ವಾಷಿಂಗ್ಟನ್: ರಿಪಬ್ಲಿಕನ್ ಪಕ್ಷದ ಪ್ರಾಬಲ್ಯ ಹೊಂದಿರುವ ಯುಎಸ್ ಕಾಂಗ್ರೆಸ್, ಕೋವಿಡ್ 19 ರ ಮೂಲದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಲು ರಾಷ್ಟ್ರೀಯ ಗುಪ್ತಚರ ನಿರ್ದೇಶಕರಿಗೆ ಅನುವು ಮಾಡುವಂತೆ ಕೇಳುವ ಮಸೂದೆಯನ್ನು ಅಂಗೀಕರಿಸಿದೆ. ಅಲ್ಲದೆ ಬಿಲ್ ಅನುಮೋದನೆಗೆ ಅಧ್ಯಕ್ಷ ಜೋ ಬಿಡನ್ ಅವರಿಗೆ ಕಳುಹಿಸಲಾಗಿದೆ.
ಚೀನಾದ ಹುಬೈ ಪ್ರಾಂತ್ಯದ ವುಹಾನ್ ಲ್ಯಾಬ್ನಿಂದ ಸೋರಿಕೆ ಅಥವಾ ಆಕಸ್ಮಿಕವಾಗಿ ಬಿಡುಗಡೆಯಾದ ವೈರಸ್ ಪ್ರಪಂಚದಾದ್ಯಂತ 5 ಮಿಲಿಯನ್ ಜನರನ್ನು ಕೊಂದಿತು.
ಲ್ಯಾಬ್ನ ಮಹಿಳಾ ತಂತ್ರಜ್ಞರೊಬ್ಬರು ವೈರಸ್ ಲ್ಯಾಬ್ನಿಂದ ಸೋರಿಕೆಯಾಗಿದೆ ಎಂದು ಹೇಳಿದ್ದರು. ನಂಗತರ ಆಕೆ ಕಣ್ಮರೆ ಆದ ಘಟನೆ ನಡೆದಿತ್ತು. ಬಳಿಕ ವಿಶ್ವಸಂಸ್ಥೆ ಆರೋಗ್ಯ ವಿಭಾಗ ವೈರಸ್ ಲ್ಯಾಬ್ನಿಂದ ಸೋರಿಕೆಯಾಗಿದೆ ಎಂದು ಒಪ್ಪಿಕೊಂಡಿತ್ತು.
ಯುಎಸ್ ಮಾಧ್ಯಮದ ತನಿಖೆಗಳು ವುಹಾನ್ ಲ್ಯಾಬ್ ಗೆ ಯುಎಸ್ ಸರ್ಕಾರದಿಂದ ಜೆನೆಟಿಕ್ ಎಂಜಿನಿಯರಿಂಗ್ ಪ್ರಯೋಗಗಳಿಗೆ ಹಣವನ್ನು ನೀಡಲಾಗಿತ್ತು ಎಂದು ಬಹಿರಂಗವಾಗಿತ್ತು.