News Karnataka Kannada
Saturday, May 18 2024
ಆರೋಗ್ಯ

ಹಾಲಿನ ಜೊತೆ ಈ ಆಹಾರಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದು

food_milk
Photo Credit : Wikipedia

ಮೀನು ಮತ್ತು ಹಾಲು ಎರಡೂ ಕೂಡ ಆರೋಗ್ಯ ವೃದ್ಧಿ ಉತ್ತಮ ಆಹಾರಗಳು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಮೀನು ಮತ್ತು ಹಾಲು ಎರಡನ್ನೂ ಒಟ್ಟಿಗೆ ತಿನ್ನುವುದು ನಿಮ್ಮ ಜೀರ್ಣಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು.

ಹಾಲು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ ಆದರೆ ಬಾಳೆಹಣ್ಣಿನಲ್ಲಿ ಪಿಷ್ಟವಿದೆ. ಆದ್ದರಿಂದ, ನೀವು ಈ ಎರಡನ್ನು ಒಟ್ಟಿಗೆ ಸೇವಿಸಿದರೆ, ಅದು ಜೀರ್ಣಕಾರಿ ಸಮಸ್ಯೆಗಳು, ಹೊಟ್ಟೆ ಉಬ್ಬರ, ಆಯಸದಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು. ಹಾಗಾಗಿ, ಬಾಳೆಹಣ್ಣು ಮತ್ತು ಹಾಲನ್ನು ಅಪ್ಪಿತಪ್ಪಿಯೂ ಸಹ ಒಟ್ಟಿಗೆ ಸೇವಿಸಲೇ ಬಾರದು.

ಹಾಲು ಮತ್ತು ಕರಬೂಜ ಹಣ್ಣನ್ನು ಒಟ್ಟಿಗೆ ಸೇವಿಸುವುದರಿಂದಲೂ ಅನಾರೋಗ್ಯ ಕಾಡಬಹುದು. ಇದು ವಾಕರಿಕೆ, ವಾಂತಿಯ ಜೊತೆಗೆ ಜೀರ್ಣಾಂಗ ವ್ಯವಸ್ಥೆಯೂ ಹದಗೆಡಬಹುದು. ಮೂಲಂಗಿ ಮತ್ತು ಹಾಲನ್ನು ಒಟ್ಟಿಗೆ ತಿನ್ನುವುದರಿಂದ ಉದರ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಹಾಲಿನೊಂದಿಗೆ ಕಿತ್ತಳೆ, ನಿಂಬೆ ಅಥವಾ ದ್ರಾಕ್ಷಿಯಂತಹ ಸಿಟ್ರಸ್ ಹಣ್ಣುಗಳನ್ನು ತಿನ್ನುವುದರಿಂದ ಇದು ಗ್ಯಾಸ್, ಎದೆಯುರಿ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ಹಾಗಾಗಿ ಸಿಟ್ರಸ್ ಹಣ್ಣುಗಳೊಂದಿಗೆ ಎಂದಿಗೂ ಕೂಡ ಹಾಲನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ.

ನಮ್ಮ ಆರೋಗ್ಯಕರ ಜೀವನಕ್ಕೆ ನಾವು ಯಾವುದೇ ಆಹಾರವನ್ನು ಸದಾ ಅದು ಹೇಗಿರುವುದೋ ಹಾಗೆ ಸೇವಿಸಿದರೆ ಉತ್ತಮ. ಹಾಲಿನ ವಿಷಯದಲ್ಲೂ ಅಷ್ಟೇ. ತಾಜಾ ಹಸುವಿನ ಹಾಲನ್ನು ಮೇಲೆ ಹೇಳಿದ ಯಾವುದೇ ಪದಾರ್ಥಗಳ ಜೊತೆ ಮಿಶ್ರಣ ಮಾಡದೇ ಹಾಗೆ ಕುಡಿಯಬೇಕು. ರುಚಿಯ ವಿಷಯದಲ್ಲಿ ಬೇಕಾದರೆ ಸ್ವಲ್ಪ ಹಸಿ ಜೇನುತುಪ್ಪ, ಬೆಲ್ಲ ಅಥವಾ ಸಕ್ಕರೆಯನ್ನು ಸೇರಿಸಿ ಸವಿಯಬಹುದು. ಇವುಗಳಲ್ಲಿ ಯಾವುದಾದರೂ ಒಂದು ಮಾತ್ರ ಹಾಲಿನ ಜೊತೆ ಮಿಶ್ರಣ ಮಾಡಿದರೆ ಒಳ್ಳೆಯದು. ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಬೇಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು