News Karnataka Kannada
Monday, April 29 2024
ಆರೋಗ್ಯ

ಗರ್ಭಿಣಿಯರು ಆ ತಪ್ಪುಗಳನ್ನು ಮಾಡಲೇ ಬೇಡಿ…!

Pregnent
Photo Credit : News Kannada

ಜೀವನದಲ್ಲಿ ಹೆಣ್ಣು ಗರ್ಭಿಣಿ ಆಗುವುದು ತನ್ನ ಜೀವನದ ಅಮೂಲ್ಯ ಕ್ಷಣ. ಅದೊಂದು ರೀತಿಯಲ್ಲಿ ಆಕೆಗೆ  ಮರು ಹುಟ್ಟು ಎಂದರೂ ತಪ್ಪಾಗಲಾರದು. ಹೀಗಾಗಿ ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯದತ್ತ ಹೆಚ್ಚಿನ ಗಮನಹರಿಸಬೇಕಾಗುತ್ತದೆ.

ಬಹಳಷ್ಟು ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯದತ್ತ ಕಾಳಜಿ ವಹಿಸುವುದು ಕಡಿಮೆ. ಅವರು ಮೊದಲು ಹೇಗಿದ್ದೆವೋ  ಹಾಗೆಯೇ ಇರಬೇಕೆಂದು ಬಯಸುತ್ತಾರೆ. ಅವರಿಗೆ ತನ್ನ ಗರ್ಭದಲ್ಲಿ ಮತ್ತೊಂದು ಜೀವವಿದೆ. ಅದು ತನ್ನ ಆರೋಗ್ಯವನ್ನು ಅವಲಂಭಿಸಿದೆ ಎಂಬ ಅರಿವೇ ಇರುವುದಿಲ್ಲ.

ಅದಕ್ಕೆ ಹೇಳಿದ್ದು ಗರ್ಭಿಣಿ ಮಹಿಳೆಯರು ಅದೊಂದನ್ನು ಮಾಡಬೇಡಿ ಅಂಥ.. ಅದು ಏನೆಂದರೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು. ಗರ್ಭಿಣಿ ಆಗುವ ಮುನ್ನ ಹೇಗಿದ್ದರೂ ನಡೆಯುತ್ತದೆ. ಆದರೆ ಗರ್ಭಾವಸ್ಥೆಯ ದಿನಗಳಲ್ಲಿ ಹಾಗಿರಲು ಸಾಧ್ಯವಿಲ್ಲ.  ಅದರಲ್ಲೂ ಆಹಾರ ಸೇವನೆ ವಿಚಾರದಲ್ಲಿ ಒಂದಷ್ಟು ಕಟ್ಟು ನಿಟ್ಟನ್ನು ಪಾಲಿಸಲೇ ಬೇಕಾಗುತ್ತದೆ.

ಗರ್ಭಾವಸ್ಥೆಯ ಅವಧಿಯಲ್ಲಿ ಆಕೆಗೆ ಪೌಷ್ಠಿಕ ಆಹಾರದ ಅಗತ್ಯತೆ ಹೆಚ್ಚಿರುತ್ತದೆ. ಕೇವಲ ಹೊಟ್ಟೆ ತುಂಬಿ ಹಸಿವು ನೀಗಿದರಷ್ಟೆ ಸಾಲದು. ಸೇವಿಸಿದ ಆಹಾರ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವಂತಿರಬೇಕು. ಈ ಸಂದರ್ಭದಲ್ಲಿ ಬಾಯಿ ರುಚಿಗಿಂತ ಅದು ದೇಹದ ಮೇಲೆ ಬೀರುವ ಪರಿಣಾಮವನ್ನು ಅರಿತು ಆರೋಗ್ಯದಾಯಕ ಪೌಷ್ಠಿಕಾಂಶ ಹೊಂದಿದ ಆಹಾರವನ್ನೇ   ಸೇವಿಸ ಬೇಕಾಗುತ್ತದೆ. ಇದರಿಂದ ತಾನು ಆರೋಗ್ಯವಾಗಿದ್ದು, ಆರೋಗ್ಯವಂತ ಶಿಶುವಿಗೆ ಜನ್ಮ ನೀಡಲು ಮತ್ತು ಮುಂದೆ ಹಾಲುಣಿಸಲು ಸಾಧ್ಯವಾಗುತ್ತದೆ. ಇನ್ನು ಗರ್ಭದಲ್ಲಿ ಬೆಳೆಯುವ ಮಗು ಮತ್ತು ತಾಯಿಯ ಅಂಗಾಂಶ ಪೋಷಣೆಯನ್ನು ಕೇಳುವುದರಿಂದ ಪೋಷಕಾಂಶಯುಕ್ತ ಆಹಾರ ಸೇವನೆ ಅಗತ್ಯವಾಗಿ ಮಾಡಲೇ ಬೇಕಾಗುತ್ತದೆ.

ಗರ್ಭಿಣಿ ಮಹಿಳೆಯರು ವೈದ್ಯರ ಸಲಹೆ ಪಡೆದು ಅವರು ಹೇಳಿದಂತೆ ತರಕಾರಿ, ಹಾಲು, ಮೊಟ್ಟೆ, ಹಣ್ಣು ಇನ್ನಿತರ ದೇಹಕ್ಕೆ ಪೋಷಕಾಂಶ ಒದಗಿಸುವ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು ಆದರೆ ಯಾವುದೇ ಕಾರಣಕ್ಕೂ ಆಹಾರ ಸೇವನೆಯಲ್ಲಿ  ಉದಾಸೀನತೆ ತೋರುವುದಾಗಲೀ, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದಾಗಲೀ ಮಾಡಬಾರದು.

ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರ ಆರೋಗ್ಯದ ಮೇಲೆ ಹಲವು ಬಗೆಯ ಅನುವಂಶೀಯ, ಸಾಮಾಜಿಕ, ಆರ್ಥಿಕ ಸಂಗತಿಗಳು, ಸೋಂಕು, ವಾತಾವರಣದ ಸ್ಥಿತಿಗತಿಗಳು ಎಲ್ಲವೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಆ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ  ಅದು ತಾಯಿ ಮತ್ತು ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರತಿಯೊಂದು ವಿಚಾರದಲ್ಲಿಯೂ ತುಂಬಾ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಗರ್ಭದಲ್ಲಿ ಬೆಳೆಯುವ ಮಗು ತನ್ನ ಬೆಳವಣಿಗೆಗೆ ಬೇಕಾದ ಆಹಾರವನ್ನು ತಾಯಿಯ ದೇಹದಿಂದ ಪಡೆದುಕೊಳ್ಳುತ್ತದೆ. ಆದ್ದರಿಂದ ತಾಯಿ ಆಹಾರ ಸೇವನೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಮಗುವಿಗೆ ಪೌಷ್ಠಿಕ ಆಹಾರದ ಕೊರತೆಯುಂಟಾಗಿ ಅದು  ತಾಯಿಯನ್ನು ಸಂಕಷ್ಟಕ್ಕೀಡು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಗರ್ಭಿಣಿಯು ಗರ್ಭಧಾರಣೆಯ ಒಂಬತ್ತು ತಿಂಗಳ ಅವಧಿಯಲ್ಲಿ ಗಳಿಸುವ ತೂಕ 10 ರಿಂದ 14 ಕೆಜಿ ಇರಬೇಕು. ಅದರಲ್ಲೂ ಸರಾಸರಿ 12 ಕೆಜಿ ಇರಲೇ ಬೇಕಂತೆ. ಇದು ಸಾಧ್ಯವಾಗಬೇಕಾದರೆ ಆಹಾರ ಸೇವನೆ ವಿಚಾರದಲ್ಲಿ ಗರ್ಭಿಣಿಯರು ನಿರ್ಲಕ್ಷ್ಯ ಮಾಡಲೇ  ಬಾರದು. ಇದು ನೆನಪಿರಲಿ..

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು