News Karnataka Kannada
Sunday, April 28 2024
ವಿಶೇಷ

ಗ್ಯಾಸ್​​​ ಗೀಸರ್​ ಬಳಸೋ ಮುನ್ನ ಹುಷಾರ್​!

Gas Geyser
Photo Credit : News Kannada

ಬೆಳಗ್ಗೆ ಹೊತ್ತು ಎದ್ದ ತಕ್ಷಣ ಬಿಸಿ ಬಿಸಿ ನೀರನ್ನು ಎಲ್ಲರೂ ಸ್ನಾನ ಮಾಡುತ್ತಾರೆ. ಆದರೆ ಇತ್ತಿಚಿನ ಜೀವನ ಶೈಲಿಗೆ ಒಗ್ಗಿಕೊಂಡ ಸಿಟಿ ಜನರು ಹೆಚ್ಚಾಗಿ ಗೀಜರ್‌ ಬಳಸಿ ನೀರು ಕಾಯಿಸುತ್ತಾರೆ. ಇದರಿಂದ ಸಮಯ ಉಳಿಯುವುದು ಎಷ್ಟು ಸತ್ಯವೋ ಆರೋಗ್ಯದ ಮೇಲೂ ಅಷ್ಟೇ ಪರಿಣಾಮ ಬೀರುತ್ತದೆ.

ಗ್ಯಾಸ್ ಗೀಜರ್‌ಗಳನ್ನು ಆನ್ ಮಾಡಿದಾಗ ನೀರನ್ನು ಬಿಸಿ ಮಾಡುವುದಕ್ಕೆ ಅದು ಸಂಪೂರ್ಣ ಆಮ್ಲಜನಕವನ್ನು ಬಳಸಿಕೊಂಡು ಕಾರ್ಮೋನ್ ಮೊನಾಕ್ಸೈಡ್ ಅನ್ನು ಬಿಡುಗಡೆ ಮಾಡುತ್ತದೆ. ಈ ವೇಳೆ ಲೀಕ್ ಆದ ಸಂದರ್ಭದಲ್ಲಿ ಒಳಗಿರುವ ವ್ಯಕ್ತಿಗಳು ಕೆಲವೇ ನಿಮಿಷಗಳಲ್ಲಿ ಉಸಿರುಗಟ್ಟಿ ಸಾವನ್ನಪ್ಪುತ್ತಾರೆ. ಈ ಗ್ಯಾಸ್ ತುಂಬಾ ಅಪಾಯಕಾರಿ. ಈ ಗ್ಯಾಸ್ ಉಸಿರನ್ನು ತೆಗೆದುಕೊಂಡ ಮರುಕ್ಷಣವೇ ಪ್ರಜ್ಞೆ ತಪ್ಪಿ ಬೀಳುತ್ತಾರೆ. ತಕ್ಷಣ ಗುರುತಿಸಿ ವೈದ್ಯರಿಗೆ ತೋರಿಸಿದರೆ ಜೀವ ಉಳಿಸುವ ಸಾಧ್ಯತೆ ಇರುತ್ತದೆ. ಮೈಮರೆತರೆ ಈ ಮಹಿಳೆಯಂತೆ ಜೀವ ಕಳೆದುಕೊಳ್ಳಬೇಕಾಗುತ್ತದೆ.

ಗಾಳಿ ಬರುವ ಸ್ನಾನಗೃಹದಲ್ಲಿ ಬಳಸಬೇಕು ಗ್ಯಾಸ್​​​ ಗೀಸರ್:
ಹಿಂದೆ, ಗ್ಯಾಸ್ ಗೀಸರ್‌ಗಳ ಬಳಕೆಯು ಮೂರ್ಚೆ ರೋಗಕ್ಕೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವೊಮ್ಮೆ ಉಸಿರುಗಟ್ಟುವಿಕೆಯಿಂದ ಸಾವಿಗೂ ಕಾರಣವಾಗಬಹುದು ಎಂದು ಹೇಳುತ್ತಾರೆ. ಅದಕ್ಕಾಗಿಯೇ ವೈದ್ಯರು ಚೆನ್ನಾಗಿ ಗಾಲಿ ಬರಲು ಕಿಟಕಿಯಿರುವ ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್ ಅನ್ನು ಅಳವಡಿಸಲು ಶಿಫಾರಸು ಮಾಡುತ್ತಾರೆ.

ಗ್ಯಾಸ್​ ಗೀಸರ್​ ಬಳಕೆಯಿಂದಾಗುವ ಅಪಾಯ:
ಗ್ಯಾಸ್​ ಗೀಸರ್​ ಲೀಕ್​ನಿಂದ ಕೆಲವು ಸಂದರ್ಭಗಳಲ್ಲಿ ಶಾಶ್ವತವಾಗಿ ಮೆದುಳಿಗೆ ಅಪಾಯ ಉಂಟಾಗುವ ಸಂಭವವಿದೆ ಎಂದು ತಜ್ಞರು ಹೇಳಿದ್ದಾರೆ. ಆದಾಗ್ಯೂ, ಕೆಲವು ತಿಂಗಳುಗಳವರೆಗೆ ಬಳಸುವ ಆಂಟಿ-ಸೀಜರ್ ಔಷಧಿಗಳೊಂದಿಗೆ ಚಿಕಿತ್ಸೆ ನೀಡಬಹುದು. ಐದು ನಿಮಿಷಗಳವರೆಗೆ ಶ್ವಾಸ ಮಾಡುವುದರಿಂದ ಮೊದಲು ತಲೆತಿರುಗಬಹುದು. ಹೆಚ್ಚು ಸಮಯ ಗ್ಯಾಸ್​ ಫೀಲ್ ಮಾಡಿ ಮೊದಲು ಪ್ರಜ್ಞೆ ಕಳೆದುಕೊಳ್ಳುತ್ತಾರೆ. ಆ ನಂತರ ಉಸಿರಾಡಲು ಸಾಧ್ಯವಾಗದೇ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ.

ಗ್ಯಾಸ್​ ಗೀಸರ್​ನಿಂದ ಹೊರಬರುವ ಅನಿಲವು ವ್ಯಕ್ತಿಯನ್ನು ಪ್ರಜ್ಞಾಹೀನರನ್ನಾಗಿ ಮಾಡುತ್ತದೆ ಮತ್ತು ಕೋಮಾದಂತಹ ಸ್ಥಿತಿಗೆ ತಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಅನಿಲವು ದೇಹಕ್ಕೆ ಆಮ್ಲಜನಕವನ್ನು ಪೂರೈಸುವ ಕೆಂಪು ರಕ್ತ ಕಣಗಳ ಮೇಲೆ ದಾಳಿ ಮಾಡುತ್ತದೆ. ನಾವು ಉಸಿರಾಡುವಾಗ, ಹಿಮೋಗ್ಲೋಬಿನ್ ಆಮ್ಲಜನಕದೊಂದಿಗೆ ಬೆರೆಯುತ್ತದೆ. ಇದರ ಸಹಾಯದಿಂದ, ಆಮ್ಲಜನಕವು ಶ್ವಾಸಕೋಶದ ಮೂಲಕ ದೇಹದ ಉಳಿದ ಭಾಗಗಳಿಗೆ ಹಾದುಹೋಗುತ್ತದೆ.

ಆಮ್ಲಜನಕ ಪೂರೈಕೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದಾಗ, ಹೃದಯ ಬಡಿತದಲ್ಲಿ ಹೆಚ್ಚಳ, ಕಡಿಮೆ ದೇಹದ ಉಷ್ಣತೆ, ವಾಂತಿ, ಕಡಿಮೆ ರಕ್ತದೊತ್ತಡ, ವಾಕರಿಕೆ, ಹೆದರಿಕೆ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಉಂಟಾಗುತ್ತದೆ.

ಜನರಿಗೆ ಇಂದು ಇದ್ದಕ್ಕಿದ್ದಂತೆ ತಲೆಸುತ್ತು ಬರುವುದು, ಪಾರ್ಶ್ವವಾಯು ಸಮಸ್ಯೆ ಎದುರಾಗುವುದು, ಕಾರ್ಡಿಯೋ ವ್ಯಾಸ್ಕುಲರ್ ಸಮಸ್ಯೆ ಕಂಡು ಬರುವುದು ಇವೆಲ್ಲವೂ ಗ್ಯಾಸ್‌ ಗೀಜರ್‌ನಿಂದಲೂ ಬರಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ.

ಗ್ಯಾಸ್ ಗೀಸರ್ ಸಿಂಡ್ರೋಮ್ ತಡೆಗಟ್ಟುವ ಕ್ರಮಗಳು: 
ಈ ಸರಳ ಗೃಹೋಪಯೋಗಿ ಉಪಕರಣವನ್ನು ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಸರಿಯಾಗಿ ಬಳಸದಿದ್ದರೆ, , ಅಪಾಯಕಾರಿ ಮತ್ತು ನರವೈಜ್ಞಾನಿಕ ಪರಿಸ್ಥಿತಿಗಳನ್ನು ನಿಷ್ಕ್ರಿಯಗೊಳಿಸಬಹುದು. ಹೀಗಾಗಿ ಸೂಕ್ತ ಮುನ್ನೆಚ್ಚರಿಕೆ ಅಗತ್ಯ. ಬಾತ್‌ ರೂಮ್ ಬಳಸುವಾಗ ಪ್ರತಿ ಬಾರಿ ಎಕ್ಸಾಸ್ಟ್ ಫ್ಯಾನ್ ಅನ್ನು ಆನ್ ಮಾಡಿ. ಗೀಸರ್‌ನ್ನು ಆಗಾಗ ತಪಾಸಣೆಗೆ ಒಳಪಡಿಸಿ. ಗೀಸರ್ ನಿರಂತರವಾಗಿ ಚಾಲನೆಯಲ್ಲಿರಬಾರದು, ಪ್ರತಿ ಬಳಕೆಯ ನಡುವೆ ಅಂತರವಿರಲಿ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು