ್ಯವಿಲ್ಲದೇ ಕಣ್ಣು, ಮೂಗು ಮತ್ತು ಬಾಯಿಯನ್ನು ಕೈ ತೊಳೆದುಕೊಳ್ಳದೇ ಮುಟ್ಟಬಾರದು. ಅತಿಯಾದ ಜನ ಸಂದಣೆ ಇರುವ ಸ್ಥಳಗಳಿಗೆ ಹೋಗುವುದನ್ನು ತಪಿಸುವುದು ಹಾಗೂ ಹೋಗಲೇಬೇಕಾದಲ್ಲಿ ಮುಖಗವಸು (ಮಾಸ್ಕ್) ಬಳಸುವುದು. ಫ್ಲೂ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳಿಂದ ಕನಿಷ್ಟ ದೂರ ಇರುವಂತೆ ಎಚ್ಚರಿವಹಿಸುವುದು.

ಚೆನ್ನಾಗಿ ನಿಂದೆ ಮಾಡುವುದು, ದೇಹಿಕ ಚಟುವಟಿಕೆಯಿಂದ ಇರುವುದು ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಹಾಗೂ ಸಾಕಷ್ಟು ನೀರನ್ನು ಕುಡಿಯುವುದು ಮತ್ತು ಪೌಷ್ಠಿಕ ಆಹಾರವನ್ನು ಸೇವಿಸುವುದು.

ಸಾರ್ವಜನಿಕರು ಮಾಡಬಾರದ ಕ್ರಿಯೆಗಳ ವಿವರ: ಹಸ್ತ ಲಾಘವ, ಆಲಿಂಗನ ಮತ್ತು ಚುಂಬನದ ಮೂಲಕ ಶುಭಕೋರುವುದು. ರಸ್ತೆಗಳಲ್ಲಿ / ಜನರಿರುವ ಪ್ರದೇಶಗಳಲ್ಲಿ ಉಗುಳದಿರುವುದು.

ವೈದ್ಯರ ಸಲಹೆ ಇಲ್ಲದೇ ಔಷಧಿಗಳನ್ನು / ಆಂಟಿಬಾಯೋಟಿಕ್ ಮಾತ್ರೆಗಳನ್ನು ತೆಗೆದುಕೊಳ್ಳುವುದು. ಅನಾವಶ್ಯಕವಾಗಿ ಜನಸಂದಣಿ ಇರುವ ಪ್ರದೇಶಗಳಿಗೆ ಭೇಟಿ ನೀಡುವುದು.

ನಿಮ್ಮಗೆ ಇನ್ಫೂಯೆಂಜಾ ಮತ್ತು ಫ್ಲೂ ಇದೆ ಎಂದು ಭಾವಿಸಿದರೆ; ಜ್ವರ, ಶೀತ, ಅಸ್ವಸ್ಥತೆ, ಹಸಿವೆಯಿಲ್ಲದಿರುವುದು, ಮೈಕೈ ನೋವು, ವಾಕರಿಕೆ, ಸೀನುವಿಕೆ ಹಾಗೂ ದೀರ್ಘಕಾಲಕ ಒಣ ಕೆಮ್ಮು ಇತ್ಯಾದಿ ಇನ್ಫೂಯೆಂಜಾ ರೋಗದ ಸಾಮಾನ್ಯ ಲಕ್ಷಣಗಳಾಗಿದ್ದು, ಈ ರೀತಿಯ ಲಕ್ಷಣಗಳು ಹೆಚ್ಚಾದಲ್ಲಿ ನಿರ್ಲಕ್ಷಮಾಡದೆ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವುದು.

ವೈದ್ಯರು ಸಲಹೆ ಮಾಡಿದರೆ ಮನೆಯಲ್ಲಿಯೇ ಇರಿ, ಪ್ರಯಾಣಿಸಬೇಡಿ ಅಥವಾ ಕೆಲಸ/ಶಾಲೆಗೆ ಹೋಗಬೇಡಿ ಮುಖಗವಸು (ಮಾಸ್ಕ್) ಬಳಸುವುದು. ನಿಮ್ಮ ರೋಗ ಲಕ್ಷಣಗಳು ಪ್ರಾರಂಭವಾದ ನಂತರ ಕನಿಷ್ಟ 7 ದಿನಗಳವರೆಗೆ ಅಥವಾ ನಿಮ್ಮಗೆ 24 ಗಂಟೆಗಳ ಕಾಲ ರೋಗ ಲಕ್ಷಣಗಳದಿಲ್ಲದಿರುವವರೆಗೆ (ಯಾವುದು ದೀರ್ಘಾವಧಿಯೋ ಅದು) ಇತರರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು